ಮಂಗಳವಾರ, ಜನವರಿ 28, 2020
29 °C

‘ಸಂವಿಧಾನದಡಿ ಸರ್ಕಾರ ಕಾರ್ಯ ನಿರ್ವಹಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಭಾರತೀಯ ಸಂವಿಧಾನವು ವಿಶ್ವದಲ್ಲಿ ಮಾದರಿ ಯಾಗಿದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಬರೆದ ಸಂವಿಧಾನದ ಅಡಿಯಲ್ಲಿ ಎಲ್ಲ ಜಾತಿ, ಧರ್ಮಗಳ ಬಡವರ ಅಭಿವೃದ್ಧಿಗಾಗಿ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ತಾಲ್ಲೂಕಿನ ಪಟ್ಟಣ ಗ್ರಾಮದಲ್ಲಿ ಮಂಗಳವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪಂಚ ಲೋಹದ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಯುವಕರು ಬಾಬಾ ಸಾಹೇಬರ ಆಚಾರ ಮತ್ತು ವಿಚಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಅಣಿಯಾಗಬೇಕು ಎಂದು ಸಲಹೆ ನೀಡಿದರು.ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅಧ್ಯಕ್ಷತೆ ವಹಿಸಿದ್ದರು. ಸಿದ್ದರಾಮ ಶರಣರು ಬೆಲ್ದಾಳ, ಮಹಾಂತ ಶಿವಾಚಾರ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಸಂಸದ ಇಕ್ಬಾಲ್‌ ಅಹ್ಮದ್‌ ಸರಡಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಮೇಶ ಮರಗೋಳ, ಉಪಾಧ್ಯಕ್ಷೆ ಅನಿತಾ ವಳಕೇರಿ, ದಲಿತ ಮುಖಂಡ ಡಿ.ಜಿ.ಸಾಗರ, ಅಂಬಾ ರಾಯ ಅಷ್ಟಗಿ, ವಿಧಾನ ಪರಿಷತ್‌ ಸದಸ್ಯ ಅಲ್ಲಂಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭಾಗನಗೌಡ ಸಂಕನೂರ, ಶಾಸಕ ಡಾ.ಉಮೇಶ ಜಾಧವ, ಚಂದ್ರಕಾಂತ ಪರಮೇಶ್ವರ ಇದ್ದರು.ಪುತ್ಥಳಿ ಅನಾವರಣ ಸಮಿತಿ ಕಾರ್ಯಾಧ್ಯಕ್ಷ ಧರ್ಮಣ್ಣ ಪಟ್ಟಣಕರ್‌ ಸ್ವಾಗತಿಸಿದರು, ಎಸ್‌.ಎಂ.ಪಟ್ಟಣಕರ್‌ ಮಾತನಾಡಿದರು. ಬಸವರಾಜ ಸಿ.ವಗ್ಗೆ ವಂದಿಸಿದರು.

ಪ್ರತಿಕ್ರಿಯಿಸಿ (+)