ಗುರುವಾರ , ಜೂನ್ 24, 2021
29 °C

‘ಸಾಧನೆಯಿಂದ ಯಶಸ್ಸು ಸಾಧಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ಸಾಧನೆ ಪ್ರಯತ್ನ­ವಾದಿಗಳ ಸ್ವತ್ತು ಎಂದು ನಾರಾಯಣಪುರ ನವೋದಯ ವಿದ್ಯಾ­ಲಯದ ಪ್ರಾಚಾರ್ಯ ಡಾ.ಎಸ್‌.ಕೆ ದತ್ತಾತ್ರೇಯ ಹೇಳಿದರು.ಪಟ್ಟಣದ ವೀರಭದ್ರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಸಂಸ್ಥೆಯ ವಾರ್ಷಿ­ಕೋತ್ಸವದಲ್ಲಿ ಮಾತ­ನಾಡಿದರು.ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಉನ್ನತ ಗುರಿ, ಉತ್ತಮ ಗುರುವಿನ ಜೊತೆಗೆ ಕಠಿಣ ಪರಿಶ್ರಮ ಪಡುವಾತ ಜೀವನದಲ್ಲಿ ಎಂಥ ಸಮಸ್ಯೆಗಳಿದ್ದರೂ  ಅತ್ಯಂತ ಸರಳ ಎದುರಿಸಬಲ್ಲ ಎಂದರು.‘ಸ್ಪರ್ಧಾತ್ಮಕ ಯುಗದಲ್ಲಿ ದಿನಕ್ಕೊಂದು ಹೊಸ ಔಷಧ ಅವಿಷ್ಕಾರ ಆಗುತ್ತಿರುವುದರ ಬೆನ್ನಲ್ಲೇ ರೋಗಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ. ಔಷಧ ವಿಜ್ಞಾನ ವಿದ್ಯಾರ್ಥಿಗಳಿಗೆ ವಿಫುಲ ಉದ್ಯೋಗಗಳ ಅವಕಾಶಗಳಿದ್ದು ವಿದ್ಯಾರ್ಥಿ­ಗಳು ಪ್ರಯೋಜನ ಪಡೆಯ­ಬೇಕು ಎಂದು ಡಾ.ಮಹಾದೇವಪ್ಪ ರಾಂಪೂರೆ ಹೇಳಿದರು.ಬೀದರ್‌ ಔಷಧ ನಿಯಂತ್ರಣ ಅಧಿಕಾರಿ ಎನ್‌.ವಿ ರಘುರಾಮ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಮುಖ್ಯ ಧರ್ಮದರ್ಶಿ ಡಾ,ಚಂದ್ರಶೇಖರ ಪಾಟೀಲ, ಕೆ.ಸುರೇಶ ಮಾತನಾಡಿದರು.ಪ್ರಾಸ್ತಾವಿಕ ಮಾತನಾಡಿದ ಪ್ರಾಚಾರ್ಯ ಡಾ.ನಾಗೇಂದ್ರ ಧುಮ್ಮನ­ಸೂರ ವಿಜ್ಞಾನ ಮಹಾವಿದ್ಯಾಲಯ ಫಲಿತಾಂಶ ಕುರಿತು ವಿವರಿಸಿದರು. ಬಸವಶ್ರೀ ಪ್ರಕಾಶ ಮುಗಳಿ ಇದ್ದರು. ಶೈನಾ ಅನ್ಸಾರಿ ಹಾಗೂ ಮಸ್ತಾನ್‌ ನಿರೂಪಿಸಿದರು. ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯ­ರನ್ನು ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.