‘ವೈದ್ಯರು ಗ್ರಾಮೀಣ ಭಾಗದತ್ತ ಗಮನ ಹರಿಸಿ’

7

‘ವೈದ್ಯರು ಗ್ರಾಮೀಣ ಭಾಗದತ್ತ ಗಮನ ಹರಿಸಿ’

Published:
Updated:

ಉಳ್ಳಾಲ: ವೈದ್ಯರು ಎರಡು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದಾಗ ಬಡವರ ಕಷ್ಟಗಳನ್ನು ಅರಿಯಲು ಸಾಧ್ಯ, ಅವರ ಸೇವೆ ಮಾಡು­ವುದರೊಂದಿಗೆ ವೃತ್ತಿ ಜೀವನ­ದಲ್ಲಿಯೂ ಯಶಸ್ಸು ಗಳಿಸಲು ಸಾಧ್ಯ ಎಂದು  ಎಂದು ನಿಟ್ಟೆ ವಿಶ್ವವಿದ್ಯಾ­ಲಯ­ದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಭಿ­ಪ್ರಾಯಪಟ್ಟರು.ಅವರು ದೇರಳಕಟ್ಟೆಯ ಕೆ.ಎಸ್.­ಹೆಗ್ಡೆ ಆಡಿ­ಟೋರಿಯಂ­ನಲ್ಲಿ ಶನಿವಾರ ನಡೆದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ 14ನೇ ವಾರ್ಷಿಕೋತ್ಸ­ವ­ದ ಅಧ್ಯಕ್ಷತೆ ವಹಿಸಿದ್ದರು.ಸಮಾಜ ವೈದ್ಯರನ್ನು ಉನ್ನತ ಸ್ಥಾನದಲ್ಲಿ ಕಾಣುತ್ತಿದೆ. ಹಾಗಾಗಿ ವೈದ್ಯ­ರು ತಮ್ಮ ವೃತ್ತಿ ಜೀವನದಲ್ಲಿ ಕೆಲವು ವರ್ಷವಾದರೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಕೆ.ಎಸ್.ಹೆಗ್ಡೆ ವೈದ್ಯ­ಕೀಯ ಕಾಲೇಜಿನಲ್ಲಿ 50ಶೇ. ವೈದ್ಯ­ಕೀಯ ವಿದ್ಯಾರ್ಥಿ­ಗಳು, ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತಪಾಸಣೆಗೆ ಬರುತ್ತಿರುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪೈಕಿ 50ರಿಂದ 60ಶೇ. ರೋಗಿಗಳು ಕೇರಳ ರಾಜ್ಯದವರೇ ಆಗಿದ್ದಾರೆ. ನೆರೆಯ ರಾಜ್ಯದ ಜೊತೆಗೆ ಸಂಸ್ಥೆ ಹಿಂದಿನಿಂದಲೂ ಉತ್ತಮ ಸಂಬಂಧವಿಟ್ಟು­ಕೊಂಡಿದ್ದು ಹಲವು ವರ್ಷಗಳಿಂದ ಸಂಸ್ಥೆ ‘ಎ’ ದರ್ಜೆ­ಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿ­ದರು.ಕಾಲೇಜು ಸ್ಮರಣ ಸಂಚಿಕೆಯನ್ನು ವಿದ್ಯಾರ್ಥಿ ಸಂಪಾದಕಿ ಸಾಕಿನ್ಯ ಹೆಗ್ಡೆ, ಸಂಪಾದಕೀಯ ಸಮಿತಿ ಸಿಬ್ಬಂದಿ ಸಲಹೆಗಾರ್ತಿ ಡಾ.ಶೋಭಾ ಶೆಟ್ಟಿ ಹಾಗೂ ಗ್ರಾಮ  ಕ್ಷೇಮ ಹೆಲ್ತ್ ಕಾರ್ಡ್‌­ನ್ನು ಕುಲಪತಿ ಡಾ.ಎಸ್.­ರಮಾನಂದ ಶೆಟ್ಟಿ ಬಿಡುಗಡೆ­ಗೊಳಿಸಿ­ದರು.ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ನಾಲ್ಕು ಮಂದಿ ಹಿರಿಯ ವೈದ್ಯರಾದ ಫಿಸಿಯೋಲಾಜಿ ಪ್ರೊಫೆಸರ್ ಡಾ.ವಿ. ಜಯದೇವಿ ಮಾಥೂರ್, ಬಯೋ­ಕೆಮೆಸ್ಟ್ರಿ ಪ್ರೊಫೆಸರ್ ಡಾ. ಸುಂದರ ದೇವಿ, ಅನಾಟೆಮಿ ಪ್ರೊಫೆಸರ್ ಡಾ.­ರಾಜರಾಜೇಶ್ವರಿ ಹಾಗೂ ಫೊರೆ­ನ್ಸಿಕ್ ಮೆಡಿಸಿನ್‌ನ ಪ್ರೊಫೆಸರ್ ಡಾ. ಲಕ್ಷ್ಮ­­ಣ ಪೈ ಅವರನ್ನು ಸನ್ಮಾನಿಸ­ಲಾ­ಯಿತು.ಸನ್ಮಾನಿತರ ಕುರಿತು ಕ್ಷೇಮ ವೈಸ್ ಡೀನ್ ಡಾ.ಅಮೃತ್ ಎಂ. ಮಿರಾಜ್‌­ಕರ್, ಬಯೋಕೆಮೆಸ್ಟಿ ್ರ ವಿಭಾಗ ಮುಖ್ಯಸ್ಥೆ ಡಾ.ಸುಕನ್ಯ ಶೆಟ್ಟಿ, ಪಿಡಿಯಾ­ಟ್ರಿಕ್ಸ್ ವಿಭಾಗ ಮುಖ್ಯಸ್ಥೆ ಡಾ.ವಿಜಯ ಶೆಣೈ ಹಾಗೂ ಫೊರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.­ಮಹಾಬಲ ಶೆಟ್ಟಿ ಸನ್ಮಾನಿತರ ಕುರಿತು ವಾಚಿಸಿದರು.ಸಾಧನೆಗೈದವರ ಪಟ್ಟಿಯನ್ನು ಕ್ಷೇಮ ಕುಲಸಚಿವ ಪ್ರೊ. ಜಯಪ್ರಕಾಶ್ ಶೆಟ್ಟಿ ವಾಚಿಸಿದರು.

ಸಹ ಕುಲಾಧಿಪತಿ ಪ್ರೊ.ಎಂ.­ಶಾಂತಾ­ರಾಮ್ ಶೆಟ್ಟಿ ಸನ್ಮಾನಿತರು ಸಂಸ್ಥೆಗೆ ಸಲ್ಲಿಸಿದ ಸೇವೆಯ ಗುಣಗಾನ ಮಾಡಿ­ದರು. ಕುಲಪತಿ ಡಾ.ಎಸ್.­ರಮಾ­ನಂದ ಶೆಟ್ಟಿ ಪಾ್ರಸ್ತಾವಿಕವಾಗಿ ಮಾತ­ನಾಡಿದರು.ಕ್ಷೇಮ ಡೀನ್ ಡಾ.ಸತೀಶ್ ಕುಮಾ­ರ್ ಭಂಡಾರಿ ಸ್ವಾಗತಿಸಿದರು.  ಕ್ಷೇಮ ವೈಸ್ ಡೀನ್ ಡಾ.ಅಮೃತ್ ಎಂ. ಮಿರಾ­ಜ್‌­ಕರ್ ವಾರ್ಷಿಕ ವರದಿ ಮಂಡಿ­ಸಿ­ದರು. ಅನೂಪ ಆ್ಯನ್ ಪೆರು­ಮಾಳ್ ಹಾಗೂ ಕ್ರಿಸ್ಟಿನ್ ಎ.ಥೋಮ­ಸ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry