‘ಶಿಕ್ಷಕರ ಪಾತ್ರ ಹಿರಿದು’

7

‘ಶಿಕ್ಷಕರ ಪಾತ್ರ ಹಿರಿದು’

Published:
Updated:

ಗುರುಮಠಕಲ್: ಸಮಾಜದಲ್ಲಿ ಉತ್ತಮ ಸಂಸ್ಕಾರವನ್ನು ಕಲಿಯಲು ಗುರುಗಳ ಪಾತ್ರ ಹಿರಿದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅಭಿ­ಪ್ರಾಯಪಟ್ಟರು.ಸಮೀಪದ ಯಾನಾಗುಂದಿಯ ವೃಷಭ ಫೌಂಡೇಶನ್‌ ವತಿಯಿಂದ ಹಮ್ಮಿಕೊಳ್ಳಲಾದ ಶಿಕ್ಷಕರಿಗೆ ಸನ್ಮಾನ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದಲ್ಲಿದ್ದ ಗುರು ಶಿಷ್ಯರ ಪರಂಪರೆ ಇನ್ನೂ ಜೀವಂತ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಯಾವುದೆ ಒಬ್ಬ ವ್ಯಕ್ತಿ ಉನ್ನತ ಸ್ಥಾನ ಪಡೆಯಲು ಗುರುಗಳ ಮಾರ್ಗದರ್ಶನ ಖಂಡಿತವಾಗಿ ಬೇಕಾಗಿರುವಂತಹದ್ದು. ಒಳ್ಳೆಯ ಸಮಾಜ ಕಟ್ಟುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಮ್.ಎಸ್ ವಸ್ತ್ರದ ಮಾತನಾಡಿ ಶಿಕ್ಷಕರನ್ನು ಮಕ್ಕಳ ಕಲಿಕೆಗೆ ಸೀಮಿತವಾಗಿರಿಸದೇ ಸಾಕಷ್ಟು ಹೊರೆಯನ್ನು ಹಾಕುತ್ತಿದ್ದು, ಇದರಿಂದಾಗಿ ಕಲಿಕಾ ಮಟ್ಟ ಕುಂಟಿತಗೊಳ್ಳುತ್ತಿರುವುದಾಗಿ ವಿಷಾಧಿಸಿದರು. ಶಿಕ್ಷಣ ಸಚಿವರ ಜೊತೆ ಚರ್ಚಿಸಿ ಈ ಕುರಿತು ಕ್ರಮಕೈಗೊಳ್ಳಲು ಮನವಿ ಮಾಡಿದರು. ಶಿಕ್ಷಕರು ಸೇವೆಸಲ್ಲಿಸುತ್ತಿರುವಲ್ಲೇ ಅವರ ಅನುಕೂಲಕ್ಕೆ ವಸತಿ ನಿಲಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ರಮಕೂಗಳ್ಳಲು ಸಹ ಮನವಿ ಮಾಡಿದರು.ಸಮಾರಂಭದಲ್ಲಿ ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲೆಯ ದತ್ತಾತ್ರೇಯ ಪಾಂಚಾಳ ಸಿಆರ್ಪಿ ಕಾನಾಗಡ್ಡ , ಬಾಲರಾಜ ಎಮ್. ಚಂಡರಕಿ, ಚೆನ್ನಾರಡ್ಡಿ ಸಂಗಯ್ಯ ಮಠಪತಿ, ನಿವೃತ್ತ ಶಿಕ್ಷಕ ಪ್ರಭಾವತಿ ಶಿಕ್ಷಕರಿಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಮತ್ತು ಗಣ್ಯರು ಸನ್ಮಾಸಿದರು. ಮಾಣಿಕೇಶ್ವರಿ ಆಶ್ರಮದ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಅಧ್ಯಕ್ಷೆತ ವಹಿಸಿಹಿಸಿದ್ದರು, ಗುಲ್ಬರ್ಗ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸನ್ಮಾನ ಸ್ವೀಕರಿಸಿ ದತ್ತಾತ್ರೇಯ ಪಾಂಚಾಳ ಮಾತನಾಡಿದರು.ಎನ್.ಸಿ ರಾಟಿಮನಿ ಪ್ರಾಸ್ಥಾವಿಕ ಮಾತನಾಡಿದರು. ಫೌಂಡೇಶನ್ ಕಾರ್ಯದರ್ಶಿ ವೀರೇಶ ಪಾಟೀಲ್ ಸರ್ವರನ್ನು ಸ್ವಾಗತಿಸಿದರು. ಶಿವಕುಮಾರ ಮಾಮಡಿ ವಂದಿಸಿದರು, ಸಹಶಿಕ್ಷಕ ಮಹೇಶ ನಿರೂಪಿಸಿದರು.ದೇಶ ವಿದೇಶಗಳಲ್ಲಿ ಹೆಸರಾಂತ ಹಾಸ್ಯ ಕಲಾವಿದ ಬಿ.ಪ್ರಾಣೇಶ ಅವರ ಹಾಸ್ಯವನ್ನು ಆಲಿಸಿ ಪ್ರೇಕ್ಷಕರು ನಕ್ಕು ನಲಿದರು. ಬಸವರಾಜ ಮಾಮನಿ, ನರಸಿಂಹ ಜೋಷಿ ಮನರಂಜಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry