ಗುರುವಾರ , ಮಾರ್ಚ್ 4, 2021
26 °C
ವಿಶ್ವ ಪರಿಸರ ದಿನಾಚರಣೆಯಲ್ಲಿ ಸಲಹೆ

‘ಸಸಿ ನೆಟ್ಟರೆ ಬದುಕು, ಭವಿಷ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಸಿ ನೆಟ್ಟರೆ ಬದುಕು, ಭವಿಷ್ಯ’

ಗದಗ :ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಬಯಸಿದ್ದರೆ ವಾಸಿಸುವ ಸುತ್ತಮುತ್ತ ಸಸಿಗಳನ್ನು ನೆಟ್ಟು, ಪೋಷಿಸುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಹವಾಮಾನ ಇಲಾಖೆ ಹಿರಿಯ ವೀಕ್ಷಕ ಡಾ. ರಾಜೀವ ರೋಖಡೆ ಹೇಳಿದರು. ಸ್ಥಳೀಯ ವಿದ್ಯಾವರ್ಧಕ ಸಂಸ್ಥೆಯ ಸಿ.ಎಸ್.ಪಾಟೀಲ ಪ್ರೌಢಶಾಲೆಯಲ್ಲಿ ಎಚ್.ಎನ್. ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬೆಳೆದು ನಿಂತ ನಿಸ್ವಾರ್ಥ ಗಿಡ,ಮರಗಳು ಜನರಿಗೆ ಉಸಿರಾಡಲು ಆಮ್ಲಜನಕ ನೀಡುತ್ತವೆ. ತಿನ್ನಲು ಹಣ್ಣು ಕೊಡುತ್ತವೆ. ಆದರೆ ಮಾನವ ದುರಾಸೆಯಿಂದ ಅವುಗಳಿಗೆ ಕೊಡಲಿ ಪೆಟ್ಟು ನೀಡಿ ಮುಂದಿನ ಪೀಳಿಗೆಗೆ ವಿಷ ನೀಡುತ್ತಿದ್ದಾನೆ. ಪ್ರತಿಯೊಬ್ಬರು ಸಸಿ ನೆಡುವುದು ಕರ್ತವ್ಯ ಎಂದು ತಿಳಿದು ಮನೆ ಸುತ್ತಮುತ್ತ ನೆಟ್ಟು ಬೆಳೆಸಿದಾಗ ಮಾತ್ರ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.ಎಚ್.ಎನ್. ಮೆಮೋರಿಯಲ್ ಟ್ರಸ್ಟ್‌ ಅಧ್ಯಕ್ಷ ಸುಧೀಂದ್ರ ಶಿವಪೂರ ಮಾತನಾಡಿ, ಮಕ್ಕಳಿಗೆ ಪರಿಸರ ಮಹತ್ವ ತಿಳಿಸುವುದರಿಂದ ಪರಿಸರವನ್ನು ಸ್ವಚ್ಛ ಹಾಗೂ ರಕ್ಷಣೆ  ಮಾಡಬಹುದು. ಕಾಂಕ್ರೀಟ್ ಕಾಡಿನ ನಡುವೆ ಜನ್ಮ ದಿನಾಚರಣೆ, ವಿವಾಹ, ವಾರ್ಷಿಕೋತ್ಸವ ಮುಂತಾದ ಶುಭ ಸಂದರ್ಭಗಳಲ್ಲಿ ಸಸಿ ವಿತರಣೆ ಹಾಗೂ ಸಸಿ ನೆಡುವು ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು. ಶಾಲೆಯ ಮುಖ್ಯಶಿಕ್ಷಕ ಎಂ.ಬಿ.ಹೊಳ್ಳಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಗಿಡಮರಗಳು ಸಂಖ್ಯೆ ಹೆಚ್ಚಾಗಬೇಕಾಗಿದೆ, ಇದರಿಂದ ಉತ್ತಮ ಪರಿಸರ ಹಾಗೂ ಶುದ್ಧ ಗಾಳಿ ದೊರೆಯುತ್ತದೆ ಎಂದು ಹೇಳಿದರು.ಬಾಲಕಿಯರ ಪ್ರೌಢಶಾಲಾ ಶಿಕ್ಷಕ ವಿ.ಎಸ್.ಗೌಡರ ಅವರು ಪರಿಸರ ಮಾಲಿನ್ಯ  ಕುರಿತು ವಿವರಿಸಿದರು. ಮುಖ್ಯಶಿಕ್ಷಕಿ ಆರ್.ಎಸ್.ಗಾರ್ಗಿ, ಟ್ರಸ್ಟ್‌ ಕಾರ್ಯದರ್ಶಿ ಲತಾ ಎಸ್, ಉಪಾಧ್ಯಕ್ಷ ರವೀಂದ್ರ ಶಿವಪೂರ, ನಾಗರತ್ನ, ಶೋಭಾ ಶಿವಪುರ ಹಾಜರಿದ್ದರು. ಎಸ್.ಎಸ್. ಗುಜಮಾಗಡಿ, ಸಂಗನಗೌಡ ರಾಮನಗೌಡ ಹಾಜರಿದ್ದರು. ತುಳಸಿ ಜೋಶಿ ಪ್ರಾರ್ಥಿಸಿದರು. ಟ್ರಸ್ಟ್ ಅಡಳಿತಾಧಿಕಾರಿ ಮಲ್ಲಮ್ಮ ಗಾಣಗೇರ ಸ್ವಾಗತಿಸಿದರು. ಡಾ. ಆರ್.ಎಲ್.ಹಂಸನೂರ ನಿರೂಪಿಸಿದರು. ಎಸ್.ವಿ.ಜೋಶಿ ವಂದಿಸಿದರು.ನಾವು ನೆಡುವ ಒಂದು ಸಸಿ ಮುಂದಿನ ದಿನಗಳಲ್ಲಿ ಸಾವಿರಾರು ಜನರಿಗೆ ಶುದ್ಧ ಗಾಳಿ, ನೆರಳು ನೀಡಿ ಋಣ ತೀರಿಸುತ್ತದೆ.

ಡಾ.ರಾಜೀವ ರೋಖಡೆ, ಹಿರಿಯ ಹವಾಮಾನ ವೀಕ್ಷಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.