‘ಸಾಕ್ಷರತೆಗೆ ಅನುದಾನದ ಕೊರತೆ’

7

‘ಸಾಕ್ಷರತೆಗೆ ಅನುದಾನದ ಕೊರತೆ’

Published:
Updated:

ದೇವನಹಳ್ಳಿ: ‘ಸರ್ಕಾರ ಸಾಕ್ಷರತೆಯ ಪ್ರಮಾಣ ಹೆಚ್ಚಳಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಈ ಕುರಿತು ಉನ್ನತ

ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದು ಶಾಕಸ ಪಿಳ್ಳಮುನಿಶ್ಯಾಮಪ್ಪ ಭರವಸೆ ನೀಡಿದರು.ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ ಜಿಲ್ಲಾ ಲೋಕಶಿಕ್ಷಣ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಅಂತರರಾಷ್ಟ್ರೀಯ ಸಾಕ್ಷ ರತೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಸ್ವಾತಂತ್ರ್ಯ ದೊರಕಿ ಅರವತ್ತೇಳು ವರ್ಷ ಕಳೆದರೂ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಅನಕ್ಷರತೆ ತೊಲಗಿಸಲು ಸಾಧ್ಯವಾಗಿಲ್ಲ’ ಎಂದು ಶಾಸಕ ಪಿಳ್ಳ ಮುನಿಶ್ಯಾಮಪ್ಪ ಅಸಮಾಧಾನ ವ್ಯಕ್ತ ಪಡಿಸಿದರು.ಜಿಲ್ಲೆಯಲ್ಲಿ ಒಟ್ಟು 5.70 ಲಕ್ಷ ಜನ ರಿದ್ದಾರೆ. ಅದರಲ್ಲಿ 1.7 ಲಕ್ಷ ಅನಕ್ಷರ ಸ್ಥರಿದ್ದಾರೆ ಎಂದು  ಬೇಸರ ವ್ಯಕ್ತಪಡಿಸಿದರು.ತಹಶೀಲ್ದಾರ್‌ ಡಾ.ಎನ್.ಸಿ. ವೆಂಕ  ಟರಾಜು ಮಾತನಾಡಿ, ‘ಶಿಕ್ಷಣ ಕ್ಷೇತ್ರಕ್ಕೆ ಬ್ರಿಟಿಷರು ಮತ್ತು ಕ್ರೈಸ್ತ ಮಿಷ ನರಿಗಳ ಕೊಡುಗೆ ಅಪಾರ. ಕಲಿಯಲು ಇಚ್ಛಾ ಶಕ್ತಿ ಅಗತ್ಯ. ಪ್ರತಿಯೊಬ್ಬರು ಸುಶಿಕ್ಷಿತ ರಾದರೆ ದೇಶದ ಪ್ರಗತಿ ಸಾಧ್ಯ’ ಎಂದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಲೋಹಾರ, ಜಿಲ್ಲಾ ವಯಸ್ಕರ ಶಿಕ್ಷಣ ಸಹಾಯಕಾಧಿಕಾರಿ ರಮೇಶ್ ಮಾತನಾಡಿದರು. ತಾ.ಪಂ ಅಧ್ಯಕ್ಷೆ ರಾಧಿಕಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮುನಿ ವೆಂಕ ಟಪ್ಪ, ಪುರಸಭೆ ಸದಸ್ಯ ವಿ. ಗೋಪಾಲ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೇಮಲತಾ, ಲೋಕಶಿಕ್ಷಣ ತಾಲ್ಲೂಕು ಸಂಯೋಜಕ ಪುಟ್ಟಸ್ವಾಮಿ ಹಾಗೂ ನಾಗರಾಜ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry