ಮಂಗಳವಾರ, ಜೂನ್ 15, 2021
27 °C

‘ವೈಜ್ಞಾನಿಕ ದೃಷ್ಟಿಕೋನ ಬೆಳೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಇಂದಿನ ಸಕಲ ಸೌಕರ್ಯಗಳಿಂದ ಒಡಗೂಡಿದ ಜೀವನಕ್ಕೆ  ವಿಜ್ಞಾನದ ಕೊಡುಗೆ ಅನನ್ಯವಾದುದು. ಅವಶ್ಯಕತೆಗಳು ಹೊಸದನ್ನು ಹುಡುಕಲು ಕಲಿಸಿದವು. ಚಕ್ರ–ಬೆಂಕಿಯಿಂದ ಆರಂಭಿಸಿ ಇಂದಿನ ಕಂಪ್ಯೂಟರ್‌ ವರೆಗೆ ನಡೆದಿರುವ ಸಂಶೋಧನೆಗಳು ಮಾನವ ವಿಜ್ಞಾನ ದಲ್ಲಿ ಸಾಧಿಸಿರುವ ಅಭಿವೃದ್ಧಿಯ ದ್ಯೋತಕವಾಗಿವೆ ಆದರೆ ಪ್ರತಿ ಸಂಶೋಧನೆಗಳ ಹಿಂದೆ ಸಾವಿರ ವೈಫಲ್ಯಗಳು ಇವೆ ಎಂದು ವಿದ್ಯಾಭಾರತಿ ಸಂಸ್ಥೆಯ ಆಡಳಿತಾಧಿಕಾರಿ  ಎಸ್.ಸಿ.ಸಲಬಣ್ಣ ಹೇಳಿದರು.ರಾಷ್ಟ್ರೀಯ ವಿಜ್ಞಾನ- ದಿನದ ಅಂಗವಾಗಿ ಸರ್ ಸಿ.ವಿ.ರಾಮನ್‌ರ `ರಾಮನ್ ಪರಿಣಾಮದ ಸಂಶೋಧನೆಯ ದಿನಾಚರಣೆ ಅಂಗವಾಗಿ ಬಾಲಭಾರತಿ ವಿದ್ಯಾಮಂದಿರ ಸಂಸ್ಥೆಯ ವಿದ್ಯಾಭಾರತಿ ಪ್ರೌಢಶಾಲೆಯ ವತಿಯಿಂದ ನಡೆದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ವಿದ್ಯಾರ್ಥಿಗಳಲ್ಲಿ  ವೈಜ್ಞಾನಿಕ ದೃಷ್ಟಿಕೋನವನ್ನು ಬಿತ್ತ ಬೇಕು. ಇಂದು ಜಗತ್ತಿನಲ್ಲಿ ಹೆಚ್ಚಿನ ಪ್ರತಿಭಾಶಾಲಿಗಳೆಂದರೆ ಭಾರತೀಯರೇ ಆಗಿದ್ದು, ವಿದ್ಯಾರ್ಥಿ ದೆಸೆಯಲ್ಲಿಯೆ ವಿಜ್ಞಾನಿಗಳನ್ನು ರೂಪಿಸುವ ಕೆಲಸ ನಡೆಯಬೇಕು ಎಂದರು.ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಾಯಬಣ್ಣ ಆಲ್ಯಾಳ, ಸಂಸ್ಥೆಯ ಅಧ್ಯಕ್ಷ ವಿ.ಎ. ಹಜೇರಿ, ಬಿಇಓ ಜೆ.ಟಿ.ತಳ್ಳಿಕೇರಿ,  ಮುಖ್ಯ ಶಿಕ್ಷಕ  ಜಿ.ಸಿ.ಮಠ, ಶಿಕ್ಷಕ ಎಸ್.ಬಿ.ಜಾಧವ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಥೆಯ ಸದಸ್ಯರಾದ ಸಂಭಾಜಿ ವಾಡಕರ, ಬಂಡು ಧಾಯಪುಲೆ, ಕೃಷ್ಣಾಜಿ ಲೋಕರೆ, ಶ್ಯಾಮ ಹಂಚಾಟೆ, ತಮ್ಮಣ್ಣ ದೇಶಪಾಂಡೆ, ಮಲ್ಲಿಕಾರ್ಜುನ ಹಿಪ್ಪರಗಿ, ಸಿ.ಬಿ.ಗೋಗಿ, ಎಂ.ಎ. ಬಾಗೇವಾಡಿ, ಜಿ.ಬಿ.ಕುಲಕರ್ಣಿ, ಐ.ಎಸ್. ಸಜ್ಜನ, ಎಸ್.ವಿ.ಘಾರೆ, ಎಂ.ಬಿ.ರಜಪೂತ, ಧರ್ಮಣ್ಣ ಕಟ್ಟಿಮನಿ, ರಾಘವೇಂದ್ರ, ರೆಡ್ಡಿ ಸರ್  ಪ್ರಕಾಶ ಹುಲಜಂತಿ, ಎಲ್.ಎಸ್.ಬಾಯಸ್, ಜಿ.ವಿ.ಬಡಿಗೇರ, ಡೋಟಿಹಾಳ ಸರ್,  ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.