ಸೋಮವಾರ, ಜೂನ್ 14, 2021
22 °C

‘ಸಜಲ’ ಸಮರ್ಪಕ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯುಎಸ್‌ಎಸ್‌ಬಿ) ‘ಸಜಲ’ ಯೋಜನೆಯ ಮೂಲಕ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿ ‘ಬಿಡಬ್ಲ್ಯುಎಸ್‌ಎಸ್‌ಬಿ ಬಳಕೆದಾರರ ವೇದಿಕೆ’ಯ ಸದಸ್ಯರು ಜಯನಗರದ ಶಿಂಷಾ ಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಬಿ.ಎನ್‌.ರಘು, ‘ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೆ ನೀರು ಪೂರೈಸುವುದಾಗಿ ಹೇಳಿದ್ದ ಜಲಮಂಡಳಿ ಈವರೆಗೂ ಇದಕ್ಕಾಗಿ ಯೋಜನೆ ರೂಪಿಸಿಲ್ಲ. ಜಲಮಂಡಳಿಯು ‘ಸಜಲ’ ಯೋಜನೆಯ ಮೂಲಕ ವಿವಿಧ ಠೇವಣಿಗಳನ್ನು ವಿಧಿಸಿ ಜನರಿಂದ ಹಣ ಸುಲಿಗೆ ಮಾಡಲು ಮುಂದಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.‘ದಿನಕ್ಕೆ ಪ್ರತಿ ವ್ಯಕ್ತಿಗೆ ಕನಿಷ್ಠ 30 ಲೀಟರ್‌ ನೀರಿನ ಅಗತ್ಯವಿರುತ್ತದೆ. ಆದರೆ, ಈ ಕನಿಷ್ಠ ಅಗತ್ಯವನ್ನೂ ಪೂರೈಸಲು ಜಲಮಂಡಳಿ ವಿಫಲವಾಗಿದೆ. ನಗರದ ಕೆಲ ಅಪಾರ್ಟ್‌ಮೆಂಟ್‌ಗಳಲ್ಲಿ 10ರಿಂದ 20 ಮನೆಗಳಿಗೆ ಒಂದು ಮೀಟರ್‌ ಇದೆ. ಕೆಲವರು ನೀರನ್ನು ಕಳವು ಮಾಡಿ ಬಳಸುತ್ತಿದ್ದಾರೆ. ಇವುಗಳ ಮೇಲೆ ಜಲಮಂಡಳಿ ಕಡಿವಾಣ ಹಾಕಬೇಕು. ಅಪಾರ್ಟ್‌ಮೆಂಟ್‌ಗಳ ಎಲ್ಲ ಮನೆಗಳಿಗೂ ಪ್ರತ್ಯೇಕ ಮೀಟರ್‌ ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.