ಸೋಮವಾರ, ಜೂನ್ 14, 2021
26 °C

‘ಸಾಂಕ್ರಾಮಿಕ ರೋಗ ಹರಡಿದರೆ ಅಧಿಕಾರಿಗಳೇ ಹೊಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಯಾವುದಾದರೂ ಪ್ರದೇಶ­ದಲ್ಲಿ ರೋಗ ಕಂಡುಬಂದರೆ ಸಂಬಂಧ­ಪಟ್ಟ ಅಧಿಕಾರಿಗಳನ್ನೇ ಜವಾ­ಬ್ದಾರ­ರನ್ನಾಗಿ ಮಾಡ­ಲಾಗುವುದು’ ಎಂದು ಆರೋಗ್ಯ ಸಚಿವ ಯು.ಟಿ.­ಖಾದರ್‌ ಹೇಳಿದರು.ನಗರದಲ್ಲಿ ಸೋಮವಾರ ನಡೆದ ಪರಿ­ಶೀ­ಲನಾ ಸಭೆಯಲ್ಲಿ ಅವರು ಬಿಬಿಎಂಪಿ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.‘ಬಿಬಿಎಂಪಿಯ ಹಿರಿಯ ಆರೋಗ್ಯ ಪರಿ­ವೀಕ್ಷಕರು ಹಾಗೂ ಜಲಮಂಡಳಿ ಸಹಾ­­ಯಕ ಕಾರ್ಯನಿರ್ವಾಹಕ ಎಂಜಿನಿ­ಯರ್‌ಗಳು ಸೇರಿ ಒಂದು ತಂಡವಾಗಿ ರಚಿಸಿ­ಕೊಳ್ಳಬೇಕು. ಈ ತಂಡ ತಮ್ಮ ವ್ಯಾಪ್ತಿ­ಯಲ್ಲಿನ ನೀರಿನ ಕೊಳವೆ ಮತ್ತು ಒಳಚರಂಡಿ ಇರುವ ಸ್ಥಳಗಳನ್ನು ಗುರುತಿಸಿ, ಕುಡಿಯುವ ನೀರು ಕಲುಷಿತ­ವಾಗ­ದಂತೆ ತಪಾಸಣೆ ಕಾರ್ಯನಿರ್ವ­ಹಿಸ­­ಬೇಕು. ಕುಡಿಯುವ ನೀರಿನಲ್ಲಿ ಕರ­ಗಿದ ಕ್ಲೋರಿನ್ ಅಂಶವನ್ನು  ಪ್ರಮಾಣ­­ವನ್ನು ಪರೀಕ್ಷಿಸಬೇಕು’ ಎಂದರು.‘ಬೇಸಿಗೆಯಲ್ಲಿ ನೀರಿನ ಅಭಾವದಿಂದ ಸಾರ್ವ­ಜನಿಕರು ಖಾಸಗಿ ಟ್ಯಾಂಕರ್‌­ಗಳಿಂದ ಹೆಚ್ಚು ನೀರು ಖರೀದಿಸುತ್ತಾರೆ. ಹೀಗಾಗಿ ನೀರು ಸರಬರಾಜು ಮಾಡುವ ಟ್ಯಾಂಕರ್‌­ಗಳನ್ನು ಗುರುತಿಸಿ ಅವುಗಳಲ್ಲಿ ಕ್ಲೋರಿನ್ ಅಂಶ ಸೂಕ್ತ ಪ್ರಮಾಣ­ದಲ್ಲಿದೆಯೇ ಹಾಗೂ ಈ ನೀರು ಕುಡಿ­ಯಲು ಯೋಗ್ಯವೇ ಎಂಬುದನ್ನು ಪರೀಕ್ಷಿಸಿ ದೃಢಪಡಿಸಿಕೊಳ್ಳಬೇಕು’ ಎಂದು ಹೇಳಿದರು.‘ಎಲ್ಲಾ ವಲಯಗಳ ವೈದ್ಯಾಧಿ­ಕಾರಿಗಳು ತಮ್ಮ ಹಿರಿಯ ಆರೋಗ್ಯ ಪರಿವೀ­ಕ್ಷಕರ ಜತೆಯಲ್ಲಿ ರಸ್ತೆ ಬದಿಯಲ್ಲಿ ತೆರೆದಿಟ್ಟ ತಿಂಡಿ ಪದಾರ್ಥ ಹಾಗೂ ಕತ್ತರಿ­ಸಿದ ಹಣ್ಣು ಮಾರಾಟ ಮಾಡುವುದನ್ನು ತೆರವುಗೊಳಿಸಲು ಕ್ರಮ ವಹಿಸಬೇಕು’ ಎಂದರು.‘ಪ್ರತಿ ದಿನ ಹೋಟೆಲ್ ಮತ್ತು ಉಪಾಹಾರ ಗೃಹಗಳಿಗೆ ಭೇಟಿ ನೀಡಿ ಅಡುಗೆ ಕೋಣೆ ಹಾಗೂ ಆಹಾರ ಸರಬ­ರಾಜು ಮಾಡುವವರು ಶುಚಿತ್ವ ಕಾಪಾಡು­ತ್ತಿರುವ ಕುರಿತು ತಪಾಸಣೆ ಮಾಡ­ಬೇಕು. ಶುಚಿತ್ವ ಕಾಪಾಡದಿರುವ ಹೋಟೆಲ್ ಹಾಗೂ ಉಪಹಾರ ಗೃಹ­ಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳ­ಬೇಕು’ ಎಂದು ಹೇಳಿದರು.ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿ­ನಾರಾಯಣ ಮಾತನಾಡಿ, ‘ಈ ವರ್ಷ ಬೇಸಿಗೆ­ಯಲ್ಲಿ ರಸ್ತೆ ಬದಿ ಚರಂಡಿಗಳಲ್ಲಿ ನೀರು ಶೇಖರಣೆ ಆಗದಂತೆ ಕ್ರಮ ವಹಿ­ಸಲು ೪೦೦ ಕಿ.ಮೀ. ಉದ್ದದ ಚರಂಡಿಗಳ ಹೂಳನ್ನು ಎತ್ತಲಾಗುತ್ತಿದೆ’ ಎಂದು ತಿಳಿಸಿದರು.₨ 38.75 ಕೋಟಿ ಕಾಮಗಾರಿಗಳಿಗೆ ಅನುಮೋದನೆ

ಬೆಂಗಳೂರು:
ಬೇಸಿಗೆಯಲ್ಲಿ ಎದುರಾಗಲಿರುವ ನೀರಿನ ಬವಣೆಯನ್ನು ತಪ್ಪಿಸಲು ₨38.75 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಚ್‌.ಬಸವರಾಜು ತಿಳಿಸಿದರು.ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕೊಳವೆ ಬಾವಿ ಕೊರೆದು ನೀರಿನ ಸಂಪರ್ಕ ಒದಗಿಸುವುದು, ಕೊಳವೆ ಬಾವಿ ದುರಸ್ತಿ ಹಾಗೂ ಮೇಲ್ವಿಚಾರಣೆ, ಟ್ಯಾಂಕರ್‌ ಮೂಲಕ ನೀರು ಒದಗಿಸುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲು ಪಾಲಿಕೆಯ ವಿವಿಧ ವಾರ್ಡ್‌ಗಳಿಂದ ಪ್ರಸ್ತಾವನೆ ಬಂದಿತ್ತು. ಈ ಕಾಮಗಾರಿಗಳಿಗೆ  ₨ 38.75 ಕೋಟಿ ಮೊತ್ತವಾಗಬಹುದೆಂದು ಅಂದಾಜಿಸಲಾಗಿದ್ದು, ಅನುಮೋದನೆ ನೀಡಲಾಗಿದೆ ಎಂದರು.ಸಾಹಿತ್ಯ ಪರಿಷತ್‌ಗೆ ಲಿಫ್ಟ್‌ ವ್ಯವಸ್ಥೆ

ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ಲಿಫ್ಟ್‌ ವ್ಯವಸ್ಥೆ ಕಲ್ಪಿಸಲು ₨50 ಲಕ್ಷ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಭವನ ನಿರ್ಮಾಣಕ್ಕೆ ₨1 ಕೋಟಿ, ಚಿಕ್ಕಲಾಲ್‌ಬಾಗ್‌ ಮತ್ತು ನೆಹರೂ ಉದ್ಯಾನದಲ್ಲಿ ₨20 ಲಕ್ಷ ವೆಚ್ಚದಲ್ಲಿ ಜಿಮ್ನಾಶಿಯಂ ಉಪಕರಣಗಳ ಅಳವಡಿಕೆ,  ಕಾಟನ್‌ಪೇಟೆ ಪ್ರದೇಶದಲ್ಲಿ ₨1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ  ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಅನುಮೋದನೆ  ನೀಡಲಾಗಿದೆ ಎಂದು ತಿಳಿಸಿದರು.ಪ್ರಸ್ತುತ ನಡೆಯಲಿರುವ ಎಲ್ಲ ಕಾಮಗಾರಿಗಳ ನಿರ್ವಹಣೆಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ಗೆ ವಹಿಸಿಕೊಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.