ಶನಿವಾರ, ಜನವರಿ 18, 2020
19 °C

‘ಸಂಬಂಧಕ್ಕೆ ಧಕ್ಕೆ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ‘ದೇವಯಾನಿ ಪ್ರಕರಣವು ಭಾರತ ಮತ್ತು ಅಮೆರಿಕ ನಡುವಣ  ವಾಣಿಜ್ಯ ಸಂಬಂಧಕ್ಕೆ  ಧಕ್ಕೆ ತರುವುದಿಲ್ಲ’ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಆನಂದ ಶರ್ಮ ಅಭಿಪ್ರಾಯಪಟ್ಟಿದ್ದಾರೆ.‘ಈ ಪ್ರಕರಣ ಖಂಡನೀಯ. ಇದೇ ವೇಳೆ  ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಕೂಡ ಅಮೂಲ್ಯವಾದುದು. ಇದು ವಿಶ್ವದ ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಮಹತ್ವದ ಪಾಲುದಾರಿಕೆಯಾಗಿದೆ. ಈ ಬಾಂಧವ್ಯ ಗಟ್ಟಿಯಾಗಿಯೇ ಮುಂದುವರಿಯುತ್ತದೆ’ ಎಂದು  ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)