‘ಸದಸ್ಯರ ಶ್ರೇಯೋಭಿವೃದ್ಧಿಗೆ ಒತ್ತು’

7
ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ

‘ಸದಸ್ಯರ ಶ್ರೇಯೋಭಿವೃದ್ಧಿಗೆ ಒತ್ತು’

Published:
Updated:

ಸೋಮವಾರಪೇಟೆ: ಇಲ್ಲಿನ ಮಹಿಳಾ ಸಮಾಜದ ವಾರ್ಷಿಕ ಮಹಾಸಭೆ  ಸಮಾಜದ ಅಧ್ಯಕ್ಷೆ ಸುಮಾ ಸುದೀಪ್ ಅವರ ಅಧ್ಯಕ್ಷತೆಯಲ್ಲಿ, ಬುಧವಾರ ಸಮಾಜದ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಮಹಿಳಾ ಸಮಾಜದ ಸಭಾಂಗಣ ದುರಸ್ತಿಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಇದರೊಂದಿಗೆ ನೂತನವಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ಬೈಲಾಕ್ಕೆ ಸರ್ವ ಸದಸ್ಯರ ಅನುಮತಿ ಪಡೆಯಲಾಯಿತು. ಸದಸ್ಯರ ಶ್ರೇಯೋಭಿವೃದ್ಧಿಗೆ ಅನುಕೂಲ­ವಾಗುವಂತಹ ಹೆಚ್ಚಿನ ಕಾರ್ಯಕ್ರಮ­ಗಳನ್ನು ಹಮ್ಮಿಕೊಳ್ಳುವಂತೆ ಸದಸ್ಯರು ಆಡಳಿತ ಮಂಡಳಿಗೆ ತಿಳಿಸಿದರು.ವೇದಿಕೆಯಲ್ಲಿ ಸಮಾಜದ ಕಾರ್ಯದರ್ಶಿ ನಳಿನಿ ಗಣೇಶ್, ಪದಾಧಿಕಾರಿಗಳಾದ ಜಲಜಾ ಶೇಖರ್, ಗಾಯತ್ರಿ ನಾಗರಾಜು, ಶೋಭಾ ಯಶ್ವಂತ್, ವಿಜಯಲಕ್ಷ್ಮಿ ಸುರೇಶ್, ಜ್ಯೋತಿ ಶುಭಾಕರ್, ಉಷಾ ತೇಜಸ್ವಿ ಇದ್ದರು. ಸಮಾಜದ ವತಿಯಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆ­ಯಾಗಿರುವ ಲೀಲಾ ನಿರ್ವಾಣಿ­ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry