‘ಶ್ರಮದಾನ ಶಿಬಿರ ಶಿಸ್ತು ಮೂಡಿಸುತ್ತದೆ’

7

‘ಶ್ರಮದಾನ ಶಿಬಿರ ಶಿಸ್ತು ಮೂಡಿಸುತ್ತದೆ’

Published:
Updated:

ಹನುಮಸಾಗರ: ಸಮೀಪದ ಕಬ್ಬರಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಚಾರ್ಲ್ಸ್‌­ಡಾರ್ವಿನ್‌ ಇಕೋಕ್ಲಬ್‌ ವತಿಯಿಂದ ವಿದ್ಯಾರ್ಥಿಗಳಿಗೆ  ಶ್ರಮದಾನ ಶಿಬಿರ ಏರ್ಪಡಿಸಲಾಗಿತ್ತು.ಮುಖ್ಯಶಿಕ್ಷಕಿ ಎಚ್.ಪ್ರಭಾ ಮಾತನಾಡಿ, ಶ್ರಮದಾನ ಮಾಡುವು­ದರಿಂದ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾ­ಗಿಟ್ಟುಕೊಳ್ಳು­ವುದರ ಜತೆಗೆ ಅಕ್ಕಪಕ್ಕದವರಿಗೆ ಮಾದರಿ­ಯಾಗಿ ಬದುಕು ನಡೆಸಬಹುದು, ಶಾಲೆಯಲ್ಲಿ ಅಷ್ಟೆ ಅಲ್ಲ ನಿಮ್ಮ ಗ್ರಾಮದಲ್ಲಿ, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಹೊರೆಯವರೊಂದಿಗೆ ಶ್ರಮಧಾನ ನಡೆಸಿ ಎಂದು ವಿದ್ಯಾರ್ಥಿ­ಗಳಿಗೆ ಮಾರ್ಗದರ್ಶನ ಮಾಡಿದರು.

ಶಾಲೆಯಲ್ಲಿ ಶ್ರಮಧಾನದ ನಿಮಿತ್ತ ಮೈದಾನದಲ್ಲಿದ್ದ ಮುಳ್ಳುಕಂಟಿಗಳನ್ನು ಹಾಗೂ ಕಲ್ಲುಗಳನ್ನು ತೆಗೆದು ಹಾಕಿ ಆಟವಾಡಲು ಸುಂದರ ಬಯಲು ನಿರ್ಮಿಸಿಕೊಳ್ಳಲಾಯಿತು.ಚಾರ್ಲ್ಸ್‌ಡಾರ್ವಿನ್‌ ಇಕೋಕ್ಲಬ್‌ ಸಂಚಾಲಕ ಬಸವರಾಜ, ಎಸ್.ಬಿ.­ಅಂದೇಲಿ, ದೈಹಿಕ ಶಿಕ್ಷಕ ಎಲ್.ಕೆ.­ಗೌಡರ, ಬಿ.ಎಂ.ಹೊಸಮನಿ ಶ್ರಮಧಾನದಲ್ಲಿ ಪಾಲ್ಗೊಂಡಿದ್ದರು.ವಿಜ್ಞಾನ ಪ್ರಯೋಗ: ಅಗಸ್ಯ್ತ ಅಂತರಾಷ್ಟ್ರೀಯ ಪ್ರತಿಷ್ಠಾನ­ ತಿಯಿಂದ ಈಚೆಗೆ ಇದೇ ಶಾಲೆಯಲ್ಲಿ ವಿಜ್ಞಾನ ಪ್ರಯೋಗಗಳನ್ನು ಹಮ್ಮಿಕೊಳ್ಳಲಾಗಿತ್ತು.ಪ್ರತಿಷ್ಠಾನದ ಮಾರ್ಗದರ್ಶಕರಾದ ಸಂಗಮೇಶ ಬಳಿಗಾರ ಹಾಗೂ ಎಂ.ಬಿ.ಹೊಸಮನಿ ಸೌರವ್ಯೂಹ­ದಲ್ಲಿ­ರುವ ಗ್ರಹಗಳ ಚಲನವಲನ, ಉಪ­ಗ್ರಹಗಳು, ನಕ್ಷತ್ರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ವಿದ್ಯಾರ್ಥಿಗಳಿಂದಲೇ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರಯೋಗ ಮಾಡಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಚ್.ಪ್ರಭಾ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ವಿಜ್ಞಾನ ಶಿಕ್ಷಕ ಬಸವರಾಜ ಕೊರ್ತ ಕಾರ್ಯಕ್ರಮ ನಿರೂಪಿಸಿದರು. ಶಂಕರಗುರು ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry