ಭಾನುವಾರ, ಜೂನ್ 13, 2021
25 °C

‘ವಚನ – ಅಷ್ಟಾಂಗದಲ್ಲಿ ಸಾಮ್ಯತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಸವಣ್ಣನ ವಚನ ಬುದ್ಧನ ಅಷ್ಟಾಂಗ ಮಾರ್ಗಕ್ಕೆ ಸಾಮ್ಯತೆ ಇದೆ. ನಾನೂ ಆ ತತ್ವದ ಮೇಲೆ ನಂಬಿಕೆ ಇಟ್ಟಿರುವವನಾದುದರಿಂದ ಸಂಸತ್ತಿನಲ್ಲಿ ರೈಲ್ವೆ ಬಜೆಟ್‌ ಮಂಡಿಸುವಾಗ ಬಸವಣ್ಣನ ವಚನವನ್ನು ಓದಿದ್ದೇನೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಜಿಲ್ಲಾ ಬಸವ ಕೇಂದ್ರ ಹಾಗೂ ಕಲ್ಯಾಣ ನಾಡಿನ ಶರಣ ಪರಿಷತ್ತು ವತಿಯಿಂದ ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಬಜೆಟ್‌ ಭಾಷಣ ಮಾಡುವಾಗ ಅದನ್ನು ಇತರ ದೇಶದವರೂ ಆಲಿಸುತ್ತಾರೆ. ವಾಣಿಜ್ಯ ದೃಷ್ಟಿಯಿಂದ ಅವರು ಆಲಿಸಿದರೂ ನಮ್ಮ ನಾಡಿನ ಸಾಮಾಜಿಕ ಹರಿಕಾರ ಬಸವಣ್ಣನವರ ವಚನಗಳೂ ಪ್ರಪಂಚದ ಮೂಲೆ ಮೂಲೆಗೂ ತಲುಪಬೇಕೆಂಬ ಉದ್ದೇಶದಿಂದ ಬಜೆಟ್‌ ಭಾಷಣದಲ್ಲಿ ಅದನ್ನು ಅಳವಡಿಸಿದ್ದೆ ಎಂದೂ ವಿವರಿಸಿದರು.ಬಸವಣ್ಣ ಸಾಮಾಜಿಕ ಕ್ರಾಂತಿ ನಡೆಸಿದ ಸ್ಥಳ ಬಸವಕಲ್ಯಾಣದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಸಚಿವನಾಗಿದ್ದಾಗ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಪ್ರಯತ್ನಿಸಿದ್ದೆ. ಅಲ್ಲಿ ಅಭಿವೃದ್ಧಿಯ ಅಡಿಪಾಯಕ್ಕೆ ಬೀಜ ಹಾಕಿದ್ದೇ ನಾನು. ಅನಂತರ ಅದು ಬೆಳೆದು ಬಂದಿದೆ ಎಂದೂ ಹೇಳಿದರು.ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಗುಲ್ಬರ್ಗದಿಂದ ಖರ್ಗೆ ಅವರನ್ನು ಆಯ್ಕೆಗೊಳಿಸಿದ್ದಕ್ಕೆ ಸಾರ್ಥಕವಾಗಿದೆ. ಅವರು ಕೇಂದ್ರ ಸಚಿವರಾದ ಮೇಲೆ ಇಲ್ಲಿನ ನಕಾಶೆಯನ್ನೇ ಬದಲಾಯಿಸಿದ್ದಾರೆ ಎಂದರು.ಸುಲಫಲ ಮಠದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬೀದರ್‌ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಮಾತನಾಡಿದರು. ಕಲ್ಯಾಣ ನಾಡಿನ ಶರಣ ಪರಿಷತ್ತು ಅಧ್ಯಕ್ಷ ರಂಜಾನ ದರ್ಗಾ ಅಭಿನಂದನಾ ನುಡಿಗಳನ್ನಾಡಿದರು.ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಬಸವ ಕೇಂದ್ರ ಅಧ್ಯಕ್ಷ ಶಿವಶರಣಪ್ಪ ಕಲಬುರ್ಗಿ, ವಿಧಾನ ಪರಿಷತ್‌ ಸದಸ್ಯ ಅಲ್ಲಂಪ್ರಭು ಪಾಟೀಲ, ಭಾಗನಗೌಡ ಸಂಕನೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಮೇಶ ಮರಗೋಳ, ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಇತರರು ಇದ್ದರು.ಸೋಮಣ್ಣ ನಡಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಶಾಬಾದಿ ಸ್ವಾಗತಿಸಿದರು.ಸಮನ್ವಯ ಸಮಿತಿ ಅಧ್ಯಕ್ಷ ಲಕ್ಷಣ ದಸ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಲಿಂಗ ಮಠಪತಿ  ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಖಮರುಲ್‌ ಇಸ್ಲಾಂ, ಡಾ. ಶರಣಪ್ರಕಾಶ ಪಾಟೀಲ, ಭಾಗನಗೌಡ ಸಂಕನೂರ ಹಾಗೂ ಹೋರಾಟಗಾರರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.