‘ಸಹಕಾರಿ ಸಂಘಗಳ ಕೃಷಿ ಸಾಲ ಮನ್ನಾ ಇಲ್ಲ’

7

‘ಸಹಕಾರಿ ಸಂಘಗಳ ಕೃಷಿ ಸಾಲ ಮನ್ನಾ ಇಲ್ಲ’

Published:
Updated:

ಹೊನ್ನಾಳಿ (ದಾವಣಗೆರೆ ಜಿಲ್ಲೆ): ಸಹಕಾರಿ ಸಂಘಗಳಲ್ಲಿ ರೈತರು ಮಾಡಿರುವ ಕೃಷಿ ಸಾಲವನ್ನು ಇನ್ನು ಮುಂದೆ ಸರ್ಕಾರ ಮನ್ನಾ ಮಾಡುವುದಿಲ್ಲ ಎಂದು ಸಹಕಾರ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ತಿಳಿಸಿದರು.ಇಲ್ಲಿನ ಹಿರೇಕಲ್ಮಠದಲ್ಲಿ ಬುಧವಾರ ನಡೆದ ಪಿಕಾರ್ಡ್‌ ಬ್ಯಾಂಕ್‌ನ ‘ಅಮೃತ ಮಹೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಕೃಷಿ ಸಾಲ ಮನ್ನಾ ಮಾಡುತ್ತಿದ್ದರೆ, ರೈತರು ಸಹಕಾರಿ ಸಂಘಗಳ ಸಾಲ ಪಾವತಿಸುವುದಿಲ್ಲ. ಸಾಲ ಸಕಾಲಕ್ಕೆ ನೀಡದಿದ್ದಲ್ಲಿ ಸಹಕಾರಿ ಸಂಘಗಳು ಮುಚ್ಚುತ್ತವೆ. ಹೀಗಾಗಿ, ಸಾಲ ಮನ್ನಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry