‘ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಚಿಂತನೆ’

7

‘ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಚಿಂತನೆ’

Published:
Updated:

ತಿ.ನರಸೀಪುರ:  ಸಂಘಕ್ಕೆ ಹೆಚ್ಚಿನ ಆದಾಯ ಸಂಗ್ರಹಣೆಗಾಗಿ ಸುಶೀಲಮ್ಮ ಕಾಲೋನಿ ರಸ್ತೆಯ ಕಡೆಗೆ ಇರುವ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗುತ್ತಿದೆ ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ಟಿ.ಪಿ. ಸುಬ್ರಮಣ್ಯ ಹೇಳಿದರು.ಪಟ್ಟಣದ ಟಿಎಪಿಸಿಎಂಎಎಸ್‌ ರೈತ ಭವನದಲ್ಲಿ ಶುಕ್ರವಾರ ನಡೆದ ಸರ್ವ­ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು.

ಲಿಂಕ್ ರಸ್ತೆಯಲ್ಲಿ ಇರುವ ಸಂಘದ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣದಿಂದ ಸಂಘಕ್ಕೆ ಸ್ವಲ್ಪ ಆದಾಯ ಸಿಗುತ್ತಿದೆ. ಆದಾಯ ಕ್ರೋಢೀಕರಣದ ಮೂಲಕ ಸಂಘದ ಅಭಿವೃದ್ಧಿಗೆ ಪೂರಕ ಯೋಜನೆ ದೃಷ್ಟಿಯಿಂದ ಸಂಘದ ಸ್ಥಳವಿರುವ ಸುಶೀಲಮ್ಮ ಕಾಲೋನಿ ಕಡೆಗೆ ಮಳಿಗೆ ನಿರ್ಮಾಣ ಮಾಡುವ ಅಗತ್ಯವಿದೆ.ಇದಕ್ಕೆ ನಿರ್ದೇಶಕರು, ಸದಸ್ಯರುಗಳು ಸಲಹೆ ಮತ್ತು ಸಹಕಾರ ಬೇಕಿದೆ. ಸಹಕಾರ ಸಂಘ ಲಾಭದಲ್ಲಿದೆ.  ಸದಸ್ಯರು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸಹಕಾರ ನೀಡಿದರೆ ಹೆಚ್ಚಿನ ಲಾಭ ಪಡೆಯಬಹುದು  ಎಂದರು. ಸಂಘದ ನಿರ್ದೇಶಕ ಅವರು ಮಾತನಾಡಿ, ಗ್ರಾಮಗಳಲ್ಲಿ ರಸಗೊಬ್ಬರ ಮಾರಾಟ ಕೇಂದ್ರಗಳಿರುವ ಕಾರಣ ಇಲ್ಲಿ ರಸಗೊಬ್ಬರ ಮಾರಾಟಕ್ಕೆ ಬೇಡಿಕೆ ಕಡಿಮೆ ಇದೆ.ಇದರಿಂದ ಸಂಘಕ್ಕೆ ಆದಾಯಕ್ಕೆ ಕೊರತೆಯಾಗಿದೆ  ಸದಸ್ಯರೆಲ್ಲರ ಸಲಹೆಯನ್ನು ಪಡೆದು ಅಭಿವೃದ್ಧಿಗೆ ಹೊಸ ಯೋಜನೆ ಮಾಡಬೇಕಿದೆ ಎಂದರು.

ರೈತ ಭವನದಲ್ಲಿ ವಾಸ್ತವ್ಯ ಕೊಠಡಿಗಳ ನಿರ್ಮಾಣ, ಅಕಾಲಿಕ ಮರಣ ಹೊಂದುವ ಸದಸ್ಯರಿಗೆ ಆಥಿರ್ಕ ನೆರವು ನಿಧಿ ಸ್ಥಾಪನೆ, ಹೆಚ್ಚುವರಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವ ಬಗ್ಗೆ ಸದಸ್ಯರು ಮನವಿ ಮಾಡಿದರು.   ಸಂಘದ  ನಿರ್ದೇಶಕರಾದ ಬನ್ನೂರು ಕೆ. ಕೃಷ್ಣ, ಆರ್.ಎನ್. ರಾಮೇಗೌಡ, ಪರಶಿವಮೂರ್ತಿ, ರಾಜಮ್ಮ, ಎಂ. ಜಯಣ್ಣ, ಗೌರಮ್ಮಣ್ಣಿ, ಕಾರ್ಯ­ದರ್ಶಿ  ಜಿ. ರಘುನಂದನ್, ಕಛೇರಿ ಸಹಾಯಕ ಜಯಶೇಖರಪ್ಪ, ಆರ್.ಎಸ್.ಶಿವಣ್ಣ, ಮರಿಸ್ವಾಮಿ, ಸಿ.ಎಸ್. ನಿಂಗಪ್ಪ, ಸಾವಿತ್ರಮ್ಮ, ರೈತರಾದ ಬಿ.ಮಹದೇವ, ಎ.ಜೆ. ವೆಂಕಟೇಶ, ರಮೇಶ, ಕುಪ್ಯ ಜಯರಾಮ್, ಶಂಭುದೇವನಪುರ ಶಿವ­ನಂಜಪ್ಪ, ರವಿ, ಎಂ.ನಂಜಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry