ಬುಧವಾರ, ಜೂನ್ 16, 2021
22 °C
ಪ್ರೊ. ಹಸನ್‌ ಮನ್ಸೂರ್‌ ಸಂಸ್ಮರಣೆ

‘ಸಾಮಾಜಿಕ, ಆರ್ಥಿಕ ಸಮಾನತೆಗೆ ಹೋರಾಡಿದ ಹೋರಾಟಗಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಾನವ ಹಕ್ಕುಗಳ ಹೋರಾಟ­ಗಾರ, ಅಪರೂಪದ ವ್ಯಕ್ತಿತ್ವ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಹೋರಾಡಿದವರು ಪ್ರೊ. ಹಸನ್‌ ಮನ್ಸೂರ್‌’ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಹೇಳಿದರು.ಮಾನವ ಹಕ್ಕು ಕಾರ್ಯಕರ್ತರು ಶನಿವಾರ ಸಂಸ ಬಯಲು ರಂಗ ಮಂದಿರ­ದಲ್ಲಿ ಇತ್ತೀಚೆಗೆ ನಿಧನರಾದ ‘ಪ್ರೊ. ಹಸನ್‌ ಮನ್ಸೂರ್‌ ಅವರ ಸಂಸ್ಮರಣೆ’ ಕಾರ್ಯಕ್ರಮದಲ್ಲಿ  ಮಾತನಾಡಿದರು.‘ಮಾನವ ಹಕ್ಕುಗಳ ಹೋರಾಟದಲ್ಲಿ ಎಂದಿಗೂ ಮುಂಚೂಣಿಯಲ್ಲಿದ್ದವರು. ತಮ್ಮ ಪರಿಧಿಯಿಂದ ಹೊರಬಂದು ಜನರ ಕಷ್ಟಗಳಿಗೆ ಸ್ಪಂದಿಸಿದ ವ್ಯಕ್ತಿತ್ವ ಪ್ರೊ. ಮನ್ಸೂರ್‌ ಅವರು’ ಎಂದು  ಹೇಳಿದರು.ಲೇಖಕ ಜಿ.ಕೆ.ಗೋವಿಂದರಾವ್‌ ಮಾತನಾಡಿ, ‘ಹಸನ್‌ ಮನ್ಸೂರ್‌ ಅವರು ಅಪರೂಪದ ವ್ಯಕ್ತಿಯಾಗಿದ್ದರು. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಅವರು ಬಿಟ್ಟು­ಹೋದ ಆಶಯಗಳನ್ನು ಈಡೇರಿಸ­ಬೇಕಾಗಿದ್ದು ನಮ್ಮ ಕರ್ತವ್ಯ’ ಎಂದರು.ಗೃಹ ಕಾರ್ಮಿಕ ಸಂಘಟನೆಯ ಅಧ್ಯಕ್ಷೆ ಸಿಲಿಯಾ, ‘ನಮ್ಮ ಎಲ್ಲಾ ಸಂಘರ್ಷದ ಸಮಯದಲ್ಲಿ ಜತೆಗಿದ್ದು, ಬೆಂಬಲ ನೀಡಿ, ಧೈರ್ಯವನ್ನು ನೀಡಿದವರು. ಅವರು ಮರೆ­ಯಾಗಿಲ್ಲ. ಹೋರಾಟದ ರೂಪ­ದಲ್ಲಿ ಎಂದಿಗೂ ಜೀವಂತ­ವಾಗಿದ್ದಾರೆ’ ಎಂದು ಸ್ಮರಿಸಿದರು.ವಿವಿಧ ಸಾಮಾಜಿಕ ಕಾರ್ಯಕರ್ತರು ತಮ್ಮ ಕಾವ್ಯ, ಭಾಷಣ, ಕವಿತೆ ಮೂಲಕ ಹಸನ್‌ ಮನ್ಸೂರ್‌ ಅವರನ್ನು ಸ್ಮರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.