ಸೋಮವಾರ, ಮಾರ್ಚ್ 1, 2021
31 °C
ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಬಸ್‌ ಪಾಸ್‌ ವಿತರಣೆ

‘ಸಮಾಜಮುಖಿ ಸೇವೆಗೆ ಸದಾ ಜನಮನ್ನಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಮಾಜಮುಖಿ ಸೇವೆಗೆ ಸದಾ ಜನಮನ್ನಣೆ’

ಸುರಪುರ: ‘ಸಮಾಜ ಸೇವೆ ಸಲ್ಲಿಸುವ, ಜನಪರ ಕೆಲಸ ಮಾಡುವ ಸಂಘಟನೆ ಗಳಿಗೆ ಮೊದ ಮೊದಲು ಉತ್ತಮ ಅಭಿಪ್ರಾಯ ವ್ಯಕ್ತವಾಗುವುದಿಲ್ಲ. ಇವುಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ತಮ್ಮ ಸಿದ್ಧಾಂತಕ್ಕೆ ತಕ್ಕ ಹಾಗೆ ಕೆಲಸ ಮಾಡುತ್ತಾ ಹೋದರೆ ಖಂಡಿತ ಆ ಸಂಘಟನೆ ಮುಂಚೂಣಿಗೆ ಬರುತ್ತದೆ’ ಎಂದು ಪ್ರಾಧ್ಯಾಪಕ ಪ್ರೊ. ವೇಣುಗೋಪಾಲನಾಯಕ ಜೇವರ್ಗಿ ಅಭಿಪ್ರಾಯಪಟ್ಟರು.ನಗರದ ಗಾಂಧಿ ವೃತ್ತದಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ದಿವಂಗತ ಸಣ್ಣರುಕ್ಮಯ್ಯ ದೊರಿ ಬೊಮ್ಮನಳ್ಳಿ ಸ್ಮರಣಾರ್ಥ ಭಾನುವಾರ ಏರ್ಪಡಿಸಿದ್ದ 100 ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.‘ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟವು ಎರಡು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಾ, ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ, ಬಡ ಮಕ್ಕಳ, ಜನರ ನರೆವಿಗೆ ನಿಲ್ಲುತ್ತಾ ವಿಭಿನ್ನವಾಗಿ ಕೆಲಸ ಮಾಡುತ್ತಿದ್ದು ಜನಮನ್ನಣೆಗೆ ಪಾತ್ರವಾಗಿದೆ’ ಎಂದು ಶ್ಲಾಘಿಸಿದರು.ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ಮಾತನಾಡಿ, ‘ಸರ್ಕಾರ ಜನರಿಗಾಗಿ ಜಾರಿ ಮಾಡಿರುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಈ ಯೋಜನೆಗಳ ಅನುಷ್ಠಾನ ಅಷ್ಟಕಷ್ಟೆ. ಈ ಬಗ್ಗೆ ಸಂಘಟನೆ ಮಾಡುತ್ತಿರುವ ಹೋರಾಟ ಅನುಕರಣೀಯ. ನಮ್ಮ ಹಕ್ಕುಗಳಿಗೆ ಹೋರಾಟ ಮಾಡುವ ಕಾಲ ಇದು’ ಎಂದರು.ಸಾರಿಗೆ ಸಂಸ್ಥೆಯ ವಿಭಾಗೀಯ ಸಾರಿಗೆ ಅಧಿಕಾರಿ ತಿಮ್ಮಾರೆಡ್ಡಿ ಹೀರಾ, ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್‌ ಸೋಫಿಯಾ ಸುಲ್ತಾನ್‌ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ವೆಂಕೋಬ ದೊರೆ, ‘ಶೋಷಿತರ ಒಕ್ಕೂಟ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಹೋರಾಟಗಳ ಮೂಲಕ ನ್ಯಾಯ ಒದಗಿಸಲು ಯತ್ನಿಸುತ್ತಿದೆ. ಇದರ ಜೊತೆಗೆ ಮಾಸಾಶನ, ಕಾರ್ಮಿಕರ ಚೀಟಿ ಇತರ ಸೌಲಭ್ಯಗಳ ಜನರಿಗೆ ಮುಟ್ಟಿಸಲು ಯೋಜನೆ ಹಾಕಿಕೊಂಡಿದೆ’ ಎಂದರು.ಇನ್‌ಸ್ಪೆಕ್ಟರ್ ಗಂಗಾಧರ ಮಠಪತಿ, ಸಾರಿಗೆ ಸಂಸ್ಥೆ ಕಾರ್ಮಿಕ ಕಲ್ಯಾಣಾಧಿಕಾರಿ ಮಹಿಪಾಲ ಬೇಗಾರ, ಘಟಕ ವ್ಯವಸ್ಥಾಪಕ ಜಯವಂತ ಅಂಗಡಿ, ಸಹಾಯಕ ಕೃಷಿ ಅಧಿಕಾರಿ ಜಿ. ಮಹಾದೇವಪ್ಪನಾಯಕ, ವಕೀಲರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಬೇವಿನಕಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಉಸ್ತಾದ ವಜಾಹತ್ ಹುಸೇನ್, ದೇವಿಂದ್ರಪ್ಪ ಪತ್ತಾರ ಮಾತನಾಡಿದರು.ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಚವ್ವಾಲಕ್ಷ್ಮಿ ಪದ್ಮಾವತಿ ಸ್ವಾಗತಿಸಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ನಿರೂಪಿಸಿ ವಂದಿಸಿದರು.

ಮಲ್ಲೇಶಿ ಪಾಟೀಲ ನಾಗರಾಳ, ಶ್ರೀನಿವಾಸನಾಯಕ ಬೊಮ್ಮನಳ್ಳಿ, ವೆಂಕಟೇಶ ಹವಲ್ದಾರ್, ರಾಮಪ್ಪನಾಯಕ ಬೊಮ್ಮನಳ್ಳಿ, ಮಲ್ಲು ನಾಯಕ ಕಕ್ಕೇರಾ, ಶರಣು ಮಕಾಶಿ ಲಿಂಗದಳ್ಳಿ, ಮಲ್ಲು ನಾಯಕ ಶ್ರೀನಿವಾಸಪುರ, ನರಸಿಂಹನಾಯಕ ಬೊಮ್ಮನಳ್ಳಿ, ಗೋಪಾಲ ಬಾಗಲಕೋಟೆ, ಹಣಮಂತ್ರಾಯ ದೊರೆ ವಾಗಣಗೇರಾ, ಬಸವರಾಜ ಕವಡಿಮಟ್ಟಿ, ಪರಮೇಶ ಹವಲ್ದಾರ್, ದ್ಯಾವನಗೌಡ, ಮಾನಯ್ಯ ದೊರೆ, ದೇವಪ್ಪ ರತ್ತಾಳ, ಅಂಬಣ್ಣ ದೊರೆ, ಭೀಮಣ್ಣ ಮೇಟಿ ಇದ್ದರು.***

ಮುಂದಿನ ದಿನಗಳಲ್ಲಿ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲ ಸೇರಿದಂತೆ ಇತರೆ ಮಾಸಾಶನಗಳನ್ನು ದೊರೆಯುವಂತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ.

ವೆಂಕೋಬ ದೊರೆ, ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.