‘ಸರ್ಎಂವಿ ಪ್ರತಿಯೊಬ್ಬರಿಗೂ ಮಾದರಿ’

7

‘ಸರ್ಎಂವಿ ಪ್ರತಿಯೊಬ್ಬರಿಗೂ ಮಾದರಿ’

Published:
Updated:

ವಿಜಯಪುರ: ‘ವಿಶ್ವೇಶ್ವರಯ್ಯ ಅವರ ಶಿಸ್ತು, ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಮಾದರಿ’ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿ ಕೊಂಡಿದ್ದ ಸರ್‌.ಎಂ. ವಿಶ್ವೇಶ್ವರ ಯ್ಯಅವರ ಜನ್ಮದಿನಾಚರಣೆ ಮತ್ತು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿ ಸಿ ಮಾತನಾಡಿದ ಅವರು, ರೈತರ ನೀರಿನ ಬವಣೆಯನ್ನು ನೀಗಿಸಲು ಕೆಆರ್‌ಎಸ್‌ ಅಣೆಕಟ್ಟು ನಿರ್ಮಿಸಿದ  ಖ್ಯಾತಿ ಹೊಂದಿರುವ ಅವರು ವಿಶ್ವದ ಎಲ್ಲಾ ಎಂಜಿನಿಯರ್‌ಗಳಿಗೂ ಮಾದ ರಿ ಎಂದು ತಿಳಿಸಿದರು.ತಾಲ್ಲೂಕಿನಲ್ಲಿ ವಾರದಿಂದ ಸುರಿದ ಮಳೆಯಿಂದಾಗಿ ಹಲವು ಕೆರೆಗಳು ತುಂಬಿದ್ದು, ಇದು ರೈತರಿಗೆ ಹರ್ಷವನ್ನು ತಂದಿದೆ. ನೀರಿನ ಸಮಸ್ಯೆ ಅಲ್ಪಮಟ್ಟಿಗೆ ಸುಧಾರಿಸುವ ಸೂಚನೆಗಳು ಕಂಡು ಬರುತ್ತಿವೆ. ಕಾಮಗಾರಿಗಳನ್ನು ಅಪೂ ರ್ಣಗೊಳಿಸಿರುವ ತಾಲ್ಲೂಕಿನಲ್ಲಿ ಅಧಿ ಕಾರಿಗಳ ಬಿಲ್ಲನ್ನು ತಡೆಹಿಡಿಯುವಂತೆ ಆದೇಶ ನೀಡಲಾಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಯನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.ತಹಶೀಲ್ದಾರ್‌ ಎನ್‌.ಸಿ .ವೆಂಕಟ ರಾಜು ಮಾತನಾಡಿ, ವಿದ್ಯಾ ರ್ಥಿಗಳು ಕೇವಲ ಅಕ್ಷರ ಜ್ಞಾನಕ್ಕಾಗಿ ಮಾತ್ರ ಓದದೆ, ಸಂಪನ್ಮೂಲ ವ್ಯಕ್ತಿ ಗಳಾಗಿ ಬೆಳೆಯಬೇಕು.  ಮಕ್ಕಳು ಶಿಕ್ಷ ಣ ಮತ್ತು ಸೌಲಭ್ಯ ವಂಚಿತರಾ ಗಬಾರದು ಎಂದು ಸರ್ಕಾರ ಅನೇಕ ಸವಲತ್ತುಗಳನ್ನು ಸರ್ಕಾರಿ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ಒದಗಿಸಿದೆ. ಮಕ್ಕಳು ಓದುವ ಇಚ್ಚಾ ಶಕ್ತಿಯನ್ನು ಹೊಂದಿ ಸೌಲಭ್ಯದ ಬಳಕೆಯೊಂದಿಗೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಿ ಎಂದು ತಿಳಿಸಿದರು.ಪುರಸಭಾ ಸದಸ್ಯ ಎಸ್‌.ಭಾಸ್ಕರ್‌, ಎಸ್‌ಡಿಎಂಸಿ ಅಧ್ಯಕ್ಷ ಆರ್‌. ದೇವರಾಜ್‌ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪುರಸಭಾ ಎಂಜಿನಿಯರ್‌ ಸರಿತಾ. ಲಕ್ಷ್ಮೀ ಮತ್ತು ಪಟ್ಟಣದ ಖಾಸಗಿ ಎಂಜಿನಿಯರ್‌ ರವೀಶ್‌ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.ಅರಣ್ಯಾ ಇಲಾಖೆ ವತಿಯಿಂದ ಶಾಲಾ ಕಾಲೇಜು ಆವರಣ, ಸರ್ಕಾರಿ ಆಸ್ಪತ್ರೆ ಆವರಣ, ಸ್ಮಶಾನ, ಗುಂಡು ತೋಪು ಮತ್ತಿತರೆ ಸರ್ಕಾರಿ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಮುನಿಶಾಮಗೌಡ, ಟೌನ್‌ ಅಧ್ಯಕ್ಷ ನಾರಾಯಣಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಮುನಿಸ್ವಾಮಿ, ಉಪತಹಸೀಲ್ದಾರ್‌ ಶ್ರೀನಿವಾಸನಾಯ್ಡು, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್‌, ಸದಸ್ಯ ಆಸೀಫ್‌, ಪ್ರಾಂಶುಪಾಲ ಶಂಕರ್‌ ಹೆಗಡೆ, ಹಾರೋಹಳ್ಳಿ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ, ಪುರಸಭಾ ಸದಸ್ಯ ಕೇಶವಪ್ಪ, ಮಾಜಿ ಸದಸ್ಯ ಎಚ್‌.ಎಂ.ಕೃಷ್ಣಪ್ಪ, ಅರಣ್ಯ ಇಲಾಖೆಯ ಎಸಿಫ್‌ ವೆಂಕಟೇಶ್‌, ಸಂರಕ್ಷಣಾಧಿಕಾರಿ ಶಾಂತಕುಮಾರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry