ಶುಕ್ರವಾರ, ಮಾರ್ಚ್ 5, 2021
16 °C

‘ವಿದ್ಯಾರ್ಥಿಗಳಿಗೆ ಪ್ರಾಪಂಚಿಕ ಜ್ಞಾನವೂ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿದ್ಯಾರ್ಥಿಗಳಿಗೆ ಪ್ರಾಪಂಚಿಕ ಜ್ಞಾನವೂ ಅವಶ್ಯ’

ಮಂಡ್ಯ: ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಪ್ರಾಪಂಚಿಕ ಜ್ಞಾನದ ಅರಿವನ್ನೂ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಬಿಎಂಎಸ್‌ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಆರ್‌. ಹರೀಶ್‌ ಸಲಹೆ ಮಾಡಿದರು.ನಗರದ ಪಿಇಎಸ್ ಕಾನೂನು ಕಾಲೇಜಿನಲ್ಲಿ ಬುಧವಾರ ಏರ್ಪಡಿ­ಸಿದ್ದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ­ದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಸಾಧನೆಯನ್ನು ಮಾಡಲು ಕನ್ನಡದ ಜತೆಗೆ ಇಂಗ್ಲಿಷ್‌ ಭಾಷೆಗೂ ಒತ್ತು ನೀಡಬೇಕು. ಗುಬ್ಬ­ಚ್ಚಿ­ಗಳಂತೆ ಗೂಡಿನಲ್ಲಿರದೆ, ಪ್ರಪಂ­ಚದ ಜ್ಞಾನವನ್ನು ತಿಳಿಯಲು ಹೊರಗೆ ಬರಬೇಕು. ಆಗ ಮಾತ್ರ ಸಾಧನೆಯ ಶಿಖರ ಏರಲು ಸಾಧ್ಯ ಎಂದರು.ಸನ್ಮಾನ ಸ್ವೀಕರಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಗೋವಿಂದಯ್ಯ ಮಾತನಾಡಿ, ನಮ್ಮ ರಾಷ್ಟ್ರದ ಸಂವಿಧಾನವು ಶ್ರೇಷ್ಠವಾ­ಗಿದೆ. ಸಂವಿಧಾನದಲ್ಲಿರುವ ಕಾರ್ಯ, ಕರ್ತವ್ಯಗಳನ್ನು ಸರಿಯಾದ ರೀತಿ­ಯಲ್ಲಿ ಅರ್ಥ ಮಾಡಿಕೊಂಡಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯ ಎಂದು ಹೇಳಿದರು.ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದಕ್ಕೆ ಸಂಬಂಧಿಸಿದ ಕಾನೂನುಗಳ ಕುರಿತಂತೆ ವಿವರಿಸಿದರು.ಪಿಇಟಿ ಅಧ್ಯಕ್ಷ ಎಚ್‌.ಡಿ. ಚೌಡಯ್ಯ, ಜಂಟಿ ಕಾರ್ಯದರ್ಶಿ ಪಂಚ­­ಲಿಂಗು, ಪ್ರೊ.ಸಿ. ಕೃಷ್ಣಪ್ಪ, ಹಿರಿಯ ವಕೀಲ ಬಸವಯ್ಯ ಮತ್ತಿತ­ರರು ಇದ್ದರು.ಕಾಮಗಾರಿ ವಿಳಂಬ: ಪ್ರತಿಭಟನೆ

ಹಿರೀಸಾವೆ
: ರಾಷ್ಟ್ರೀಯ ಹೆದ್ದಾರಿ 75ರ ವಿಸ್ತರಣೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾ­ಯಿಸಿ, ವಿವಿಧ ಸಂಘಟನೆಗಳ ಪ್ರತಿನಿಧಿ­ಗಳು ಮತ್ತು ಸಾರ್ವಜನಿಕರು  ಪಟ್ಟ­ಣದ ಶ್ರೀಕಂಠಯ್ಯ ವೃತ್ತದಲ್ಲಿ ಬುಧ­ವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.