‘ಸಾಧನಾ’ ಸಮಾಜದಲ್ಲಿ ಸಾಂಸ್ಕೃತಿಕ ರಂಗು

7

‘ಸಾಧನಾ’ ಸಮಾಜದಲ್ಲಿ ಸಾಂಸ್ಕೃತಿಕ ರಂಗು

Published:
Updated:

ವಿದ್ಯಾಮಾನ್ಯನಗರದಲ್ಲಿ ‘ಸಾಧನಾ ಮಹಿಳಾ ಸಮಾಜ’ದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಹಿರಿಯ ಉದ್ಯಮಿ ವತ್ಸಲಾ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಕಮಲಾ  ಅಧ್ಯಕ್ಷತೆ ವಹಿಸಿದ್ದರು.ಸಾಧನಾ ಸಮಾಜದ ಅಧ್ಯಕ್ಷೆ  ಶ್ರೀಮತಿ ಸಿ. ಕೆ., ಕಾರ್ಯದರ್ಶಿ ಸೀತಾ, ಸುಜಯ, ಗೌರವಾಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷೆ ಲತಾ ಮಾಧವ್, ಹಿರಿಯರಾದ ಕೆ ರಾಘವೇಂದ್ರರಾವ್, ಲಕ್ಷ್ಮಣ ಕುಲಾಲ್ , ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.ನಂತರ ನಡೆದ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ‘ಆರಾಧನಾ ನೃತ್ಯ ಮತ್ತು ಸಂಗೀತ ಶಾಲೆ’ಯ ಶಿಕ್ಷಕಿ ಮೇಘಾ ಮತ್ತು ತಂಡದಿಂದ ಭರತನಾಟ್ಯ, ಪುಟಾಣಿ ಮಕ್ಕಳಿಂದ ನೃತ್ಯ, ಹೃತಿಕ್ ಭಾರ್ಗವ ಅವರಿಂದ ಹಿಂದೂಸ್ತಾನಿ ಸಂಗೀತ, ಸಿರಿಕಲಾ ಮೇಳದವರಿಂದ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry