ಬುಧವಾರ, ಜೂನ್ 16, 2021
21 °C

‘ಲೋಕಸಭಾ ಚುನಾವಣೆ–ಎಚ್ಚರಿಕೆ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದ ಹಿತದೃಷ್ಟಿ­ಯನ್ನು ಗಮನಿಸಿ ಈ ಬಾರಿಯ ಲೋಕಸಭಾ ಚುನಾವಣೆ ಮಹತ್ವಪೂ­ರ್ಣ­ವಾದುದು. ಆದ್ದರಿಂದ ಚುನಾವಣೆ­ಯನ್ನು ಎಚ್ಚರಿಕೆಯಿಂದ ಎದುರಿಸ­ಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸುನೀಲ್‌ ಕುಮಾರ್‌ ಹೇಳಿದರು.

ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಘನಿಕೇತನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕಸಭಾ ಚುನಾ­ವಣೆ ನಿರ್ವಹಣಾ ಸಮಿತಿ ಕಾರ್ಯಾ­ಗಾರ ಉದ್ಘಾಟಿಸಿ ಅವರು ಮಾತ­ನಾಡಿದರು.ಚುನಾವಣೆ ಸಂದರ್ಭದಲ್ಲಿ ಯಾವುದೇ ಕೊರತೆ ಆಗದಂತೆ ನೋಡಿ­ಕೊಳ್ಳಬೇಕು. ವಿಭಾಗವಾರು ವಹಿಸಿ­ರುವ ಜವಾಬ್ದಾರಿಯನ್ನು ನಿರ್ವಹಿಸ­ಬೇಕು. ಜನಸಾಮಾನ್ಯರಿಗೆ ದೇಶದ ಭವಿಷ್ಯದ ಬಗ್ಗೆ ಜಾಗೃತಿ ಇರುವು­ದರಿಂದ ನರೇಂದ್ರ ಮೋದಿ ಅವರೂ ರಾಷ್ಟ್ರೀಯ ವಿಚಾರಗಳನ್ನು ಮುಂದಿಟ­್ಟುಕೊಂಡು ಮಾತನಾಡುತ್ತಿದ್ದಾರೆ. ಆದ್ದರಿಂದ ದೇಶದ ಪ್ರಗತಿ, ಭದ್ರತೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದರು.ಜಿಲ್ಲೆಯಲ್ಲಿ ಮೂವರು ಸಚಿವರು ಇದ್ದು ಸಾಕಷ್ಟು ಅಭಿವೃದ್ಧಿ ಆಗಬ­ಹುದು ಎಂಬ ನಿರೀಕ್ಷೆ ಇತ್ತು. ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್‌ ಗಲಭೆಗೆ ಪ್ರಚೋ­ದನೆ ನೀಡುತ್ತಿದ್ದು, ಸಮಾಜದಲ್ಲಿ ಶಾಂತಿ ಕದಡುತ್ತಿದೆ ಎಂದರು.

ನರೇಂದ್ರ ಮೋದಿ ಅವರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂದು ಹೇಳುವ ಕಾಂಗ್ರೆಸ್‌ ಕಳೆದ 60 ವರ್ಷಗ­ಳಿಂದಲೂ ಗಾಂಧಿ ಕುಟುಂಬವನ್ನೇ ನೆಚ್ಚಿಕೊಂಡು ಚುನಾವಣೆ ಮಾಡುತ್ತಿ­ದೆಯೇ ಹೊರತು ಬೇರೆ ಆಲೋಚನೆ ಮಾಡಿಲ್ಲ ಎಂದರು.ಇತ್ತೀಚೆಗೆ ನಿಧನರಾದ ಲೋಕಸಭೆ ಮಾಜಿ ಉಪಸಭಾಧ್ಯಕ್ಷ ಎಸ್‌.ಮಲ್ಲಿ-­ಕಾ­ರ್ಜುನಯ್ಯ ಅವರ ಕುರಿತು ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿದರು.ಪಕ್ಷದ ಮುಖಂಡರಾದ ಕುಂಬ್ಳೆ ಸುಂದರ ರಾವ್‌, ಮಾಜಿ ಶಾಸಕರಾದ ಜಯರಾಮ ಶೆಟ್ಟಿ, ಎನ್‌.ಯೋಗೀಶ್‌ ಭಟ್‌, ಪದ್ಮನಾಭ ಕೊಟ್ಟಾರಿ, ಮಾಜಿ ಸಚಿವರಾದ ಬಿ.ನಾಗರಾಜ ಶೆಟ್ಟಿ, ಕೃಷ್ಣ ಪಾಲೆಮಾರ್‌, ಶಾಸಕರಾದ ಗಣೇಶ್‌ ಕಾರ್ಣಿಕ್‌. ಮೋನಪ್ಪ ಭಂಡಾರಿ, ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರತಾಪ್‌ ಸಿಂಹ ನಾಯಕ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.