ಬುಧವಾರ, ಜೂನ್ 16, 2021
22 °C

‘ಸಂಸ್ಕೃತಿ ರಕ್ಷಣೆಯಲ್ಲಿ ಮಹಿಳೆ ಪಾತ್ರ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಒಂದು ದೇಶದ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿ­ಯುವಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿರುತ್ತದೆ. ಮಹಿಳೆ­ಯರನ್ನು ಹೊರಗಿಟ್ಟು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ. ಕೆಲವೇ ಕೆಲವು ದೇಶಗಳನ್ನು ಹೊರತುಪಡಿಸಿ ಜಗತ್ತಿನೆ­ಲ್ಲೆಡೆ ಪುರಷ­ರಷ್ಟೇ ಮಹತ್ವ ಮಹಿಳೆ­ಯರಿಗೂ ಇದೆ ಎಂದು ಉಪನ್ಯಾಸಕಿ ಚೇತನಾ ಹೊಸಮಠ ತಿಳಿಸಿದರು.ಅಖಿಲ ಕರ್ನಾಟಕ ಮಹಿಳಾ ಜಾಗೃತ ವೇದಿಕೆ, ಮುಂಡರಗಿ ವೀರ­ಭದ್ರೇಶ್ವರ ಮಹಿಳಾ ವೇದಿಕೆ, ಮುಂಡರಗಿಯ ಅಕ್ಕನ ಬಳಗ, ಶಿಂಗಟಾ­ಲೂರ ಗ್ರಾಮ ಪಂಚಾಯ್ತಿ, ಶಿಂಗಟಾಲೂರು ಗ್ರಾಮದ ವಿವಿಧ ಸ್ತ್ರೀ ಸ್ವಸಹಾಯ ಸಂಘಗಳು ತಾಲ್ಲೂಕಿನ ಶಿಂಗಟಾಲೂರ ವೀರಭದ್ರೇಶ್ವರ ದೇವ­ಸ್ಥಾನದಲ್ಲಿ ಏರ್ಪಡಿಸಿದ್ದ ಅಂತರ­ರಾಷ್ಟ್ರೀಯ ಮಹಿಳಾ ದಿನಾಚರಣೆ­ಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು.  ರಾಜಕೀಯ ಸೇರಿ­ದಂತೆ ಹಲವಾರು ಕ್ಷೇತ್ರಗಳಲ್ಲಿ ಮಹಿಳೆ­ಯರು ಸಕ್ರಿಯರಾಗಿ ಭಾಗವ­ಹಿಸುತ್ತಾರೆ ಎನ್ನು­ವುದು ಸತ್ಯವಾದರೂ ಎಲ್ಲ ರಂಗ­ಗಳಲ್ಲಿಯೂ ಅವರು ಮುಕ್ತ­ವಾಗಿ ಪಾಲ್ಗೊಳ್ಳುತ್ತಿಲ್ಲ  ಎಂದರು.ಪ್ರತಿಭಾ ಹೊಸಮನಿ ಮಾತನಾಡಿ, ಮಹಿಳೆಯರ ರಕ್ಷಣೆಗೆ ಹಲವಾರು ಕಾನೂನುಗಳಿದ್ದರೂ ಮಹಿಳೆಯರನ್ನು ರಕ್ಷಿಸುವ ಮತ್ತು ಅವಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುರುಷರು ಪ್ರಾಮಾಣಿಕವಾಗಿ ಧ್ವನಿ ಎತ್ತ­ಬೇಕಾಗಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಹಿಳಾ ಜಾಗೃತ ವೇದಿಕೆಯ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಬಿಳಿ­ಮಗ್ಗದ ಮಾತನಾಡಿ, ಮಹಿಳೆಯರ ಮೇಲಿನ ದಬ್ಬಾಳಿಕೆ ಹಾಗೂ ಶೋಷ­ಣೆಗೆ ಕೇವಲ ಪುರುರಷ್ಟೇ ಕಾರಣ ಎನ್ನು­ವುದು ಸತ್ಯಕ್ಕೆ ದೂರವಾದ ಸಂಗತಿ­ಯಾಗಿದ್ದು, ಮಹಿಳಾ ಶೋಷಣೆಗಳಲ್ಲಿ ಮಹಿಳೆ­ಯರದೂ ದೊಡ್ಡ ಪಾತ್ರ­ವಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಮಹಿಳಾ ಶೋಷಣೆಗೆ ಮಹಿಳೆಯರೆ ಕಾರಣ­­ರಾಗಿರುತ್ತಾರೆ ಎಂದರು.ಶಾಂತಮ್ಮ ಹಿರೇಮಠ ಸಮಾರಂಭವನ್ನು ಉದ್ಘಾಟಿಸಿದರು. ಜಿ.ಎಸ್.ಅಣ್ಣಿಗೇರಿ ಮಾತನಾಡಿದರು. ಸರೋಜಾ ಹಂಚಿನಾಳ, ವೀಣಾ ಪಾಟೀಲ, ಲಕ್ಷ್ಮಿದೇವಿ ಬೆಳವಟಗಿಮಠ, ಎ.ಸಿ.ಕೆಳಗಿನಮನಿ, ಹನುಮಮ್ಮ ಪಾಟೀಲ, ವೀರಮ್ಮ ಸಂಗಟಿ, ಅನಿತಾ ಬಾಗೇವಾಡಿ, ಜಯಕ್ಕ ಜಾಡರ, ಶ್ರೀದೇವಿ ಬಿಳಿಮಗ್ಗದ, ಶೋಭಾ ಹುಲವತ್ತಿ ಮೊದಲಾದವರು ವೇದಿಕೆಯ ಮೇಲೆ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.