ಭಾನುವಾರ, ಜೂನ್ 20, 2021
23 °C

‘ಸಲಿಂಗ ವಿವಾಹಕ್ಕೆ ಆಕ್ಷೇಪವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಸಲಿಂಗಿಗಳ ವಿವಾಹಕ್ಕೆ ತಮ್ಮ ಯಾವುದೇ ಆಕ್ಷೇಪವಿಲ್ಲ  ಎಂದು ಬೌದ್ಧ ಧರ್ಮಗುರು ದಲೈ ಲಾಮಾ  ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಪ್ರವಾಸದಲ್ಲಿರುವ ಅವರು,  ‘ಇಬ್ಬರು ಸಲಿಂಗಿಗಳು ಇಷ್ಟ ಪಟ್ಟು ಒಪ್ಪಿ ಮದುವೆ­ಯಾಗು­ವು­ದಾದರೆ ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ. ಸಲಿಂಗಿಗಳ ವಿವಾಹ ತೀರ್ಮಾನ ಸರ್ಕಾರಕ್ಕೆ ಬಿಟ್ಟ ಸಂಗತಿ ಹಾಗೂ ಅಂತಿಮವಾಗಿ ಅವರ ವೈಯಕ್ತಿಕ ವಿಷಯ ಎಂದು ಹೇಳಿದ್ದಾರೆ.ಬೌದ್ಧ ರಾಷ್ಟ್ರಗಳು ಸಲಿಂಗಿ ವಿವಾಹವನ್ನು ಮಾನ್ಯತೆ ಮಾಡಿಲ್ಲ. ಈ ಮೊದಲು ತಮ್ಮ ಪುಸ್ತಕವೊಂದರಲ್ಲಿ ಸಲಿಂಗಕಾಮವನ್ನು ದಲೈಲಾಮಾ ಪ್ರಶ್ನಿಸಿದ್ದರು.  ಅವರಿಗೆ ಅಮೆರಿಕದಲ್ಲಿ ಅಭೂತ­ಪೂರ್ವ ಸ್ವಾಗತ ದೊರೆತಿದ್ದು, ಕಾಂಗ್ರೆಸ್‌ ನಾಯ­ಕರು ಅವರು ಭೇಟಿ ಮಾಡಿ­ದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.