‘ಸರ್ಕಾರದ ನೆರವು ಸದ್ಬಳಕೆ ಅಗತ್ಯ’

7

‘ಸರ್ಕಾರದ ನೆರವು ಸದ್ಬಳಕೆ ಅಗತ್ಯ’

Published:
Updated:

ಚಿಕ್ಕಜಾಜೂರು: ಗ್ರಾಮದ ಅಭಿವೃದ್ಧಿಗೆ ಬೇಕಾಗುವ ಹಣಕಾಸಿನ ನೆರವನ್ನು ಸರ್ಕಾರದಿಂದ ಕೊಡಿಸುತ್ತೇನೆ. ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಗಮನ ಹರಿಸುವಂತೆ ಸಚಿವ ಎಚ್. ಆಂಜನೇಯ ತಿಳಿಸಿದರು.ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗ್ರಾಮದಲ್ಲಿ ಹೊಡೆದಿದ್ದ ಕೆರೆ ಏರಿ ವೀಕ್ಷಿಸಿ ಅವರು ಮಾತನಾಡಿದರು. ಕೆರೆಯ ದುರಸ್ತಿಗೆ ಪ್ರಕೃತಿ ವಿಕೋಪ ನಿಧಿಯಿಂದ ಈಗಾಗಲೇ ` 20 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೆರೆ ದುರಸ್ತಿಗೆ ಸಂಬಂಧ ಪಟ್ಟ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಕೆರೆಗೆ ಹೋಗುವ ಮಾರ್ಗದಲ್ಲಿನ ಹಳ್ಳಗಳಿಗೆ ಸೇತುವೆ ನಿರ್ಮಾಣಕ್ಕೆ, ರಸ್ತೆ ನಿರ್ಮಾಣಕ್ಕೆ ` 10 ಲಕ್ಷ ಹಣವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಸಚಿವರು  ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಹೊಸ ನ್ಯಾಯಬೆಲೆ ಅಂಗಡಿ, ಚಿಕ್ಕಂದವಾಡಿ ಗ್ರಾಮಕ್ಕೆ ಸೂಳೆಕೆರೆಯಿಂದ ನೀರು ಸೇರಿದಂತೆ ಹಲವು ಕೆಲಸಗಳನ್ನು ಮಾಡುವಂತೆ ಸಚಿವರು ಆದೇಶಿಸಿದರು.ನಾಮಕಾವಸ್ತೆ ಗ್ರಾಮ ಪಂಚಾಯ್ತಿ: ಗುಂಜಿಗನೂರು ಗ್ರಾಮ ಪಂಚಾಯ್ತಿ ನಾಮಕಾವಸ್ತೆಗೆ ಇದೆ. ಇಲ್ಲಿನ ಸದಸ್ಯರಿಗೆ ಗ್ರಾಮ ಪಂಚಾಯ್ತಿ ಏಕಿದೆ ಎಂಬುದೇ ತಿಳಿದಿಲ್ಲ ಎಂದು ಮಂಡಲ ಪಂಚಾಯ್ತಿ ಮಾಜಿ ಪ್ರಧಾನ ಜಿ.ಈ. ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಸಿಇಒ ನಾರಾಯಣಸ್ವಾಮಿ, ಅಸಿಸ್ಟೆಂಟ್ ಕಮೀಷನರ್ ತಿಪ್ಪೇಸ್ವಾಮಿ, ತಹಶೀಲ್ದಾರ್ ಚನ್ನಬಸಪ್ಪ, ಸಣ್ಣ ನೀರಾವರಿ ಕಾರ್ಯ ನಿರ್ವಾಹಕ ಎಂಜಿನಿಯರ್ ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್ ರುದ್ರಪ್ಪ, ಪಿ.ಎಸ್.ಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯ ರಂಗಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪರಮೇಶ್ವರಪ್ಪ, ಬಸವರಾಜಪ್ಪ, ರೇಣುಕಾಚಾರ್ಯ, ಸುರೇಶ್, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಓಂಕಾರಪ್ಪ, ಲೋಹಿತ್ ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry