‘ವಿನಯವಂತಿಕೆಯಿಂದ ಕಾದಂಬರಿ ರಚಿಸಿ’

7

‘ವಿನಯವಂತಿಕೆಯಿಂದ ಕಾದಂಬರಿ ರಚಿಸಿ’

Published:
Updated:

ರಾಜರಾಜೇಶ್ವರಿನಗರ: ‘ವಿನಯವಂತಿಕೆ, ಹೃದಯಾಳ­ದಿಂದ ಕಾದಂಬರಿ ರಚಿಸಬೇಕಾಗಿದೆ. ಕಾವ್ಯ ಮತ್ತು ಕವಿತೆ ಮನುಷ್ಯ ಸಂಬಂಧ ಗಟ್ಟಿಗೊಳಿಸು­ತ್ತದೆ’ ಎಂದು ಲೇಖಕ ಶೂದ್ರ ಶ್ರೀನಿವಾಸ್‌ ಅಭಿಪ್ರಾಯ­ಪಟ್ಟರು.ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಕ್ಕ ಪ್ರಕಾಶನ ವತಿಯಿಂದ ಈಚೆಗೆ ನಡೆದ ವಿಜಯಕುಮಾರ್‌ ಅವರ ‘ಅಂತ­ರಾಳದ ಅಳಲು’ ಹಾಗೂ  ‘ನಿರ್ಮಾಣ’ ಕೃತಿಗಳ ಬಿಡು­ಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕವಿ ಸಿದ್ದ­ಲಿಂಗಯ್ಯ, ‘ಕವಿತೆ, ಕಾದಂಬರಿಗಳಿಗೆ ಬೆಲೆ ಕಟ್ಟಲು ಸಾಧ್ಯವಾಗದು. ಬಡವರ ಬಗ್ಗೆ, ಶೋಷಿತರ ಜನರ ಕಷ್ಟ ದುಃಖ­ಗಳನ್ನು ತಿಳಿದು ಕಾದಂಬರಿಗಳನ್ನು ರಚಿಸ­ಬೇಕು. ಯುವ ಬರಹ­ಗಾರರು ಅವ­ಕಾಶ ಸಿಕ್ಕಾಗ ಮಹಾನ್‌ ಕವಿಗಳ, ವಿದ್ವಾಂಸರ ಕಾವ್ಯಗಳನ್ನು ಅಧ್ಯಯನ ಮಾಡಿ ಸಮಾಜ ಸುಧಾರಣೆ ಕಾರ್ಯ­ದಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.ವಿಮರ್ಶಕ ಪ್ರೊ.ನಾರಾಯಣಘಟ್ಟ, ‘ಕಾವ್ಯಗಳು ಭಾವ ಮತ್ತು ಜ್ಞಾನ ನೀಡ­ಬೇಕು. ಜೊತೆಗೆ ಸಮಾಜದ ಆರೋಗ್ಯ­ಕರ ವಿಮರ್ಶೆ ಮಾಡಬೇಕು. ಆ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry