ಶುಕ್ರವಾರ, ಜೂನ್ 25, 2021
21 °C
ಷೇರು ಸಂಗ್ರಹಣೆ ಸಮಾರಂಭ

‘ಸಹಕಾರ ತತ್ವ ಅಳವಡಿಕೆ ಇಂದಿನ ಅಗತ್ಯಗಳಲ್ಲಿ ಒಂದು’

ಪ್ರಜಾವಣೆ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಸಹಕಾರ ತತ್ವವು ಸಾಮಾಜಿಕ ಜೀವನ­ದಲ್ಲಿ ಸಮರ್ಪಕವಾಗಿ ಆಚರಣೆಗೆ ಬಂದರೆ ಬದುಕು ನಂದನವನವಾಗುತ್ತದೆ ಎಂದು ಸಹಕಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ತಿಳಿಸಿದರು.ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ  ಉತ್ತರ ಕರ್ನಾಟಕ ಸಾಂಸ್ಕೃತಿಕ ವೇದಿಕೆಯು ಉದ್ದೇಶಿತ ಶ್ರೀ ಕೂಡಲಸಂಗಮ ವಿವಿಧೋದ್ದೇಶ ಸಹಕಾರ ಸಂಘದ ಷೇರು ಸಂಗ್ರಹಣೆ ಸಮಾರಂಭವನ್ನು ಉದ್ಘಾಟಿಸಿ ಮಾತ­ನಾ­ಡಿ­ದರು. ಸಂಘದ ಪದಾಧಿಕಾರಿಗಳ ಪ್ರಾಮಾಣಿಕತೆ ಮೇಲೆ ಅದರ ಶ್ರೇಯಸ್ಸು ಅವಲಂಭಿಸಿದೆ ಎಂದರು.ಷೇರು ಸಂಗ್ರಹಣೆಗೆ ಲೋಕಾಯುಕ್ತ ಡಿವೈಎಸ್ಪಿ ಡಿ.ಪಾಲಕ್ಷಯ್ಯ ಚಾಲನೆ ನೀಡಿ­ದರು.ಸಹಕಾರ ಸಂಘಗಳ ಜಿಲ್ಲಾ ನಿಬಂಧಕ ಲಕ್ಷ್ಮೀಪತಯ್ಯ, ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಮುನಿ­ರಾಜು, ಸಹಾಯಕ ನಿಬಂಧಕ ಮೂಡ­ಲ­­ಗಿರಿಯಪ್ಪ ಸಂಘದ ಉದ್ದೇಶಗಳನ್ನು ವಿವರಿಸಿದರು. ಬಸವಣ್ಣ ದೇವರ ಮಠದ  ಶ್ರೀ ಸಿದ್ದಲಿಂಗ ಸ್ವಾಮೀಜಿ ₨ 50 ಸಾವಿರ ಠೇವಣಿ ನೀಡಿದರು.ನಿವೃತ್ತ ಕೃಷಿ ಆಯುಕ್ತ ಡಾ.ವಿ. ಚಂದ್ರಶೇಖರ್‌, ಬೆಂಗಳೂರು ಸಂಘದ ಅಧ್ಯಕ್ಷ ಡಾ. ಚಂದ್ರಶೇಖರ ಸಾಂಬ್ರಾಣಿ, ದಾಸರಹಳ್ಳಿ ಸಂಘದ ಅಧ್ಯಕ್ಷ ಎಸ್‌.ಎಸ್‌.ಪಾಟೀಲ, ಶೋಭಾ ಮಹೇಶ್‌, ಕಾಮಾಕ್ಷಿಪಾಳ್ಯ ಸಂಘದ ಅಧ್ಯಕ್ಷ ಸಂಗಪ್ಪ ಚಂದಾಪುರ್‌, ಡಾ. ರಾಘವೇಂದ್ರ ಜೋಶಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.