‘ಸಂಶೋಧನೆಯ ಪ್ರಯೋಜನ ಜನರಿಗೆ ಲಭಿಸಬೇಕು’

7

‘ಸಂಶೋಧನೆಯ ಪ್ರಯೋಜನ ಜನರಿಗೆ ಲಭಿಸಬೇಕು’

Published:
Updated:
‘ಸಂಶೋಧನೆಯ ಪ್ರಯೋಜನ ಜನರಿಗೆ ಲಭಿಸಬೇಕು’

ಉಜಿರೆ: ವಿಜ್ಞಾನ, ಸಂಶೋಧನೆ ಮತ್ತು ತಂತ್ರ­ಜ್ಞಾನದ ಉಪಯೋಗವು ಜನಸಾಮಾನ್ಯರ ಪ್ರಗತಿ­ಗೆ ಉಪಯೋಗವಾಗಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪ್ರೊ. ನವಕಾಂತ ಭಟ್ ಹೇಳಿದರು.ಇಲ್ಲಿನ ಎಸ್.ಡಿ.ಎಂ. ಎಂಜಿನಿಯ­ರಿಂಗ್ ಕಾಲೇಜಿನಲ್ಲಿ ಶುಕ್ರವಾರ ‘ಮುಂದಿನ ದಶಕದಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಸವಾಲುಗಳು’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ­ವನ್ನು ಉದ್ಘಾಟಿಸಿ ಅವರು ಮಾತನಾಡಿ­ದರು.ಇಂದು ಜಾಗತಿಕ ತಾಪಮಾನ ಏರಿಕೆ, ಪರಿಸರ ಮಾಲಿನ್ಯ ಇತ್ಯಾದಿ ಹತ್ತು - ಹಲವು ಕಾರಣ­ಗಳಿಂದ ಬಡವರು ಮತ್ತು ಬಲ್ಲಿದರ ನಡುವಿನ ಅಂತರ ಹೆಚ್ಚಾಗುತ್ತಿದೆ. ಸರ್ವರಿಗೂ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ದೊರಕಿತ್ತಿದ್ದು ಆದಾಯ ಹೆಚ್ಚಾಗಿ ಮಾನವ ಪ್ರಗತಿ ಸೂಚ್ಯಂಕ ಹೆಚ್ಚಾಗಿದೆ. ಸಂಶೋಧನಾ ಕಾರ್ಯ ಹೆಚ್ಚಾಗುವುದರ ಜೊತೆ­ಗೆ ಅದರ ಗುಣಮಟ್ಟವೂ ವೃದ್ಧಿಯಾಗ­ಬೇಕು ಎಂದು ಹೇಳಿದರು.ಮಂಗಳೂರಿನ ಎಂ.ಸಿ.ಎಫ್.ನ ಅಧಿಕಾರಿ ರಜನೀಕಾಂತ್ ಮಾತನಾಡಿ ಸಂಶೋಧಕರು ಜನ­ಸಾಮಾನ್ಯರ ಬಳಿಗೆ ಹೋಗಿ ಸಮಸ್ಯೆಗಳ ಮಾಹಿತಿ ಪಡೆದು ಬಳಿಕ ಸಂಶೋಧನೆ ನಡೆಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಿ ಉಪ­ಯೋಗ­ವಾಗುತ್ತದೆ. ಸಂಶೋಧನಾ ಕಾರ್ಯಗಳು ಜನರ ಬೇಡಿಕೆಗಳನ್ನು ಈಡೇರಿಸಲು ಸಹಕಾರಿ­ಯಾಗ­ಬೇಕು ಎಂದು ಅವರು ಹೇಳಿದರು.

ಬೆಂಗಳೂರಿನ ಕೆ. ರಾಘವನ್ ಶುಭಾಶಂಸನೆ ಮಾಡಿದರು.ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾ­ಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮಾತ­ನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಂಶೋ­ಧನಾ ಕಾರ್ಯ ಮಾಡಲು ಪ್ರೇರಣೆ ನೀಡಿ ಸೂಕ್ತ ಅವಕಾಶ ಕಲ್ಪಿಸಬೇಕು. ಸಂಶೋ­ಧಕರಿಗೆ ತ್ಯಾಗ ಮನೋಭಾವ, ಪರಿಶ್ರಮ ಮತ್ತು ಸತತ ಪ್ರಯತ್ನ ಮಾಡುವ ಛಲ ಇರಬೇಕು. ಸಂಶೋಧನೆಯ ಫಲಿತಾಂಶವು ಶೀಘ್ರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಬಿ. ಯಶೋವರ್ಮ, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಾಜ್‌ಕಿರಣ್ ಬಲ್ಲಾಳ್, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಎಂ.ಜಿ, ಅನಂತ ಪ್ರಸಾದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry