ಶುಕ್ರವಾರ, ಮಾರ್ಚ್ 5, 2021
21 °C

‘ಶ್ರೇಣಿಕೃತ ಸಮಾಜದಲ್ಲಿ ಶ್ರಮ ಮೂಲ ಪ್ರತಿಭೆಗಳ ಸಂಕಟ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಶ್ರೇಣಿಕೃತ ಸಮಾಜದಲ್ಲಿ ಶ್ರಮ ಮೂಲ ಪ್ರತಿಭೆಗಳ ಸಂಕಟ’

ಬೆಂಗಳೂರು: ‘ಸಮಾಜ ಮುನ್ನೆಲೆಯ ಲ್ಲಿರುವವರನ್ನು ಗುರುತಿಸುತ್ತದೆ ಆದರೆ, ಅವರಿಗೆ ಪೂರಕವಾಗಿ ನಿಂತವರನ್ನು ಮರೆಯುತ್ತಿದೆ. ಹೂವುಗಳನ್ನು ನೋಡಿ ಆಸ್ವಾದಿಸುತ್ತೇವೆ. ಆದರೆ, ಬೇರುಗಳನ್ನು ಮರೆತಿದ್ದೇವೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ  ವಿಷಾದಿ ಸಿದರು.ಅಂಕ ಸಾಂಸ್ಕೃತಿಕ ಸಂಸ್ಥೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮ ವಾರ ಆಯೋಜಿಸಿದ್ದ ಕಾರ್ಯಕ್ರ ಮದಲ್ಲಿ ಅಂಕ ಸಂಭ್ರಮ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.‘ಶ್ರೇಣಿಕೃತ ಸಮಾಜದೊಳಗಿನ ಅಸಮತೋಲನ ಹಾಗೂ ಅಸಮಾ ನತೆಯ ಪ್ರತೀಕವಾಗಿ ಶ್ರಮ ಮೂಲ ಪ್ರತಿಭೆಗಳು ಸಂಕಟಪಡುತ್ತಿವೆ. ತೆರೆಮ ರೆಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಎಲ್ಲಿಯೂ ಆಗಿಲ್ಲ. ಆದರೆ, ಅಂಕ ಸಂಸ್ಥೆಯು ಅಂತಹವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ’ ಎಂದು ಹೇಳಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ನೀಲಗಿರಿ ಎಂ. ತಳವಾರ್‌ ಅವರು ಬೇಲೂರು ರಘುನಂದನ ಅವರ ‘ಕಟ್ಟುಪದಗಳು: ಬೆತ್ತಲು’ ಕೃತಿ ಕುರಿತು ಮಾತನಾಡಿ, ‘ಕವಿಗೆ ಕಲ್ಪನೆ, ಕನಸು, ಸಂಕಲ್ಪಗಳು ಬೇಕು. ಬರವಣಿಗೆಯಲ್ಲಿ ಚಿಂತನೆ ಇರಬೇಕು. ರಘುನಂದನ ಅವರ ಕೃತಿಯಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವಂತಹ ವಿಚಾರಗಳು ಹರ ಡಿಕೊಂಡಿವೆ’ ಎಂದರು.‘ರಘುನಂದನ ಅವರು ಹಮ್ಮು–ಬಿಮ್ಮುಗಳಿಲ್ಲದ ಸರಳ ನಿರಾಡಂಬರ ವ್ಯಕ್ತಿ. ಅವರು ಒಂದರ್ಥದಲ್ಲಿ ಕುವೆಂಪು ಅವರ ಭಕ್ತರೆ ಆಗಿದ್ದಾರೆ. ಕುವೆಂಪು ಬಗೆಗಿನ ಅವರ ಅಭಿಮಾನವೇ ಅವರಲ್ಲಿ ಸೃಜನಶೀಲತೆ ಬೆಳೆಯಲು ಒತ್ತಾಸೆ ಯಾಗಿದೆ’ ಎಂದರು. ಟಿ.ಯಲ್ಲಪ್ಪ ಅವರ ‘ಕಡಲಿಗೆ ಕಳಿಸಿದ ದೀಪ’ ಕವನ ಸಂಕಲನವನ್ನು ‘ಆ್ಯಂಕ್ಲೆಟ್ಸ್‌’ ಎಂಬ ಹೆಸರಿನಲ್ಲಿ ಇಂಗ್ಲಿ ಷ್‌ಗೆ ಅನುವಾದ ಮಾಡಿದ ಲೇಖಕ ಎಂ.ಸಿ.ಪ್ರಕಾಶ್‌ ಮಾತನಾಡಿ, ‘ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದ ಮಾಡುವುದು ಕಷ್ಟ.ಎರಡರ ಜಾಯ ಮಾನ ಮತ್ತು ಅಭಿವ್ಯ ಕ್ತಿಯೂ ಬೇರೆ ಯಾಗಿದೆ. ಯಲ್ಲಪ್ಪ ಅವರ ಕವನಗಳು ರೂಪಕದಂ ತಿವೆ. ಅವುಗಳ ಅನುವಾದ ಸವಾಲಿನ ಕೆಲಸವಾಗಿತ್ತು’ ಎಂದು ಹೇಳಿದರು. ಜನ ಪದ ಹಾಡುಗಾರ ಮುನಿ ರೆಡ್ಡಿ, ಸಾಹಿತಿ ಎಸ್‌.ಎಫ್‌. ಯೋಗಪ್ಪ ನವರ್‌ ಮತ್ತು ರಂಗಕರ್ಮಿ ಶೇಖರ್‌ ಅವರಿಗೆ ಅಂಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.