ಶನಿವಾರ, ಜನವರಿ 18, 2020
19 °C

‘ಸಕಾಲ’: ದೇವನಹಳ್ಳಿಗೆ ಇರಾಕ್ ತಂಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ರಾಜ್ಯದಲ್ಲಿ ಜಾರಿಗೊಳಿಸಿ ರುವ ಸಕಾಲ ಯೋಜನೆಯ ಕುರಿತು ಇರಾಕ್ ನಿದಾವ  ಪ್ರಾಂತ್ಯದ ಉಪ ಗವರ್ನರ್  ಅಮೀನ್‌ ಅಬ್ರಾಹಿಂ ಫನಾಷ್‌ ಮೆಚ್ಚುಗೆ ವ್ಯಕ್ತಪಡಿಸಿದರು.ತಹಶೀಲ್ದಾರ್‌ ಡಾ.ಎನ್‌.ಸಿ.ವೆಂಕಟ ರಾಜು ಹಾಗೂ ಇಲಾಖೆ ಸಿಬ್ಬಂದಿ ಯಿಂದ ಮಾಹಿತಿ ಪಡೆದು ನಂತರ ಪ್ರಜಾವಾಣಿಯೊಂದಿಗೆ ಅವರು ಮಾತ ನಾಡಿದರು.ಸಕಾಲ ಯೋಜನೆ ಪ್ರಗತಿ ಬಗ್ಗೆ ಮಾಹಿತಿ ಪಡೆದು ಇರಾಕ್‌ನಲ್ಲಿಯೂ ಸಕಾಲವನ್ನು  ಕಾರ್ಯ ರೂಪಕ್ಕೆ ತರುವ ಉದ್ದೇಶವನ್ನೂ ಹೊಂದಿದ್ದೇವೆ ಎಂದು ತಿಳಿಸಿದರು. ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಸಕಾಲ ದಂತಹ ಯೋಜನೆ ಜಾರಿಗೊಳಿಸಿ ರುವುದರಿಂದ ಪ್ರತಿಯೊಬ್ಬರಿಗೂ ಅನು ಕೂಲವಾಗಿದೆ. ಕರ್ನಾಟಕದಲ್ಲಿ ಸಕಾಲ ಯೋಜನೆ ಯಶಸ್ಸು ಆಗಿದೆ. ಇದರ ಸಂಪೂರ್ಣ ಮಾಹಿತಿ ಪಡೆ ಯುವ ಉದ್ದೇಶದಿಂದ ನಿಯೋಗದಿಂದ ರಾಜ್ಯಕ್ಕೆ ಬಂದಿರುವುದಾಗಿ ಅವರು ತಿಳಿಸಿದರು.ಸಕಾಲ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದ ಡಾ.ಎನ್‌.ಸಿ. ವೆಂಕಟರಾಜು, ತಾಲ್ಲೂಕಿನ ನಾಲ್ಕು ಹೋಬಳಿ ಕೇಂದ್ರದಲ್ಲಿ ನಾಡಕಚೇರಿಯಿದೆ. ಈ ಕಚೇರಿ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗರು ಮತ್ತು ಉಪತಹಶೀಲ್ದಾರ್‌ ಇರುತ್ತಾರೆ. ಹೋಬಳಿ ವ್ಯಾಪ್ತಿಯ ಪ್ರತಿಯೊಂದು ಕಡತ ವಿಲೇವಾರಿ ಮಾಹಿತಿ ತಂತ್ರಜ್ಞಾನ ಮೂಲಕ ನಡೆಯುತ್ತದೆ. ಯೊಂದು ಕಡತ ವಿಲೇವಾರಿ ಮಾಹಿತಿ ತಂತ್ರಜ್ಞಾನ ಮೂಲಕ ಕಾರ್ಯವ್ಯವಸ್ಥೆ ಇದೆ.ಒಟ್ಟು ಮೂವತ್ತು ಅಗತ್ಯ ಸೇವೆಗಳು ಸಕಾಲಯೋಜನೆಯಡಿಯಲ್ಲಿ ಪಡೆಯಲು ಕನಿಷ್ಠ 7 ದಿನಗಳಿಂದ 120 ದಿನಗಳವರೆವಿಗೆ ವಿವಿಧ ಇಲಾಖೆಯಲ್ಲಿ ಮಾಹಿತಿ ಅಥವಾ ಪ್ರಮಾಣ ಪತ್ರ ಪಡೆಯಲು ಕಾಲ ನಿಗಧಿಗೊಳಿಸ ಲಾಗಿದೆ. ಮೂರು ವರ್ಷಗಳಿಂದ ಸಕಾಲ ಯೋಜನೆ ಜಾರಿಯಲ್ಲಿದೆ ಎಂದು ವಿವರಿಸಿದರು.ಇರಾಕಿನ ವಿವಿಧ ಪ್ರಾಂತ್ಯವಾರು ಗವರ್ನರ್‌ಗಳಾದ ಸಹಿಲ್‌ ಇಸ್ಮಾ ಯಿಲ್‌ ಇಬ್ರಾಹಿಂ, ರಷೀದ್‌ ಇದನ್‌ ಫರ್ಹಾ, ನದೀಮ್‌ ಬಾಟಿಯಾ ರಿಸೇನ್‌, ನಜರ್‌ ಆಬ್ದ್‌ಜೈದ್‌ ಸಲ್ಮಾನ್‌, ಅಮರ್‌ ಪಾಲ್ಹೀ ಎ.ಹಸನ್‌, ವಾಸಿಮ್‌ ಹುಸೇನ್‌ ಮಹಮದ್‌, ಅರಬ್‌ ಖಾದಿನ್‌ ಜಾಫರ್‌, ಮೈಧನ್‌ ರಾಮ್‌ಧನ್‌ ಅಬೇದ್‌ ಆಲಿ ಸೇರಿದಂತೆ ಆರು ಮಂದಿ ಗವರ್ನರ್‌ ಸೇರಿದಂತೆ ಒಟ್ಟು 13 ಅಧಿಕಾರಿಗಳು ಇಂಟರ್‌ ನೆಟ್‌ ಸೊಸೈಟಿ ಕಾರ್ಯನಿರ್ವಾಹಕ ಹಾಗೂ ಭಾಷಾ ಅನುವಾದಕ ನಿಯೋಗದಲ್ಲಿದ್ದರು.

ಪ್ರತಿಕ್ರಿಯಿಸಿ (+)