‘ವುಡ್‌ಲ್ಯಾಂಡ್- ಅಡ್ವೆಂಚರ್ ವಾಂಟೆಡ್’ ಅಭಿಯಾನ

7

‘ವುಡ್‌ಲ್ಯಾಂಡ್- ಅಡ್ವೆಂಚರ್ ವಾಂಟೆಡ್’ ಅಭಿಯಾನ

Published:
Updated:

ಔಟ್ ಡೋರ್ ಅಡ್ವೆಂಚರ್ ವೇರ್ ಬ್ರಾಂಡ್ ಸಂಸ್ಥೆಯಾದ ವುಡ್‌ಲೆಂಡ್ ‘ವುಡ್‌ಲೆಂಡ್-ಅಡ್ವೆಂಚರ್ ವಾಂಟೆಡ್’ ಎಂಬ ವಿನೂತನ ರೀತಿಯ ಅಭಿಯಾನವೊಂದನ್ನು ಪ್ರಕಟಿಸಿದೆ.ಸಂಸ್ಥೆಯು ಸಾಹಸ ಪ್ರವಾಸ ಕೈಗೊಳ್ಳುವ ಆಸಕ್ತಿ ಹೊಂದಿರುವ ಸಾಹಸಿಗರ ಹುಡುಕಾಟ ನಡೆಸಿ, ಆಯ್ಕೆಯಾದವರನ್ನು ವಿಶ್ವದ ವಿವಿದೆಡೆಯ ಸಾಹಸಮಯ ತಾಣಗಳಿಗೆ ಉಚಿತವಾಗಿ ಕಳುಹಿಸುತ್ತಾರೆ. ವುಡ್‌ಲೆಂಡ್ ಸಂಸ್ಥೆ ನಡೆಸುವ ಅಭಿಯಾನದಲ್ಲಿ ಆಯ್ಕೆಯಾದ ಸಾಹಸಿಗರು ಮೈ ನವಿರೇಳಿಸುವ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದುಕೊಳ್ಳಲಿದ್ದಾರೆ.ಭಾರತದ ಯಾವ ಮೂಲೆಯಿಂದಲೂ ಯಾವುದೇ ವಯೋಮಾನದ ಉತ್ಸಾಹಿ ಸಾಹಸಿಗರು ಅರ್ಜಿ ಹಾಕಬಹುದಾಗಿದೆ. ಅಂದಹಾಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಉತ್ಸಾಹಿಗಳು ತಮ್ಮ ಸಾಹಸ ಪ್ರವಾಸದ ಫೋಟೊ ಅಥವಾ 30ರಿಂದ 60ಸೆಕೆಂಡುಗಳ ವೀಡಿಯೋ ತುಣುಕೊಂದನ್ನು ಸಲ್ಲಿಸ ಬೇಕಾಗುತ್ತದೆ.ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು 14 ಸೆಪ್ಟೆಂಬರ್ 2013 ಅರ್ಜಿ ಸಲ್ಲಿಸುವ ಕೊನೆಯ ಅವಕಾಶವಾಗಿದೆ.ಆಯ್ಕೆಯಾದವರ ಪಟ್ಟಿಯನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪ್ರಕಟಿಸಲಾಗುವುದು ಹಾಗೂ ಅಕ್ಟೋಬರ್‌ನಲ್ಲಿ ವಿಶ್ವದ ವಿವಿದೆಡೆಯ ಸಾಹಸೀ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಅವಕಾಶ ಲಭ್ಯವಾಗುತ್ತದೆ.ಆಸಕ್ತರು ತಮ್ಮ ಅರ್ಜಿಗಳನ್ನು www.adventurerwanted.com/woodland ಲಾಗ್ ಇನ್ ಮಾಡಿ ಸಲ್ಲಿಸ ಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8971498865

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry