ಮಂಗಳವಾರ, ಜನವರಿ 21, 2020
28 °C

‘ವಿಶೇಷ ನ್ಯಾಯಾಲಯ’ ಪ್ರಶ್ನಿಸಿ ಮುಷರಫ್‌ ರಿಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ (ಪಿಟಿಐ): ತಮ್ಮ ಮೇಲಿನ ರಾಜ­ದ್ರೋಹ ಆರೋಪದ ವಿಚಾ­­ರಣೆಗಾಗಿ ವಿಶೇಷ ನ್ಯಾಯಾ­ಲಯ ಸ್ಥಾಪಿಸುವ ಸರ್ಕಾರದ ಕ್ರಮ­ವನ್ನು ಪಾಕಿ­ಸ್ತಾನದ ಮಾಜಿ ಸೇನಾ­ಡಳಿತ­­ಗಾರ ಪರ್ವೇಜ್‌ ಮುಷ­ರಫ್‌ ಶನಿ­ವಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.  ’2007­ರಲ್ಲಿ ಸೇನೆಯ ಮುಖ್ಯ­ಸ್ಥ­ನಾಗಿ­ದ್ದಾಗ ದೇಶ­ದಲ್ಲಿ ತುರ್ತುಸ್ಥಿತಿ ಹೇರಿದ್ದು, ಈ ಪ್ರಕ­ರ­ಣವನ್ನು ನಾಗರಿಕ ನ್ಯಾಯಾ­ಲ­ಯ ವಿಚಾ­ರಣೆ ನಡೆಸಲು ಬರು­ವು­ದಿಲ್ಲ’ ಎಂದು ಅವರು ಅರ್ಜಿ­ಯಲ್ಲಿ ತಿಳಿಸಿದ್ದಾರೆ.‘ವಿಶೇಷ ನ್ಯಾಯಾಲಯ ಸ್ಥಾಪನೆ ಪ್ರಶ್ನಿಸಿ ಇಲ್ಲಿನ ಹೈಕೋರ್ಟ್‌­ನಲ್ಲಿ ರಿಟ್‌ ಅರ್ಜಿ ಸಲ್ಲಿಸ­-ಲಾಗಿದೆ’ ಎಂದು ಮುಷ­ರಫ್‌ ಪರ ಹಿರಿಯ ವಕೀಲ ಅಲಿ ಸೈಫ್‌ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.‘ಮುಷರಫ್ ವಿಚಾರಣೆ ನಡೆ­ಸಲು ವಿಶೇಷ ನ್ಯಾಯಾಲಯ ಸಮರ್ಥನೀ­­­ಯ­ವಲ್ಲ. ಸೇನಾ ಮುಖ್ಯಸ್ಥ­ನಿಗೆ ಪಾಕಿಸ್ತಾನ ಸೇನಾ ಕಾಯ್ದೆ–1952­ರನ್ವಯ ನಡೆ­ದು­ಕೊಳ್ಳುವ ಅಧಿಕಾರ­ವಿದೆ’ ಎಂದು ಹೇಳಿದ್ದಾರೆ.ರಾಜದ್ರೋಹ ಆರೋಪದ ಮೇಲೆ ಮಾಜಿ ಸೇನಾಡಳಿತ­ಗಾರರೊ­ಬ್ಬರು ವಿಚಾ­­ರಣೆ ಎದುರಿಸುತ್ತಿರುವುದು ಪಾಕಿ­ಸ್ತಾನ ಇತಿಹಾಸದಲ್ಲೇ ಮೊದಲು. ಮುಷರಫ್‌ ರಾಜದ್ರೋಹ ಆರೋಪ ಎಂದು ಸಾಬೀತಾ­ದರೆ ಜೀವಾವಧಿ ಅಥವಾ ಗಲ್ಲು ಶಿಕ್ಷೆಗೆ ಗುರಿಯಾಗ­ಬೇಕಾಗುತ್ತದೆ.

ಪ್ರತಿಕ್ರಿಯಿಸಿ (+)