ಶನಿವಾರ, ಜೂನ್ 19, 2021
26 °C

‘ಶಿಕ್ಷಣ ಹಕ್ಕು ಸದುಪಯೋಗಪಡಿಸಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಬಡವರು, ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಎಲ್ಲಾ ವರ್ಗದ ಪಾಲಕರು ತಮ್ಮ ಮಕ್ಕಳ ಕಡ್ಡಾಯ ಶಿಕ್ಷಣಕ್ಕೆ ಮುಂದಾಗಬೇಕು ಎಂದು ಸಂಸದ ಧರ್ಮಸಿಂಗ್‌ ಹೇಳಿದರು.ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿನ  ಅನುಭವ ವಿದ್ಯಾಪೀಠದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಒಳ್ಳೆಯ ಶಿಕ್ಷಣ ಪ್ರಸಾರ ಮಾಡುತ್ತಿರುವ ಅನುಭವ ವಿದ್ಯಾಪೀಠಕ್ಕೆ ಸಂಸದರ ನಿಧಿಯಿಂದ ₨10ಲಕ್ಷ  ಅನುದಾನ ನೀಡಲಾಗಿದೆ ಎಂದರು.ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದರು. ಕೋನಮೇಳಕುಂದಾ ಗ್ರಾಮದ ಸರ್ವಾಂಗೀಣ ವಿಕಾಸಕ್ಕಾಗಿ ಸಾಕಷ್ಟು ಅನುದಾನ ಒದಗಿಸಲಾಗಿದ್ದು, ಮುಂದೆಯೂ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.ಜೆಡಿಎಸ್ ಮುಖಂಡ ಈಶ್ವರಪ್ಪ ಚಾಕೋತೆ, ಶಾಹೀನ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್‌ ಖದೀರ್‌, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ, ಚಂದ್ರಪ್ಪ ಬಿರಾದಾರ, ತಾ.ಪಂ ಸದಸ್ಯೆ ತಾರಾಬಾಯಿ ಭೀಮಣ್ಣ ತುಗಶೆಟ್ಟೆ, ಸೋಮನಾಥಪ್ಪ ಅಷ್ಟೂರೆ, ಗ್ರಾಪಂ ಅಧ್ಯಕ್ಷೆ ಶೋಭಾವತಿ ಮೇತ್ರೆ, ಸಿದ್ಧಯ್ಯ ಕಾವಡಿಮಠ, ಶಾಂತಕುಮಾರ ಪ್ರಭಾ, ಹಾವಶೆಟ್ಟಿ ಪಾಟೀಲ, ಕಂಟೆಪ್ಪ ಗಂದಿಗೂಡೆ, ಕಾಶಪ್ಪ ಬಿರಾದಾರ, ಮುಖ್ಯಗುರು ಶಶಿಕಲಾ ಮಾಸಿಮಾಡೆ ಇದ್ದರು.ಕೆ.ವಿ. ಪಾಟೀಲ ಸ್ವಾಗತಿಸಿದರು. ರಮೇಶ ಪಾಂಚಾಳ ನಿರೂಪಿಸಿದರು. ಬಸವರಾಜ ಕೋಡಗೆ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.