‘ಸಂಘದ ಅಭಿವೃದ್ಧಿಗೆ ಯೋಜನೆ’

7

‘ಸಂಘದ ಅಭಿವೃದ್ಧಿಗೆ ಯೋಜನೆ’

Published:
Updated:

ಬೀರೂರು: ಗ್ರಾಹಕರು ಮತ್ತು ಷೇರುದಾರರಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ವ್ಯವಸಾಯ ಸೇವಾ ಸಹಕಾರ ಸಂಘದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಬೀರೂರು ವಿಎಸ್‌ಎಸ್‌ಎನ್‌ ಅಧ್ಯಕ್ಷ ಬಿ.ಕೆ.ನಿಂಗಪ್ಪ ತಿಳಿಸಿದರು.

ಪಟ್ಟಣದ ಸಂಘದ ಆವರಣದಲ್ಲಿ ಭಾನುವಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ದೇಶಿಸಿ ಅವರು ಮಾತನಾಡಿದರು.ಸಹಕಾರ ಸಂಘದಲ್ಲಿ ಚಿನ್ನಾಭರಣ ಅಡಮಾನ, ವಾಹನ ಮತ್ತು ವ್ಯವಹಾರ ಸಾಲ ವಿತರಿಸುವ ಯೋಜನೆಯನ್್ನು ಕಳೆದ ವರ್ಷವೇ ಜಾರಿಗೆ ತಂದಿದ್ದು ಹಲವರು ಇದರ ಉಪಯೋಗ ಪಡೆದಿದ್ದಾರೆ. ಯಶಸ್ವಿನಿ, ಬೆಳೆಸಾಲ, ಸಾಲವಸೂಲಿ, ಸಾಲಮನ್ನಾ ಎಲ್ಲ ಯೋಜನೆಗಳಲ್ಲಿ ಸಂಘವು ಉತ್ತಮ ಸಾಧನೆ ತೋರಿದೆ ಎಂದು ಹೇಳಿದರು.ಸಂಘದ ಕಾರ್ಯದರ್ಶಿ ಹಾಲಪ್ಪ ಲೆಕ್ಕಪತ್ರ ಮತ್ತು ವ್ಯವಹಾರದ ವಿವರ ನೀಡಿದರು. ಸಂಘವು 2012–13ನೇ ಸಾಲಿಗೆ ₨ 83,746 ಲಾಭ ಗಳಿಸಿದ್ದು ಗೊಬ್ಬರ ಮತ್ತು ಪಡಿತರ ವ್ಯಾಪಾರ ವಿಭಾಗದಲ್ಲಿ ₨ 22 ಲಕ್ಷ ವ್ಯವಹಾರ ನಡೆಸಲಾಗಿದೆ. 39ಜನ ಫಲಾನುಭವಿಗಳಿಗೆ ಸರ್ಕಾರದ ಸಾಲಮನ್ನಾ ಯೋಜನೆಯಡಿ ₨ 9.52 ಲಕ್ಷ ಸಾಲ ಮನ್ನಾ ಆಗಿದೆ. 70 ಜನರಿಗೆ ₨ 19.67ಲಕ್ಷ ಬೆಳೆ ಸಾಲ ವಿತರಿಸಲಾಗಿದೆ. ₨ 1.36ಲಕ್ಷ ವಾಹನ ಸಾಲ ನೀಡಿದ್ದು ಶೇ 98 ಸಾಲ ವಸೂಲಾತಿ ಆಗಿದೆ. ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿಯೇ 1455 ಯಶಸ್ವಿನಿ ಯೋಜನೆ ಕಾರ್ಡ್‌ ವಿತರಿಸಿದ್ದು ಪ್ರಥಮ ಸ್ಥಾನದಲ್ಲಿದ್ದೇವೆ. ಸಂಘದ ಆವರಣದಲ್ಲಿ 8 ನೂತನ ಮಳಿಗೆ ನಿರ್ಮಾಣ ಯೋಜನೆ ಇದೆ ಎಂದರು.ವೆಚ್ಚದ ಸಂಪೂರ್ಣ ಮಾಹಿತಿ ಬೇಕು, ನಮಗೆ ಜಮೀನು ಅಡಮಾನದ ಮೇಲೆ ಕೊಟ್ಟಿರುವ ಸಾಲ ₨ 40 ಸಾವಿರವಾದರೆ ಪಹಣಿಯಲ್ಲಿ ಲಕ್ಷ ರೂಪಾಯಿ ಎಂದು ದಾಖಲಾಗಿ ಬಾಂಡ್‌ ರಿಜಿಸ್ಟರ್‌ ಆಗಿದದೆ. ನಾವು ಹೊರಗೂ ಸಾಲ ಪಡೆಯುವಂತಿಲ್ಲ ನೀವೂ ಹೆಚ್ಚು ಸಾಲ ಕೊಡುತ್ತಿಲ್ಲ, ಹೀಗಾದರೆ ಹೇಗೆ? ನಮ್ಮ ಬಾಂಡ್‌ ರಿಲೀಸ್‌ ಮಾಡಿಸಿ ಇಲ್ಲವೇ ಹೆಚ್ಚು ಹಣ ಕೊಡಿ ಎಂದು ಕೆಲವರು ಒತ್ತಾಯಿಸಿದರು.ಸಾಲಮನ್ನಾ ಆಗಿದ್ದರಿಂದ ಹೆಚ್ಚು ಹಣ ವಿತರಿಸಲು ಬಿಡುಗಡೆ ಆಗಿಲ್ಲ, ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಮತ್ತು ಕಟ್ಟಡ ದುರಸ್ತಿ ಮಾಡಿಸಲಾಗುವುದು ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿದರು.ಸಭೆಯಲ್ಲಿ ನಿರ್ದೇಶಕರಾದ ಡಿ.ಆರ್‌.ಯತೀಶ್‌, ಪುಟ್ಟಸ್ವಾಮಿ, ಭಂಡಾರಿ ಸೋಮಣ್ಣ, ಬಿ.ಕೆ.ನಂಜುಂಡಪ್ಪ, ಮಲ್ಲೇದೇವಿರಾಚಾರ್‌, ಮಲ್ಲಪ್ಪ, ಜಯಸ್ವಾಮಿ, ಇನ್ನಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry