‘ವಾತಾವರಣ ಇಲ್ಲದೇ ಜೀವನ:ಜೆ.ಆರ್‌. ನಾಯಕ್‌

7
ವಿಜ್ಞಾನಿಗಳ ಹೊಸ ಪ್ರಯತ್ನ– ಓಝೋನ್‌ ದಿನಾಚರಣೆ

‘ವಾತಾವರಣ ಇಲ್ಲದೇ ಜೀವನ:ಜೆ.ಆರ್‌. ನಾಯಕ್‌

Published:
Updated:

ಗುಲ್ಬರ್ಗ: ‘ವಾತಾವರಣವೇ ಇಲ್ಲದೇ ಜೀವಿಸುವ ಸಾಧ್ಯತೆಯ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ’ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಆರ್‌. ನಾಯಕ್‌ ಹೇಳಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ ‘ವಿಶ್ವ ಓಝೋನ್‌ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ನೀರು, ಗಾಳಿ, ಆಹಾರವು ಜೀವಿಸಲು ಅನಿವಾರ್ಯ. ಅವುಗಳೇ ಇಲ್ಲದ ವಾತಾವರಣದಲ್ಲಿ ಬದುಕುವ ಸಾಧ್ಯತೆ ಹಾಗೂ ಜೀವಿಯ ಸೃಷ್ಟಿಯಲ್ಲಿ ವಿಜ್ಞಾನಗಳು ತೊಡಗಿದ್ದಾರೆ’ ಎಂದ ಅವರು, ‘ಆಧುನಿಕತೆಯ ಭರಾಟೆಯಲ್ಲಿ ಓಝೋನ್‌ ಪದರವು ಶಿಥಿಲ                   ಗೊಳ್ಳು­ತ್ತಿದೆ.ಆದರೆ 1994ರಲ್ಲಿ ವಿಜ್ಞಾನಿಗಳು ಅದರ ರಕ್ಷಣೆಗೆ ಪಣತೊಟ್ಟರು. ಇದರನ್ವಯ 2060ರ ವೇಳೆಗೆ ಮೂಲ ಓಝೋನ್‌ ಪದರ ಮರುಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.ಜಾಗೃತಿ ಕಾರ್ಯ­ಕ್ರಮಗಳು ನಡೆಯುತ್ತಿವೆ’ ಎಂದರು. ‘ನೀರಿನಲ್ಲಿರುವ ಸೂಕ್ಷ್ಮಾಣುಜೀವಿಗಳು ತಮ್ಮ ಆಹಾರ ಸೃಷ್ಟಿಯ ದ್ಯುತಿಸಂ­ಶ್ಲೇಷಣೆ ಕ್ರಿಯೆಯಲ್ಲಿ ಉತ್ಪಾದಿಸಿದ ಆಮ್ಲಜನಕದ ಮೂರು ಕಣಗಳು ಸೇರಿ ಓಝೋನ್‌ ನಿರ್ಮಾಣಗೊಂಡಿತು. ಅದು ಪದರವಾಗಿ ವಾಯು­ಮಂಡಲದಲ್ಲಿ ಸೇರಿಕೊಂಡು ಓಝೋನ್‌ ಪದರ ಸೃಷ್ಟಿಯಾಯಿತು.ಈ ಪದರವು ಸೂರ್ಯನಿಂದ ಬರುವ ಆಲ್ಟ್ರಾವ­ಯೋಲೆಟ್‌ ನಂತಹ ಪ್ರಖರ ಕಿರಣಗಳನ್ನು ತಡೆದು, ಜೀವವಿಕಾಸ ಪ್ರಕ್ರಿಯೆಗೆ ಕಾರಣವಾಯಿತು. ಹೀಗೆ ಆರು ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡ ಓಝೋನ್‌ ಮನುಷ್ಯರ ಜನನಕ್ಕೂ ಕಾರಣವಾಯಿತು.ಆದರೆ ಅವನ ಅತಿ ಆಸೆಗೆ ಇಂದು ಓಝೋನ್‌ ಬಲಿಯಾಗುತ್ತಿರುವುದು ವಿಪರ್ಯಾಸ’ ಎಂದು ಅವರು ವಿಷಾದಿಸಿದರು. 1920ರ ಸುಮಾರಿನಲ್ಲಿ ಸಂಶೋಧಿಸಿದ ಹವಾನಿಯಂತ್ರಿತ ವ್ಯವಸ್ಥೆ (ಫ್ರಿಜ್‌, ಎಸಿ, ರೆಫ್ರಿಜರೇಟರ್‌) ಯಲ್ಲಿನ ಕ್ಲೋರೋಫ್ಲೋರೋಕಾರ್ಬನ್‌ ಕಣಗಳು ಇಂದು ಓಝೋನ್‌ ಪದರಕ್ಕೆ ಹಾನಿ ಮಾಡುತ್ತಿವೆ.

ಈ ಒಂದು ಕಣದಿಂದ ಒಂದು ಲಕ್ಷ ಓಝೋನ್‌ ಕಣಗಳು ಹಾನಿಯಾಗುತ್ತಿವೆ. ಇಂತಹ ಹಲವು ಆಧುನಿಕ ಸಾಧನಗಳ ಬಳಕೆಯಿಂದ ಭೂಮಿಯೇ ಅಪಾಯ­ದಲ್ಲಿದೆ. ಹಾನಿಯಲ್ಲಿ ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ದೇಶದ ಜನರ ಜೀವನ ಶೈಲಿಯ ಪಾಲು ಬಹುದೊಡ್ಡದು.ಆದರೆ ಅವರು ಅಭಿವೃದ್ಧಿಶೀಲ ದೇಶಗಳಲ್ಲಿ ದೂರುತ್ತಾರೆ’ ಎಂದು ಆಪಾದಿಸಿದ ಅವರು, ‘ಯುವಜನತೆಯನ್ನು ಹೊಂದಿದ ಭಾರತವು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿದೆ. ಓಝೋನ್‌ ಶಿಥಿಲದಿಂದ ಕ್ಯಾನ್ಸರ್‌ನಂತಹ ರೋಗ, ಉತ್ತರ–ದಕ್ಷಿಣ ಧ್ರುವಗಳ ಕರಗುವಿಕೆ, ಆಹಾರ ಬೆಳೆಗಳಿಗೆ ಹಾನಿ (ಅಕ್ಕಿ) ಮತ್ತಿತರ ಅಪಾಯ ಕಾಡುವ ಭೀತಿಯಿದೆ ’ ಎಂದರು. ಜಿಲ್ಲಾ ವಿಜ್ಞಾನಕೇಂದ್ರದ ಶಿಕ್ಷಣ ಅಧಿಕಾರಿ ಆರ್‌. ವೆಂಕಟೇಶ್ವರಲು, ಶ್ರೀನಿವಾಸ ಯಾದವ, ರಮೇಶ್‌ ಮತ್ತಿತರರು ಇದ್ದರು.

‘ಮೊಲೆ ಹಾಲೂ ವಿಷ’

ಗುಲ್ಬರ್ಗ: ಮಕ್ಕಳ ಬೆಳವಣಿಗೆಗೆ ಅತ್ಯುತ್ತಮ ಆಹಾರವಾದ ಮೊಲೆ ಹಾಲೂ ಕೂಡಾ ಪರಿಸರ ಮಾಲಿನ್ಯದಿಂದ ವಿಷವಾಗುತು್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಉನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ಅಮೃತ ಎಲ್ಮನಿ ಹೇಳಿದರು.

ಶೋಕಿ ಜೀವನಕ್ಕೆ ತುತ್ತಾದವರು ಬಳಸುವ ಸುಗಂಧ ದ್ರವ್ಯಗಳು, ವಿವಿಧ ಸ್ಪ್ರೇಗಳು, ಆಹಾರಗಳು ಮತ್ತಿತರ ಅಂಶಗಳು ದೇಹ ಹಾಗೂ ಪರಿಸರಕ್ಕೆ ಹಾನಿಕಾರಕ. ಇನ್ನೊಂದೆಡೆ ಜನಸಂಖ್ಯಾ ಸ್ಫೋಟ ಹಾಗೂ ಮನುಷ್ಯನ ಅತಿಯಾಸೆಯು ಓಝೋನ್‌ ಪದರ ಸೇರಿದಂತೆ ಭೂ ಮಂಡಲವನ್ನೇ ನಾಶಗೊಳಿಸುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry