‘ಲೋಕಸಭೆ ಚುನಾವಣೆಗೆ ಸಿದ್ಧರಾಗಿ’

7

‘ಲೋಕಸಭೆ ಚುನಾವಣೆಗೆ ಸಿದ್ಧರಾಗಿ’

Published:
Updated:

ಔರಾದ್‌: ಮುಂಬರುವ 2014ರ ಲೋಕಸಭೆ ಚುನಾವಣೆಗೆ ಸಿದ್ಧರಾಗುವಂತೆ ಬಿಜೆಪಿ ಮುಖಂಡರು ಕಾರ್ಯಕರ್ತರಿಗೆ ಕರೆ ನೀಡಿದರು.

ಸ್ಥಳೀಯ ಅಮರೇಶ್ವರ ಕಲಾ್ಯಣ ಮಂಟಪದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲಿ್ಲ ಪಕ್ಷದ ಬಹುತೇಕ ಮುಖಂಡರು ಮೋದಿ ಪ್ರಧಾನಿಯಾಗಲು ನಾವೆಲ್ಲ ಶ್ರಮ ವಹಿಸಬೇಕಾಗುತ್ತದೆ ಎಂದು ಹೇಳಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಪ್ರಕಾಶ ಖಂಡೆ್ರ ಮಾತನಾಡಿ, ಕೇಂದ್ರದಲ್ಲಿದ್ದ ಹಿಂದಿನ ವಾಜಪೇಯಿ ಸರ್ಕಾರ ಮತ್ತು ಈಗಿನ ಯುಪಿಎ ಸರ್ಕಾರದ ಸಾಧನೆ ಜನರಿಗೆ ತುಲನೆ ಮಾಡಿ ತೋರಿಸಬೇಕಿದೆ. ನರೇಂದ್ರ ಮೋದಿ ಗುಜರಾತ್‌ ಅಭಿವೃದ್ಧಿ ಮೂಲಕ ಇಂದು ರಾಷ್ಟ್ರ ಮಟ್ಟದ ನಾಯಕರಾಗಿ ಹೊಮಿ್ಮದಾ್ದರೆ. ಶಾಸಕ ಪ್ರಭು ಚವ್ಹಾಣ್‌ ಅಭಿವೃದ್ಧಿ ಮೂಲಕ 2ನೇ ಬಾರಿಗೆ ಅತ್ಯಧಿಕ ಮತ ಗಳಿಂದ ಜಯಗಳಿಸಿದಾ್ದರೆ ಎಂದರು.ಜಿಲಾ್ಲ ಅಧ್ಯಕ್ಷ ಶಿವರಾಜ ಗಂದಗೆ ಮಾತನಾಡಿ, ಪಕ್ಷಕೆ್ಕ ಕಾರ್ಯಕರ್ತರು ಆಧಾರ. ಕಾರ್ಯಕರ್ತರನು್ನ ವಿಶಾ್ವಸಕೆ್ಕ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಪಕ್ಷದ ರಾಜ್ಯ ಪ್ರಧಾನ ಕಾರ್ಯ ದರ್ಶಿ ರಘುನಾಥರಾವ ಮಲ್ಕಾಪುರೆ ಮಾತನಾಡಿ, ನರೇಂದ್ರ ಮೋದಿ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಯಾದ ನಂತರ ದೇಶದ ಜನತೆ ಬದಲಾವಣೆ ಬಯಸಿದ್ದಾರೆ ಎಂದರು.  ಶಾಸಕ ಪ್ರಭು ಚವಾ್ಹಣ್‌ ಮಾತನಾಡಿ, ಈ ಬಾರಿ ಎನ್‌ಡಿಎ ಸರ್ಕಾರ ಬರಲಿದೆ ಎಂದು ವಿಶಾ್ವಸ ವ್ಯಕ್ತಪಡಿಸಿದರು.ಪ್ರಕಾಶ ಅಲಾ್ಮಜೆ  ಅಧ್ಯಕ್ಷತೆ ವಹಿಸಿದರು. ಧುರೀಣ ಉಪೇಂದ್ರ ದೇಶಪಾಂಡೆ, ಶಾಂತಪ್ಪ ಪಾಟೀಲ, ಈಶ್ವರಸಿಂಗ ಠಾಕೂರ, ಭಗವಾನ ಖೂಬಾ, ಬಂಡೆಪ್ಪ ಕಂಟೆ, ಡಾ.ಕಲ್ಲಪ್ಪ ಉಪೆ್ಪೆ, ಅನಿಲ ಹೊಳಸಮುದ್ರ, ಶ್ರೀರಂಗ ಪರಿಹಾರ, ಶರಣಪ್ಪ ಪಂಚಾಕ್ಷರೆ ಇತರರು ಇದ್ದರು. ಕಿರಣ ಪಾಟೀಲ ಸಾ್ವಗತಿಸಿ, ಅನಿಲ ವಾಡೆಕರ್‌ ನಿರೂಪಿಸಿ, ಅರಹಂತ ಸಾವಳೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry