ಶನಿವಾರ, ಜನವರಿ 18, 2020
21 °C

‘ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ ಶೀಘ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರು: ತಾಲ್ಲೂಕಿನ ಉನ್ನತೀಕರಿಸಿದ ಹಾಗೂ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು 3600 ಸೈಕಲ್‌ಗಳು ಬಂದಿದ್ದು, ಜೋಡಣೆ ಕಾರ್ಯ ಆರಂಭ ಮಾಡಲಾಗಿದೆ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಎ.ಬಿ. ಮಾಲಿಪಾಟೀಲ ತಿಳಿಸಿದ್ದಾರೆ.ತಾಲ್ಲೂಕಿನ ಉನ್ನತೀಕರಿಸಿದ ಶಾಲೆಗಳು –45, ಪ್ರೌಢಶಾಲೆ –38, ಅನುದಾನಿತ ಪ್ರೌಢಶಾಲೆ –10 ಒಟ್ಟು 93 ಶಾಲೆಗಳಲ್ಲಿ 2013–14 ಸಾಲಿನಲ್ಲಿ 4,587 ಮಕ್ಕಳು ಬೈಸಿಕಲ್‌ ಪಡೆಯಲು ಅರ್ಹರಾಗಿದ್ದಾರೆ.  ಆ ಪೈಕಿ ವಸತಿ ನಿಲಯ ಮತ್ತು ಬಸ್‌ ಪಾಸ್‌ ಹೊಂದಿರುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಒಟ್ಟು 4,084 ಮಕ್ಕಳಿಗೆ ಸೈಕಲ್‌ ವಿತರಣೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು. ಸೈಕಲ್‌ ಜೋಡಣೆ ಕಾರ್ಯ ಮುಗಿದ ಕೂಡಲೇ ಆಯಾ ಶಾಲೆಗಳಿಗೆ ತಲುಪಿಸಿ, ಮುಖ್ಯಗುರು ಮತ್ತು ಶಾಲಾ ಸುಧಾರಣ ಸಮಿತಿ ಸದಸ್ಯರು ಪರಿಶೀಲಿಸಿ  ಹಂಚಿಕೆ ಕಾರ್ಯ ಕೈಗೊಳ್ಳಲಿದ್ದಾರೆ ತಿಳಿಸಿದರು.

ಪ್ರತಿಕ್ರಿಯಿಸಿ (+)