ಸೋಮವಾರ, ಜೂನ್ 21, 2021
27 °C

‘ಸಣ್ಣ–ಮಧ್ಯಮ ಕೈಗಾರಿಕೆ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ಮತ್ತು ಉದ್ಯೋಗ ಕ್ಷೇತ್ರಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹೆಚ್ಚಿನ ಕೊಡುಗೆ ನೀಡುತ್ತಿವೆ. ಈ ಕ್ಷೇತ್ರದ ಮತ್ತಷ್ಟು ಬೆಳವಣಿಗೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜ­ನೆಗಳ ಲಾಭವನ್ನು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪಡೆ­ಯ­ಬೇಕು’ ಎಂದು ಎಂಎಸ್‌ ಎಂಇಡಿ ಸಂಸ್ಥೆಯ ಮಂಗಳೂರಿನ ನಿರ್ದೇಶಕ ಪಿ.ವಿ. ವೇಲಾಯುಧನ್ ಹೇಳಿದರು.ಎಂಎಸ್‌ಎಂಇಡಿ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಉಡುಪಿ ಮತ್ತು ಬೆಂಗಳೂರಿನ ಕರ್ನಾಟಕ ಸಣ್ಣ ಕೈಗಾರಿಕಾ ಸಂಘವು ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಿಸಿದ್ದ ‘ಮ್ಯಾನುಫ್ಯಾಕ್ಚರಿಂಗ್ ಕಾಂಪಿಟೇಟಿವ್‌­ನೆಸ್‌ ಪ್ರೋಗ್ರಾಂ’ ವಿಚಾರಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿ ಪ್ರಕ್ರಿಯೆಲ್ಲಿ ಸಣ್ಣ, ಅತೀ­ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ಪ್ರಮುಖವಾದುದು. ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಇದಾಗಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಶೇ.೮ರಷ್ಟು ಹಾಗೂ ರಫ್ತು ಕ್ಷೇತ್ರಕ್ಕೆ ಶೇ.೨೩  ಕೊಡುಗೆ ನೀಡುತ್ತಿವೆ ಎಂದು ಮಾಹಿತಿ ನೀಡಿದರು.ಸಿ.ಎಂ.ರಾಜಮನೆ ಮಾತನಾಡಿ, ‘ಕರಾವಳಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ವಾತಾವರಣ ಇದೆ’ ಎಂದು ಹೇಳಿದರು.ಎಂಎಸ್‌ಎಂಇ ಮಂಗಳೂರಿನ ಉಪ ನಿರ್ದೇಶಕ ಕೆ.ಸಾಕ್ರೆಟೀಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ರಮೇಶ್ ಮೂರ್ತಿ, ಎಂ.ಹಾಲಪ್ಪ, ಎ.ಪದ್ಮನಾಭ, ಆರ್.ರಾಜು, ಕೆ.ಪ್ರಶಾಂತ್ ಬಾಳಿಗಾ, ಯು.ಅಜಿತ್ ಶೆಣೈ, ಎಂ.ಜೆ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಡೂರು ಭೋಜರಾಜ್ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.