‘ವಿದ್ಯಾರ್ಥಿಗಳಲ್ಲಿ ಮಾನಸಿಕ ರೋಗ’

7

‘ವಿದ್ಯಾರ್ಥಿಗಳಲ್ಲಿ ಮಾನಸಿಕ ರೋಗ’

Published:
Updated:

ಗದಗ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಲು ಏಕಾಗ್ರತೆ ಮತು್ತ ಶ್ರದ್ಧೆ­­ಯಿಂದ ಅಧ್ಯಯನ ನಿರತ­ರಾಗಬೇಕು ಎಂದು ಹುಬ್ಬಳ್ಳಿಯ ಕಾಡ­ಸಿದ್ದೇಶ್ವರ ಹಾಗೂ ಕೋತಂಬ್ರಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ ಹೇಳಿದರು.ನಗರದ ಕೆ.ಎಲ್.ಇ. ಸಂಸ್ಥೆಯಲ್ಲಿ ಬಿ.ಎಸ್ಸಿ. ಪ್ರಥಮ ವರ್ಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದಾ್ಘಟಿಸಿ ಮಾತ­ನಾಡಿದ ಅವರು, ದೈಹಿಕ, ಬೌಧ್ದಿಕ ಮತ್ತು ಮಾನಸಿಕ ಬೆಳವಣಿಗೆ ಅತ್ಯವಶ್ಯ. ಸದೃಢ ಶರೀರ­ವುಳ್ಳವರಾಗಬೇಕಾದರೆ ದುಶ್ಚಟ­ಗಳಿಂದ ದೂರವಿರಬೇಕು. ಆಗ ಮಾತ್ರ ಬೌದ್ಧಿಕವಾಗಿ, ಮಾನಸಿಕವಾಗಿ ಸದೃಢ­ರಾಗಿರಲು ಸಾಧ್ಯ. ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮಾನ­ಸಿಕ ರೋಗದಿಂದ ಬಳಲುತ್ತಿರುವುದು ವಿಷಾದಕರ ಸಂಗತಿ ಎಂದು ತಿಳಿಸಿದರು.ವಿದಾ್ಯರ್ಥಿಗಳಲಿ್ಲ ದೇಶ ಪ್ರೇಮವಿಲ್ಲದೆ ತನ್ನ ಮೇಲೆ ತನಗೆ ವಿಶ್ವಾಸ  ಇಲ್ಲ­ದಿರುವುದರಿಂದ ಪರಿಸರ ಮಾಲಿನ್­ಯಗೊಂಡಿದೆ. ಕೋಟಿ ಕೈಗಳು ದುಡಿ­ದರೆ ದೇಶದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು. ದುಡಿಯದೇ ತಿನ್ನುವ, ಓದದೇ ಮಲಗುವ ಮನೋಭಾವ­ವುಳ್ಳವ­ರಾಗದೇ ಮರು ಉತ್ಪಾದನೆ ಮಾಡುವ ಶ್ರಮಿಕ ಸಂಸ್ಕೃತಿ ಹುಟ್ಟು­ಹಾಕಬೇಕು. ಸಾಂಸ್ಕೃತಿಕ ಪರಂಪರೆ­ಯುಳ್ಳ ಭಾರತ ದೇಶದಲ್ಲಿ ಆಚಾರದಂತೆ ವಿಚಾರ, ವಿಚಾರದಂತೆ ಆಚಾರವುಳ್ಳರಾಗಿ ನಡೆದು­ಕೊಳ್ಳ­ಬೇಕು. ಆಗ ಮಾತ್ರ  ಭಾರತ ಸುಪರ್ ಪವರ ಬಲದಿಂದ ಜಗತ್ತಿನಲ್ಲಿಯೇ ನಂಬರ ಒನ್ ಆಗಲು ಸಾಧ್ಯ ಎಂದು ಅಭಿಪಾ್ರಯಪಟ್ಟರು,ಪ್ರಾಚಾರ್ಯ  ಪ್ರೊ.ಎಸ್.ಎಸ್.­ಯಂಕಂಚಿ  ಮಾತನಾಡಿ,  ವಿದ್ಯಾರ್ಥಿ­ಗಳ ಮನಸಿನಲಿ್ಲ ಅಡಗಿರುವ ಬಲದಿಂದ ಶ್ರೇಷ್ಠ ಸಾಧಕರಾಗಲು ಸಾಧ್ಯವಿದೆ ಎಂದು ಕಿವಿ ಮಾತು ಹೇಳಿದರು.ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ವಿ.ಐ.­ಕುರಗೋಡ ಅಧ್ಯಕ್ಷತೆ ವಹಿಸಿದ್ದರು. ವಿದಾ್ಯರ್ಥಿ ಕಲ್ಯಾಣಾ­ಧಿಕಾರಿ ಪ್ರೊ.ಎಸ್.ಜೆ.­ಹಿರೇಮಠ, ಅಕ್ಷತಾ ತೊಟಗೇರ ಪ್ರಾರ್ಥಿಸಿದರು, ಬಸವರಾಜ ಅಂಗಡಿ  ಸ್ವಾಗತಿಸಿದರು, ನಾಜೀಶ  ಪರಿಚಯಿಸಿದರು. ಪ್ರೊ.­ಎಂ.ಬಿ.­­ಚನ್ನಪ್ಪಗೌಡರ, ಪೊ್ರ. ಎಮ್.ಎಮ್.ನರಗುಂದ ಹಾಜರಿ­ದ್ದರು. ರಾಜೇಶ್ವರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry