‘ಸಹಕಾರಿ ಏಳಿಗೆ – ಮಹಿಳಾ ಗ್ರಾಹಕರ ಪಾತ್ರ ಅಗತ್ಯ'

7

‘ಸಹಕಾರಿ ಏಳಿಗೆ – ಮಹಿಳಾ ಗ್ರಾಹಕರ ಪಾತ್ರ ಅಗತ್ಯ'

Published:
Updated:

ಸಿಂಧನೂರು: ಯಾವುದೇ ಸಹಕಾರಿ ಸಂಘವು ಸಮಗ್ರ ಏಳಿಗೆ ಕಾಣಬೇಕಾದರೆ ಮಹಿಳಾ ಗ್ರಾಹಕರು ಉಳಿತಾಯ, ಆರ್‌ಡಿ ಖಾತೆ, ಪಿಗ್ಮಿ ಖಾತೆಗಳನ್ನು ತೆರೆಯಬೇಕು, ಸಹಕಾರಿ ಸಂಸ್ಥೆಯಲ್ಲಿ ವಿಶ್ವಾಸವಿಟ್ಟು ಹೆಚ್ಚಿನ ಠೇವಣಿಗಳನ್ನು ಇಡುವುದರಿಂದ ಸಹಕಾರಿಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಆದಿತ್ಯ ನಾರಾಯಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಕೆಂಗಲ್‌ ಅಭಿಪ್ರಾಯಪಟ್ಟರು.ನಗರದ ಶ್ರೀರಾಮ ಮಂದಿರ ಸಭಾಂಗಣದಲ್ಲಿ ಭಾನುವಾರ ನಡೆದ ಆದಿತ್ಯ ನಾರಾಯಣ ಸಹಕಾರಿಯ 2ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ಯಾಂಕ್‌ ಆರಂಭವಾಗಿ ಕೇವಲ 9 ತಿಂಗಳಲ್ಲಿ ಕೋಟಿಗಟ್ಟಲೆ ವ್ಯವಹಾರ ಮಾಡಿದೆ. 36,13,000ರೂ. ಷೇರು ಬಂಡವಾಳ ಹೊಂದಿದೆ. ಇದುವರೆಗೂ 32,91,448 ರೂ. ಸಾಲ ನೀಡಿದೆ. 39,01,815 ರೂ. ಠೇವಣಿಗಳನ್ನು ಹೊಂದಿದೆ. ವಿವಿಧೆಡೆ 5ಲಕ್ಷ ರೂ. ಹೂಡಿಕೆ ಮಾಡಲಾಗಿದೆ.ಹೀಗೆ ನಿರ್ದೇಶಕರ ಆಸಕ್ತಿಯ ಕಾರಣ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಬ್ಯಾಂಕುಗಳನ್ನು ತಮ್ಮ ಸಂಸ್ಥೆ ಹಿಂದೆ ಹಾಕಿ ಬೆಳೆದಿದೆ ಎಂದು ವಿವರಿಸಿದರು.ಸಹಕಾರಿ ಉಪಾಧ್ಯಕ್ಷ ರಾಮ­ರಾವ್‌ ಕುಲಕರ್ಣಿ ಮಾತನಾಡಿ, ವಿಪ್ರ ಸಮು­ದಾಯ ಎಲ್ಲ ರಂಗಗಳಲ್ಲಿ ಹಿಂಜರಿಕೆ­ಯಿಲ್ಲದೆ ಮುಂದುವರೆ­ಯಬೇಕು. ಮುಂದಿನ ದಿನಗಳಲ್ಲಿ ಶಾಲಾ–­ಕಾಲೇಜುಗಳನ್ನು ಕಟ್ಟಿ ಬೆಳೆಸಬೇಕು ಎಂದು ಕರೆ ನೀಡಿದರು.ನಿರ್ದೇಶಕರಾದ ಮನೋಹರ ಹುದ್ದಾರ, ಶ್ರೀಧರ ಕುಲಕರ್ಣಿ, ಪ್ರಹ್ಲಾದ ಗುಡಿ, ಷೇರುದಾರರಾದ ವೆಂಕಣ್ಣಾ­ಚಾರ್‌ ದೋಟಿಹಾಳ, ರಮೇಶ ನರೇಗಲ್‌, ಲಕ್ಷ್ಮೀದೇವಿ, ತಿರುಮಲ­ರಾವ್ ಕುಲಕರ್ಣಿ, ರಾಘವೇಂದ್ರ ಜವಳಗೇರಾದ ಮಾತನಾಡಿದರು. ಪಾಂಡುರಂಗ ದೇಸಾಯಿ ಪ್ರಾಸ್ತಾವಿ­ಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್‌ ಕಾನಿಹಾಳ ವರದಿ ವಾಚಿಸಿದರು. ಸುಷ್ಮಾ ಪ್ರಾರ್ಥಿಸಿದರು. ಹನುಮೇಶ ಜಾಗೀರದಾರ ಸ್ವಾಗತಿಸಿದರು. ರೇಣುಕಾ ಕುಲಕರ್ಣಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry