‘ಸಚಿವರ ನಿರ್ಲಕ್ಷ್ಯದಿಂದ ರೂ.1 ಸಾವಿರ ಕೋಟಿ ಖೋತಾ’

7

‘ಸಚಿವರ ನಿರ್ಲಕ್ಷ್ಯದಿಂದ ರೂ.1 ಸಾವಿರ ಕೋಟಿ ಖೋತಾ’

Published:
Updated:

ಬೆಂಗಳೂರು: ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇಂದ್ರ ಸರ್ಕಾರದ  ರೂ.1 ಸಾವಿರ ಕೋಟಿ ಅನು­ದಾನ ಈ ವರ್ಷ ದೊರೆತಿಲ್ಲ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ದೂರಿದರು.ಈ ರೀತಿಯ ಅನುದಾನ ಸ್ಥಗಿತವಾ­ಗುತ್ತಿರುವುದರಿಂದ ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿಲ್ಲ. ಉಪಕರಣಗಳ ಖರೀದಿಗೆ ಶಿಕ್ಷಕರಿಗೆ ದೊರೆಯುತ್ತಿದ್ದ ರೂ.500 ನಿಲ್ಲಿಸಲಾಗಿದೆ.  ಹಿರಿಯ ಪ್ರಾಥ­ಮಿಕ ಶಾಲೆಗಳಿಗೆ ಕಂಪ್ಯೂಟರ್‌ ನೀಡಿಲ್ಲ ಎಂದು ಶನಿವಾರ ಪತ್ರಿಕಾ­ಗೋಷ್ಠಿಯಲ್ಲಿ ದೂರಿದರು. ಶಿಕ್ಷಕರು ವಿಷ ಕುಡಿಯುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಶಿಕ್ಷಣ ಸಚಿವರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.ಕಾಂಗ್ರೆಸ್ಸೀಕರಣ

ನ್ಯಾಯ ಬೆಲೆ ಅಂಗಡಿ­ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನಂತೆ ಜಾಗೃತ ಸಮಿತಿಗಳನ್ನು ರಚಿಸಬೇಕು ಎಂದು ಸರ್ಕಾರ ಆದೇಶ ಹೊರ­ಡಿಸಿದೆ. ಇದು ನ್ಯಾಯಬೆಲೆ ಅಂಗ­ಡಿ­ಗಳನ್ನು ಕಾಂಗ್ರೆಸ್ಸೀ­ಕ­­ರ­ಣಗೊಳಿಸುವ ಹುನ್ನಾರ­ವಾಗಿದೆ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry