ಭಾನುವಾರ, ಜೂನ್ 20, 2021
22 °C

‘ವಿಪ್ರರಿಗೆ ಸರ್ಕಾರಿ ಸೌಲಭ್ಯಗಳ ಕೊರತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ:   ಸಮಾಜದ ಏಳಿಗೆ­ಯನ್ನು ಬಯಸುವುದೊಂದಿಗೆ ಅದನ್ನು ಉಳಿಸಿಕೊಂಡು ಹೋಗುವುದು ವಿಪ್ರರ ಕರ್ತವ್ಯ ಎಂದು ಬ್ರಾಹ್ಮಣ ಸೇವಾ ಮಂಡಲಿ ನೂತನ ಅಧ್ಯಕ್ಷ ಎಚ್.ಆರ್.­ಶೇಷಗಿರಿ ರಾವ್ ತಿಳಿಸಿದರು.ಬ್ರಾಹ್ಮಣ ಸಮುದಾಯ ಭವನ­ದಲ್ಲಿ ಬ್ರಾಹ್ಮಣ ಸೇವಾ ಮಂಡಳಿ ಏರ್ಪ­ಡಿಸಿದ್ದ ೨೦೧೩–-೧೪ ನೇ ಸಾಲಿನ ವಾರ್ಷಿ­ಕೋತ್ಸವ ಹಾಗೂ ಮೂಲ­ಭೂತ ಸೌಕರ್ಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು  ಮಾತನಾಡಿದರು.ವಿಪ್ರರಿಗೆ ಸರ್ಕಾರದಲ್ಲಿ ಯಾವ ಸೌಲಭ್ಯ ಸಿಗುತ್ತಿಲ್ಲ. ಇದಕ್ಕೆ ಸಮು­ದಾಯದ ಒಗ್ಗಟ್ಟು ಇಲ್ಲದಿರುವುದೇ ಕಾರಣ. ಆದ್ದರಿಂದ ಎಲ್ಲರೂ ಸಂಘಟಿತ­ರಾಗಬೇಕು ಎಂದು ತಿಳಿಸಿದರು.ಡಾ.ಟಿ.ಕೆ.ಸತ್ಯಪ್ರಸಾದ್ ಕಾರ್ಯ­ಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ಸಮಾಜದವರ ಸಹಕಾರ­ದಿಂದ ಉತ್ತಮವಾಗಿ ನಡೆಯುತ್ತಿದೆ ಎಂದರು.ಸಂಘದ ಅಧ್ಯಕ್ಷ ಮುರಳೀಧರ ಭಟ್ಟಾ­ಚಾರ್ಯ ಮಾತನಾಡಿ, ಈ ಬಾರಿ ೧೮ ಲಕ್ಷ ರೂ ವೆಚ್ಚದಲ್ಲಿ ಉತ್ತಮ ಸೌಲಭ್ಯವುಳ್ಳ  ರುದ್ರಭೂಮಿ ಹಾಗೂ ಅಪರ ಕರ್ಮ ಮಂಟಪ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.ಹಿರಿಯರಾದ ಎಸ್.ಗೋವಿಂದ­ರಾವ್, ವಾಸುದೇವರಾವ್, ಸುಶೀ­ಲಮ್ಮ, ಎ.ಎಸ್.ಐ ರಾಮಕೃಷ್ಣ­ಮೂರ್ತಿ ಅವರನ್ನು

ಸನ್ಮಾನಿಸಲಾ­ಯಿತು.ಗುರುಪ್ರಸಾದ್ ವೇದ ಘೋಷ ನಡೆ­ಸಿ­ಕೊಟ್ಟರು. ಕಾರ್ಯದರ್ಶಿ ವಿಜ­ಯ­ಕುಮಾರ್ ವಾರ್ಷಿಕ ವರದಿ ಓದಿ­ದರು. ನೂತನ ಅಧ್ಯಕ್ಷರಾಗಿ ಎಚ್.ಆರ್.­­ಶೇಷ­ಗಿರಿರಾವ್ ಅಧಿಕಾರ ವಹಿಸಿಕೊಂಡರು,  ಕಾರ್ಯ­ದರ್ಶಿ­ಯಾಗಿ ಗಾಯಿತ್ರಿ ಜಗದೀಶ್ ನೇಮಕ­ಗೊಂಡರು.ವಿ.ಎಸ್.ರವಿ, ಎಸ್.ಚಂದ್ರಮೌಳಿ, ಸೂರ್ಯನಾರಾಯಣಬಾಬು, ಕುಮಾ­ರ­ಸ್ವಾಮಿ, ಎಸ್.ರಮೇಶ್, ಎಸ್.­ಸ­ತೀಶ್ ಕುಮಾರ್, ಜಿ.ವೀಣಾ, ಪ್ರಕಾಶ್‌, ಸುವರ್ಣ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಮಾರುತಿ ಶಂಕರ್, ಟಿ.ಎನ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.