‘ಶೌಚಾಲಯ ಇಲ್ಲದಿದ್ದರೆ ಸೌಲಭ್ಯ ಇಲ್ಲ’

7

‘ಶೌಚಾಲಯ ಇಲ್ಲದಿದ್ದರೆ ಸೌಲಭ್ಯ ಇಲ್ಲ’

Published:
Updated:

ಕನಕಗಿರಿ: ಮಾರ್ಚ್‌ ತಿಂಗಳೊಳಗೆ ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಗ್ರಾಮದ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾ­ಗುವುದಿಲ್ಲ ಎಂದು ಗ್ರಾಮ ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿ­ಕಾರ್ಜುನ ಕಡಿವಾಳರ ತಿಳಿಸಿದರು.ಸ್ಥಳೀಯ ಜಾಮೀಯ ಮಸೀದಿ ಪರಿಸರದಲ್ಲಿ ಬುಧವಾರ ಶೌಚಾ­ಲಯ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.ಪ್ರತಿಯೊಂದು ಕುಟುಂಬವು ಶೌಚಾ­ಲಯ ಹೊಂದುವುದು ಕಡ್ಡಾಯವಾ­ಗಿದೆ, ಈ ನಿಟ್ಟಿನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗಿದೆ, ಜಾಬ್‌ ಕಾರ್ಡ್‌ ಇಲ್ಲವರಿಗೆ ತಕ್ಷಣವೆ ಮಾಡಿಕೊಡಲಾಗುವದು, ಪರಿಶಿಷ್ಟ ಜಾತಿ, ಪಂಗಡದವರಿಗೆ ₨ 15, ಇತರೆ ಜನಾಂಗದವರಿಗೆ ₨ 9200 ಪ್ರೋತ್ಸಾಹ ಧನ ನೀಡಲಾಗುವುದು, ಶೌಚಾಲಯ ನಿರ್ಮಿಸಲು ಪ್ರೇರಣೆ ನೀಡಿದವರಿಗೂ ಸಹ ತಲಾ ಒಂದು ಶೌಚಾಲಯಕ್ಕೆ  ₨ 150 ನೀಡಲಾಗು­ವುದು ಎಂದರು.ಸ್ವಯಂ ಸೇವರಕು ಮನೆ, ಮನೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ಸರಿಯಾದ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು. 

ಭಾವಚಿತ್ರ, ಬ್ಯಾಂಕ್‌ ಖಾತೆ, ಪಡಿ­ತರ ಚೀಟಿ,  ಇತರೆ ಮಾಹಿತಿ­ಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಂಗನ­ವಾಡಿ ಕಾರ್ಯಕರ್ತೆ ಗೌಸಿಯಾ ಬೇಗಂ, ಆಶಾ ಕಾರ್ಯ­ಕರ್ತೆ ಶ್ರೀದೇವಿ ಮಾದಿನಾಳ ಹೇಳಿದರು.  ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಮಾಬೀ ಬೇಲ್ದಾರ, ರಾಜಾಸಾಬ ನಂದಾಪುರ, ಪ್ರಮುಖರಾದ ಕಾಶಿಪತಿ ಕಮ್ಮಾರ, ವಿಶ್ವಾರಾಧ್ಯ ಸ್ವಾಮಿ ಚಿಂತಕುಂಟಿಮಠ,  ನಟರಾಜ ಮಡಿವಾಳರ, ಹೊನ್ನೂರುಸಾಬ ಅಗರಬತ್ತಿ, ಹುಸೇನಬೀ, ಮೈಬೂಬಿ ಗೋಡೆಕಾರ ಇತರರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry