‘ವಿಚಾರಣೆಗೆ ಎಫ್‌ಐಆರ್‌ ಅನಗತ್ಯ’

7

‘ವಿಚಾರಣೆಗೆ ಎಫ್‌ಐಆರ್‌ ಅನಗತ್ಯ’

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಸೂಕ್ತ ಸಾಕ್ಷ್ಯಾಧಾರಗಳಿದ್ದರೆ  ಎಫ್‌ಐಆರ್‌ ಅಥವಾ ಆರೋಪ­ಪಟ್ಟಿ­ಯಲ್ಲಿ ಹೆಸರಿರದ  ವ್ಯಕ್ತಿಯನ್ನೂ ಆರೋಪಿ ಎಂದು ಪರಿಗಣಿಸುವ ಅಧಿ­ಕಾರ ಕೆಳ ಹಂತದ ನ್ಯಾಯಾ­ಲ­ಯಗಳಿಗೆ ಇದೆ ಎಂದು ಸುಪ್ರೀಂ­ಕೋರ್ಟ್‌ ಶುಕ್ರವಾರ ಅಭಿಪ್ರಾ-­ಯಪಟ್ಟಿದೆ.ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 319ನೇ ಸೆಕ್ಷನ್‌ ಅಡಿ ನ್ಯಾಯಾಲಯ ಶಂಕಿತ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಿ    ವಿಚಾ­ರಣೆ ನಡೆಸುವ ಅಧಿಕಾರ ಹೊಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿದೆ.ಒಂದು ವೇಳೆ ಪೊಲೀಸರು ಅಥವಾ ತನಿಖಾಧಿಕಾರಿಗಳು ಅಪರಾಧ ಪ್ರಕ­ರಣದಲ್ಲಿ ಭಾಗಿಯಾಗಿದ ವ್ಯಕ್ತಿಯ ಹೆಸ­ರನ್ನು ಎಫ್‌ಐಆರ್‌ ಅಥವಾ ಆರೋಪಪಟ್ಟಿಯಲ್ಲಿ ಕೈಬಿಟ್ಟಿದ್ದರೂ, ಆ ವ್ಯಕ್ತಿಯನ್ನು ಆರೋಪಿ ಎಂದು ಪರಿಗ­ಣಿಸುವ ಮೊದಲು ಅವನ ವಿರುದ್ಧ  ಸಾಕಷ್ಟು ಸಾಕ್ಷ್ಯಾಧಾರಗಳಿರಬೇಕು ಎಂದು  ಪೀಠ ಹೇಳಿದೆ.2ಜಿ ತರಂಗಾಂತರ ಹಂಚಿಕೆ ಹಗರ­ಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾ­ರಣೆಯ ಮೇಲೆ ಈ ಆದೇಶ ಪ್ರಭಾವ ಬೀರುವ ಸಾಧ್ಯತೆ ಇದೆ.

2ಜಿ ತರಂಗಾಂತರ ಹಗರಣದ ತನಿಖೆ ನಡೆಸಿದ್ದ ಸಿಬಿಐ, ಅವ್ಯವ­ಹಾ­ರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲವು ಪ್ರಮುಖ ಕಾರ್ಪೊರೇಟ್‌ ಸಂಸ್ಥೆ­ಗಳ ಮುಖ್ಯಸ್ಥರನ್ನು ಎಫ್‌ಐಆರ್‌ ಅಥವಾ ಆರೋಪಪಟ್ಟಿಯಲ್ಲಿ ಹೆಸರಿಸಿರಲಿಲ್ಲ. ಈ ಪ್ರಕರಣದ ವಿಚಾರಣೆ ನಡೆಸು­ತ್ತಿದ್ದ  ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರು ಕಾರ್ಪೊರೇಟ್‌ ಸಂಸ್ಥೆಗಳ ದಿಗ್ಗಜರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.ವಿಚಾರಣಾ ಹಂತದ ನ್ಯಾಯಾಲ­ಯದ ಈ ಕ್ರಮವನ್ನು ಪ್ರಶ್ನಿಸಿ ಉದ್ಯಮಿಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಕೋರ್ಟ್‌ನಲ್ಲಿ ನಡೆಯು­ತ್ತಿದ್ದು ಇನ್ನೂ ತೀರ್ಪು  ಹೊರಬಿದ್ದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry