‘ಸಮುದಾಯದವರಿಂದಲೇ ದುರ್ಬಲರ ಶೋಷಣೆ’

7

‘ಸಮುದಾಯದವರಿಂದಲೇ ದುರ್ಬಲರ ಶೋಷಣೆ’

Published:
Updated:

ಅಕ್ಕಿಆಲೂರ: ‘ಜಾಗತಿಕ ಇತಿಹಾಸದ ಆರಂಭ­ದಿಂ­ದಲೂ ಸಬಲರ ಮತ್ತು ದುರ್ಬಲರ ಮಧ್ಯೆ ಸಂಘ­ರ್ಷಗಳು ನಡೆ­ಯು­ತ್ತಲೇ ಬಂದಿವೆ. ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಶೋಷಣೆ ನಡೆಸುತ್ತಿ­ರುವುದು ಸಾಮಾನ್ಯವಾಗಿದೆ.ಶೋಷಣೆಗೆ ಒಳಗಾದ ಸಮುದಾಯವೇ ದೊರೆತ ಅವಕಾಶ­ಗಳನ್ನು ವಿವೇಚನೆ­ಯಿಂದ ಬಳಸಿ ಪ್ರಬಲರಾಗಿ ತಮ್ಮದೇ ಸಮುದಾ­ಯದ ಇತರೆ ದುರ್ಬಲರನ್ನು ಶೋಷಣೆ ಮಾಡುತ್ತಿರುವುದು ದುರಂತ’ ಎಂದು ಗೊಟಗೋ­ಡಿಯ ಕರ್ನಾಟಕ ಜಾನ­ಪದ ವಿಶ್ವವಿದ್ಯಾಲ­ಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ವಿಷಾದಿ­ಸಿದರು.ಸ್ಥಳೀಯ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇ­ಜಿನಲ್ಲಿ ಸಹಾ­ಯಕ ಪ್ರಾಧ್ಯಾಪಕ ಎಸ್.ಎಂ.­ಗುರು­ದೇವ ಚಿರ­ಡೋಣಿ ರಚಿಸಿರುವ ‘ಅಹಿಂ­ಸಾ­ವಾದಿ ಮಾರ್ಟಿನ್ ಲೂಥರ್ ಕಿಂಗ್ ಜೂನಿ­ಯರ್’ ಕೃತಿ­ಯನ್ನು ಬಿಡು­ಗಡೆ ಮಾಡಿ ಅವರು ಮಾತನಾಡಿದರು.‘ವಿಶ್ವದ ಮಾನವತಾವಾದಿಗಳ ಹಾದಿ ತುಳಿದ  ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅಮೆ­ರಿಕದಲ್ಲಿ ಜಾರಿ­ಯ­ಲ್ಲಿದ್ದ ವರ್ಣಬೇಧ ನೀತಿ ಹಾಗೂ ಕರಿ­ಯರ ಮೇಲಿನ ದಬ್ಬಾಳಿಕೆ ಮತ್ತು ಶೋಷ­ಣೆಗಳ ವಿರುದ್ಧ ಅಹಿಂಸಾ­ತ್ಮ­ಕ­ವಾಗಿ ಹೋರಾಟ ನಡೆಸಿದವರು. ಅಂಥ ಮಹಾನ್ ಚೇತನದ ಬದುಕು–ಸಾಧನೆ ಕುರಿತು ಬೆಳಕು ಚೆಲ್ಲುವ ಅರ್ಥಪೂರ್ಣ ಪ್ರಯತ್ನ ಈ ಕೃತಿಯ ಮೂಲಕ ಯಶಸ್ವಿಯಾಗಿ ನಡೆದಿದೆ’ ಎಂದರು. ಉಪನ್ಯಾಸಕ ಡಾ.ಎಸ್.­ಜಿ.ವೈದ್ಯ ಮಾತನಾ­ಡಿದರು.ಪ್ರಾಂಶುಪಾಲ ಪ್ರೊ.ಡಿ.ಬಿ.ಮುಗಳಿ ಅಧ್ಯಕ್ಷತೆ ವಹಿ­ಸಿದ್ದರು. ಜಿ.ಪಂ. ಉಪಾ­ಧ್ಯಕ್ಷೆ ಗೀತಾ ಅಂಕಸಖಾನಿ, ಗ್ರಾ.ಪಂ. ಅಧ್ಯಕ್ಷೆ ನಂದಿನಿ ವಿರೂಪಣ್ಣನವರ, ವಾಣಿ­ಜ್ಯೋದ್ಯಮಿ ಸಿ.ಸಿ.ಬೆಲ್ಲದ, ಚಿಂತಕ ಡಾ.ಹಾಲತಿ ಸೋಮಶೇಖರ, ಮೈಸೂರು ವಿಶ್ವವಿದ್ಯಾ­ಲಯದ ವಿಶ್ವ­ಕೋಶ ವಿಭಾಗದ ಸಂಪಾದಕ ಡಾ.ಹಾ.­ತಿ.­ಕೃಷ್ಣೇಗೌಡ, ‘ಅರುಹು’ ತ್ರೈಮಾಸಿಕ ಸಂಪಾದಕ ಪ್ರೊ.ಎಚ್.­ಎಸ್.­ಉಮೇಶ, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.­ಮಾಸಣಗಿ, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಜಿ.­ಶಾಂತ­ಪೂರ­ಮಠ,ಮಂಜು­ನಾಥ.ಎಸ್.ಎಂ, ನಾಗ­ರಾಜ್ ಅಡಿಗ, ನಾಗರಾಜ್ ಪಾವಲಿ, ಎಸ್.ಎಸ್.­ಮುಚ್ಚಂಡಿ, ಟಿ.­ಶಿವ­ಕು­­ಮಾರ, ಎಸ್.­ಎಸ್.­­ಬಮ್ಮಿಗಟ್ಟಿ, ಪ್ರಭು ಗುರಪ್ಪನವರ, ರಾಜಶೇಖರ ಪರೆ­ಗೊಂಡರ ಈ ವೇಳೆ ಹಾಜರಿದ್ದರು. ಡಾ.ಮಲ್ಲಿಕಾರ್ಜುನ ಕಡ್ಡಿ­ಪುಡಿ ಸ್ವಾಗತಿಸಿದರು. ಎಸ್.ಎಂ.­ಗುರು­ದೇವ ಪ್ರಾಸ್ತವಿಕವಾಗಿ ಮಾತನಾ­ಡಿ­ದರು. ಸ್ಟೆಫಿ ಗೋಕಾವಿ ನಿರೂಪಿಸಿ­ದರು. ಸುರೇಶ ದೊಡ್ಡಮನಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry