‘ಸಮಾನತೆಯ ಸಾಧನವಾಗದ ಶಿಕ್ಷಣ’

7

‘ಸಮಾನತೆಯ ಸಾಧನವಾಗದ ಶಿಕ್ಷಣ’

Published:
Updated:

ಬೈಂದೂರು: ದೇಶದ ಶಿಕ್ಷಣ ಕ್ಷೇತ್ರ ತಾರತಮ್ಯದ ಕೂಪವಾಗಿ ರೂಪುಗೊಂಡಿದೆ. ಶಿಕ್ಷಣ ಮೂಲಭೂತ ಹಕ್ಕೆನಿಸಿದ್ದರೂ ಅದು ಸಮಾನತೆಯ ಸಾಧನವಾಗಿ ಮಾರ್ಪಟ್ಟಿಲ್ಲ. ಉಳ್ಳವರಿಗೆ ಗುಣಮಟ್ಟದ ಶಿಕ್ಷಣ ದೊರಕಿದರೆ, ಇಲ್ಲದವರ ಕೈಗೆಟಕುವುದು ಕಳಪೆ ಶಿಕ್ಷಣ. ಜಯಕರ್ನಾಟಕ ಸಂಘಟನೆ ಏಕರೂಪದ, ಸಮಾನ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದ್ದು, ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ  ಮೂಡಿಸಲು ತೇರು ಯಾತ್ರೆ ಕೈಗೊಂಡಿದೆ ಎಂದು ಸಂಘಟನೆಯ ಅದ್ಯಕ್ಷ ಬಿ. ಎನ್‌. ಜಗದೀಶ್‌ ಹೇಳಿದರು.ತೇರು ಸೋಮವಾರ ಬೆಳಿಗ್ಗೆ ಬೈಂದೂರಿನಿಂದ  ಉಡುಪಿಯತ್ತ ಹೊರಡುವ ಮುನ್ನ ಅವರು ಮಾತನಾಡಿದರು.

ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಉತ್ತಮ ಗುಣಮಟ್ಟದ ಶಾಲೆಗಳಲ್ಲಿ ಏಕರೂಪದ ಶಿಕ್ಷಣ ಪಡೆಯಬೇಕು ಎಂದು ಅವರು ಹೇಳಿದರು.ಜಾಗೃತಿ ತೇರು 8 ಜಿಲ್ಲೆಗಳಲ್ಲಿ ಈಗಾಗಲೇ ಸಂಚರಿಸಿದೆ ಎಂದು ಅವರು ತಿಳಿಸಿದರು.

ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಎಚ್‌. ಎನ್‌. ದೀಪಕ್‌, ಸಂಚಾಲಕ ಅಜಿತ್‌ ಪ್ರಸಾದ್‌, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಶೇಖರ ಪೂಜಾರಿ, ಬೈಂದೂರು ವಲಯಾಧ್ಯಕ್ಷ ಸನತ್‌ ಬಳೆಗಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry