ಮಂಗಳವಾರ, ಜೂನ್ 15, 2021
26 °C

‘ಸಮಾನತೆ ಸಿದ್ಧಾಂತ ಚುನಾವಣೆ ವಿಷಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ಯುಪಿಎ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ-–ಮನೆಗೆ  ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡುವುದರ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸ ಬೇಕೆಂದು ಶಾಸಕ ರಮೇಶ ಜಾರಕಿ ಹೊಳಿ ಕರೆ ನೀಡಿದರು.ನಗರದಲ್ಲಿ  ಭಾನುವಾರ ನಡೆದ ಅರಭಾಂವಿ ಮತಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬೆಳಗಾವಿ ಲೋಕಸಭಾ ಮತಕ್ಷೇತ್ರ ದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಸ್ಪರ್ಧಿಸುವುದು ನಿಶ್ಚಿತ ಹಾಗಾಗಿ ಪಕ್ಷದ ಮುಖಂಡರು ಕಾರ್ಯಕರ್ತರು ಭೂತ್‌ ಮಟ್ಟದಲ್ಲಿ ಕೆಲಸ ಮಾಡಲು ಇಂದಿ ನಿಂದಲೇ ಕಾರ್ಯ ಪ್ರವೃತ್ತ ರಾಗಬೇಕು ಎಂದರು.ಇದೇ19ರಂದು ಪಕ್ಷದ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಅವರು ಅರಭಾಂವಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಕೊಳ್ಳಲಿದ್ದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಬೇಕೆಂದು ಕೋರಿದರು.ಪಕ್ಷದ ಬಗ್ಗೆ ಕೆಲ ಪಕ್ಷದವರು ಇಲ್ಲಸಲ್ಲದ ವದಂತಿಗಳನ್ನು ಹರಡಿಸು ತ್ತಿದ್ದಾರೆ. ಅಂತಹ ಯಾವ ವದಂತಿ ಗಳಿಗೂ  ಕಿವಿಗೊಡದೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಿದ್ಧಾಂತದ ಮೇಲೆ ಈ ಚುನಾವಣೆ ನಡೆಯಲಿದೆ ಸಮಾಜದ ಎಲ್ಲ ವರ್ಗದ ಜನರಿಗೆ ಯುಪಿಎ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮುಟ್ಟಿಸುವ ಕೆಲಸ ಮಾಡಬೇಕಾ ಗಿರುವುದು ಅತ್ಯಗತ್ಯ ವಾಗಿದೆ ಎಂದರು.ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದರ ಮೂಲಕ ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ಸ್ಥಾಪಿ ಸುವುದು ಖಚಿತ. ಆದ್ದರಿಂದ ಪಕ್ಷದ ಕಾರ್ಯಕರ್ತರು ಈ ದಿಸೆಯಲ್ಲಿ ವ್ಯವಸ್ಥಿ ತವಾಗಿ ಸಂಘಟಿಕರಾಗಿ ಕೆಲಸ ಮಾಡ ಬೇಕೆಂದು ಕಿವಿಮಾತು ನೀಡಿದರು.ಅರಭಾಂವಿ ಮತ್ತು ಕೌಜಲಗಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರುಗಳಾದ ಭೀಮಶಿ ಗಡಾದ ಹಾಗೂ ರಮೇಶ ಉಟಗಿ ಮತ್ತು ಹಿರಿಯ ಮುಖಂಡ ಬಾಳಪ್ಪ ಬೆಳಕೂಡ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡ ರುಗಳಾದ ಎಸ್.ಆರ್.ಸೋನವಾಲ್ಕರ, ಬಸವಣೆಪ್ಪ ಗೋರೋಶಿ, ಪ್ರಕಾಶ ಬಾಗೇವಾಡಿ, ಮಲ್ಲಿಕಾರ್ಜುನ ಕಬ್ಬೂರ, ವಿ.ಪಿ.ನಾಯಕ, ಬಿ.ಎಂ. ನ್ಯಾಮಗೌಡ, ಕಲ್ಲಪ್ಪಗೌಡ ಲಕ್ಕಾರ, ಬಿ.ಎಲ್.ಉಪ್ಪಾರ, ಕೆ.ಟಿ.ಗಾಣಿಗೇರ, ಸುರೇಶ ಮಗದುಮ್ಮ, ಎಸ್.ಡಿ. ಎತ್ತಿನಮನಿ, ಮಾರುತಿ ಮಾವುರಕರ, ಬಿ.ಬಿ.ಚಿಟಗುಬ್ಬಿ, ಮಲ್ಲಪ್ಪ ಕರಿಹೊಳಿ, ಬಸು ತಡಸನವರ, ಬಿ.ಎಸ್. ಸರಾ ಪೂರ, ಸಯ್ಯದ ಪೀರಜಾದೆ, ಶ್ರೀಶೈಲ್ ಮುಗಳಖೋಡ, ನೂರಹ್ಮದ ಪೀರ ಜಾದೆ, ರಾಮಯ್ಯ ಮಠದ, ಬಾಬಾ ಜಮಖಂಡಿ, ರವಿ ಕುಲಕರ್ಣಿ, ಜಿ,ಪಂ. ಮಾಜಿ ಉಪಾಧ್ಯಕ್ಷ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಗೋಕಾಕ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ನಜೀರ್‌ ಅಹ್ಮದ್‌ ಶೇಖ್‌, ಜಿಲ್ಲಾ ಯೂತ್‌ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಾವೇದ್‌ ಮುಲ್ಲಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.