‘ವಿಪತ್ತು: ತ್ವರಿತ ಸ್ಪಂದನೆ ಮುಖ್ಯ’

7

‘ವಿಪತ್ತು: ತ್ವರಿತ ಸ್ಪಂದನೆ ಮುಖ್ಯ’

Published:
Updated:

ಧಾರವಾಡ: ‘ಜಿಲ್ಲೆಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತಿ ಪ್ರಕೋಪಗಳ ಸಂದರ್ಭದಲ್ಲಿ ತಕ್ಷಣದ ಸ್ಪಂದನೆ ಮುಖ್ಯವಾಗಿದೆ. ಈಗಾಗಲೇ ಜಾರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ತಾಂತ್ರಿಕತೆ ಹಾಗೂ ಸಂಪನ್ಮೂಗಳ ಸಕಾಲ ಬಳಕೆಯಿಂದ ಅದು ಸಾಧ್ಯವಾಗುವಂತೆ ಸಂಬಂಧಿತ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಮೀರ್ ಶುಕ್ಲ ನುಡಿದರು.ಜಿ.ಪಂ. ಸಭಾಂಗಣದಲ್ಲಿ ಗುರುವಾರ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಜರುಗಿದ ಜಿಲ್ಲಾ ಸ್ವಯಂ ಚಾಲಿತ ವಿಕೋಪ ನಿರ್ವಹಣೆ ಯೋಜನೆಯ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸದ್ಯ ಇರುವ ವಿಕೋಪ ನಿರ್ವಹಣಾ ವ್ಯವಸ್ಥೆಯ ಸಕಾಲಕ್ಕೆ ಸ್ಪಂದಿಸದಿರುವ ಕುರಿತು ಹಲವು ಪ್ರಶ್ನೆಗಳು ಏಳುತ್ತವೆ. ಮಾಹಿತಿಯ ವಾಸ್ತವಿಕ ಸಮೀಕ್ಷೆ ನವೆಂಬರ್‌ನಲ್ಲಿ ನಡೆಯಲಿದ್ದು ಡಿಸೆಂಬರ್ ವೇಳೆಗೆ ಸ್ವಯಂ ಚಾಲಿತ ವಿಕೋಪ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲು ಉದ್ದೇಶಿಲಾಗಿದೆ. ಎಲ್ಲರೂ ಜವಾಬ್ದಾರಿಯಿಂದ ವಿಪತ್ತು ಸಂದರ್ಭದಲ್ಲಿ ಬಾಧಿತರಿಗೆ ತಕ್ಷಣ ಪರಿಹಾರ ಕಲ್ಪಿಸುವ ಈ ವಿಷಯವನ್ನು ಅತ್ಯಂತ ಗಂಭೀರತೆ ಹಾಗೂ ಕಾಳಜಿಯಿಂದ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.‘ಸ್ವಯಂ ಚಾಲಿತ ವಿಪತ್ತು ನಿರ್ವಹಣೆ ವ್ಯವಸ್ಥೆಯನ್ನು ಕಾರ್ಯರೂಪದಲ್ಲಿ ತರುವುದನ್ನು ಯೋಜಿಸಿದ ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜಕುಮಾರ ಮಾತನಾಡಿ, ತಾಂತ್ರಿಕತೆಯನ್ನು ಶಿಸ್ತುಬದ್ಧ ಮಾಹಿತಿ  ಸಂಗ್ರಹಣೆಗೆ ಅದರ ನಿರ್ವಹಣೆಗೆ ಹಾಗೂ ವಿಕೋಪ ಸಂದರ್ಭದಲ್ಲಿ ಅನಾಹುತಕ್ಕನುಸರಿಸಿ ತಕ್ಷಣದ ಕ್ರಮಗಳನ್ನು ಜಾರಿಗೊಳಿಸಲು ಪ್ರಾಯೋಗಿಕವಾಗಿ ಜಾರಿಯಾಗುತ್ತಿರುವ ನೂತನ ವ್ಯವಸ್ಥೆ ಕುರಿತು ವಿವರವಾಗಿ ವಿವರಿಸಿದರು. ಸದ್ಯ ಜಾರಿಯಲ್ಲಿರುವ ವಿಪತ್ತು ನಿರ್ವಹಣಾ ವ್ಯವಸ್ಥೆ ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇದ್ದರೂ ಅದು ಪುಸ್ತಕ ಬಳಕೆಗೆ ಸೀಮಿತವಾಗಿದ್ದು, ಅನಾಹುತವಾದಾಗ ಬಹಳಷ್ಟು ಬಾರಿ ಸರಿಯಾದ ಪರಿಹಾರ ಕಾರ್ಯ ನಿಯೋಜಿ­ಸಲು ನಿರುಪಯು­ಕ್ತವೆ­ನಿಸುತ್ತದೆ. ಇದನ್ನು  ಹೆಚ್ಚು ಪ್ರಾಯೋಗಿಕ ವ್ಯವಸ್ಥೆಯಾಗಿಸಲು ರಾಯಚೂರಿ­ನಲ್ಲಿ ಸ್ವಯಂಚಾ­ಲಿತ ವಿಪತ್ತು ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸ­ಲಾಗಿದೆ. ಅದರ ಯಶಸ್ಸಿನ ಹಿನ್ನೆಲೆ­-ಯಲ್ಲಿ ಸಂಸ್ಥೆಯು ಕೊಡಗು, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಇದನ್ನು ಜಾರಿಗೊ­ಳಿ­ಸಲು ಉದ್ದೇಶಿಸಿದೆ. ಹಿಂದಿನ ವ್ಯವಸ್ಥೆಯಲ್ಲಿ ಮಾಹಿತಿ ಕಾಲೋಚಿತ­ಗೊಳಿಸುವುದಕ್ಕೆ ಹಾಗೂ ಯಾವ ಸಂಪ­ನ್ಮೂ­ಲ­ಗಳನ್ನು ಹೇಗೆ ಎಲ್ಲಿಂದ ಬಳಸಿ­ಕೊಳ್ಳಬೇಕು ಎನ್ನುವ ಕುರಿತು ಸ್ಪಷ್ಟತೆ ಇರುತ್ತಿ­ರಲಿಲ್ಲ. ಈಗ ಪರಿಷ್ಕೃತ ವ್ಯವಸ್ಥೆಯಲ್ಲಿ 145 ಸಂಪ­ನ್ಮೂ­ಲಗಳ ಮಾಹಿತಿ ಕ್ರೋಢಿೀಕರಣವಾಗಲಿದೆ’ ಎಂದರು.ಸಂಪಸ್ಮೂಲ ವ್ಯಕ್ತಿಯಾಗಿ ಬಂದಿದ್ದ ಡಾ.ಆರ್. ಧರ್ಮರಾಜು, ಉಳಿದ ತರಬೇತಿಗಳಿಗಿಂತ ಈ ಕಾರ್ಯಾಗಾರದ ಉದ್ದೇಶ ಭಿನ್ನವಾಗಿದೆ. ವಿಕೋಪ ನಿರ್ವಹಣೆ ಸಂದರ್ಭದಲ್ಲಿ ತಾಂತ್ರಿಕತೆ ಹಾಗೂ ಹೊಸ ಮಾಹಿತಿಗಳ ಅಳವಡಿಕೆ ಹಾಗೂ ಅವುಗಳ ನಿರಂತ ಕಾಲೋಚಿತಗೊಳಿಸುವಿಕೆ ಮೂಲಕ ಸರ್ವ­ಸನ್ನ­ದ್ಧತೆಯಿಂದ ಕರ್ಯನಿರ್ವಹಿಸಲು ಸಾಧ್ಯವಾ­ಗಲಿದೆ ಎಂದರು. ಡಾ.ಜಿ.ವಿಶ್ವನಾಥ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry