ಬುಧವಾರ, ಜೂನ್ 16, 2021
22 °C

‘ವಿದ್ಯುತ್ ಘಟಕಗಳ ಅಭಿವೃದ್ಧಿಗೆ ಒತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯ­ದಲ್ಲಿ ಶಿಕ್ಷಣಕ್ಕೆ ತೊಂದರೆಯಾಗದಂತೆ ವಿದ್ಯುತ್ ಕಡಿತ­ಗೊಳಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶದ  ಅರಣ್ಯ ಭಾಗಗಳಿಗೆ ಹೊಂದಿಕೊಂಡ ಪ್ರದೇಶ­ಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ಅಡಚಣೆಯಾಗು­ತ್ತಿರುವು­ದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.ಅವರು ಹೊಸಂಗಡಿ ವಾರಾಹಿ ಜಲ ವಿದ್ಯುತ್ ಉತ್ಪಾದನ ಘಟಕಕ್ಕೆ ಭಾನುವಾರ ಭೇಟಿ ನೀಡಿ, ಪರೀಶಿಲನೆ ನಡೆಸಿ ಬಳಿಕಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‘ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ವಿದ್ಯುತ್   ಸಮಸ್ಯೆ ಪರಿಹರಿಸಲು ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಲು ಕ್ರಮ ಕೈಗೊಳ್ಳಲಿದೆ. ರಾಜ್ಯದಲ್ಲಿ  ವಿದ್ಯುತ್ ಉತ್ಪಾದನಾ  ಘಟಕಗಳ ಗುತ್ತಿಗೆ ಪಡೆದು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವ ಕಂಪೆನಿಗಳ ಗುತ್ತಿಗೆಯನ್ನು ವಾಪಸ್ಸು ಪಡೆದು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ­ಲಾಗುವುದು,  ರಾಜ್ಯದ ಜನತೆಗೆ ನಿರಂತರ ವಿದ್ಯುತ್ ಬಳಕೆಗೆ ಘಟಕಗಳ  ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಸಚಿವರು ಹೇಳಿದರು.ವಾರಾಹಿ ಜಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಅಪಘಾತಗೊಳಗಾಗಿ ಬಳಲುತ್ತಿರುವ ಸಿಬ್ಬಂದಿ ಕೆ.ಆಲವಿ ಇವರು ಸೇವಾ ನಿವೃತ್ತಿಯೊಂದಿಗೆ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವಂತೆ ಸಲ್ಲಿಸಿದ ಮನವಿಗೆ ಸಚಿವರು ಸ್ಪಂದಿಸುವುದಾಗಿ ಭರವಸೆ ನೀಡಿದರು.ಕೆ.ಪಿ.ಸಿ ಕಚೇರಿಯಲ್ಲಿ 6 ತಿಂಗಳಿಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಗೊಳಿಸಿ ನಂತರ ಕೇವಲ 2 ತಿಂಗಳುಗಳಲ್ಲಿ ನೇಮಕ ರದ್ದು ಗೊಳಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳು­ವಂತೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಿದ ಗುತ್ತಿಗೆ ಆಧಾರದ ಸಿಬ್ಬಂದಿ ಶಾಂತಿ ಸಚಿವರಿಗೆ  ಮನವಿ ಸಲ್ಲಿಸಿದರು.ಕೆ.ಪಿ.ಸಿ (ವಾರಾಹಿ ) ಮುಖ್ಯ ಎಂಜಿನಿಯರ್‌ ಎನ್ ರಾಮಯ್ಯ, ಅಧಿಕ್ಷಕ  ಎಂಜಿನಿಯರ್‌ಎನ್ ಕಮಲಾಕ್ಷ, ಸಿವಿಲ್ ಮುಖ್ಯ ಎಂಜಿನಿಯರ್‌ ರಾಜಮುಡಿ, ಅಧಿಕ್ಷಕ ಎಂಜಿನಿಯರ್‌ ಪ್ರಸನ್ನ ಕೆ.ಆರ್,  ಸಾರ್ವಜನಿಕ ಸಂಪರ್ಕಧಿಕಾರಿ ಅಲ್ಫೋನಸ್ ಡಿಮೋಲ್, ಕೆ.ಪಿ.ಸಿ ನಿಗಮದ ವರ್ಕ್ಸ್ ಯುನಿಯನ್ ಅಧ್ಯಕ್ಷ ಪೈರೋಜ್ ಸಾಬ್, ಎಸ್‌ಸಿ/ಎಸ್‌ಟಿ ವರ್ಕ್ಸ್ ಯುನಿಯನ್ ಅಧ್ಯಕ್ಷ ಆರ್ ಅಣ್ಣಯ್ಯ, ಮಾನವ ಸಂಪನ್ಮೂಲ ಅಧಿಕಾರಿ ವೈ.ಬಿ. ಹಾಭಾವಿ, ಹಾಗೂ ಕಾಂಗ್ರೆಸ್ ಪಕ್ಷದ ವಂಡ್ಸೆ ಬ್ಲಾಕ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಸಹಕಾರಿ ಧುರೀಣ ಕಿಶನ್ ಹೆಗ್ಡೆ ಕೊಳ್ಕೆಬೈಲು, ವಾಸುದೇವ ಯಡಿಯಾಳ,ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಭಂಡಾರಿ, ಹೊಸಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಶೆಟ್ಟಿ ಜವಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.