ಶನಿವಾರ, ಜೂನ್ 12, 2021
28 °C

‘ಸಾಮಾಜಿಕ ಸವಾಲಿಗೆ ಜೈವಿಕ ತಂತ್ರಜ್ಞಾನ ಪರಿಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ:‘ಪ್ರಸ್ತುತ ಪರಿಸ್ಥಿತಿಯಲ್ಲಿ ಹಲವು ಸಾಮಾಜಿಕ ಮತ್ತು ಪರಿಸರದ ಸವಾಲುಗಳಿಗೆ ಜೈವಿಕ ತಂತ್ರಜ್ಞಾನದ ಬಳಕೆ ಪರಿಹಾರ ನೀಡಬಲ್ಲದು’ ಎಂದು ಕರ್ನಾಟಕ ಜೈವಿಕ ತಂತ್ರಜ್ಞಾನ ಸೌಲ ಭ್ಯಗಳ ಸಂಸ್ಥೆಯ  ಮುಖ್ಯಸ್ಥ ಡಾ. ಮಿಟ್ಟೂರ್‌ ಎನ್‌.ಜಗದೀಶ್‌ ಹೇಳಿ ದರು.ಹುಣಸಮಾರನಹಳ್ಳಿಯ ಸರ್‌.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಿರುವ ಜೈವಿಕ ತಂತ್ರಜ್ಞಾನ ಮತ್ತು ‘ಜೈವಿಕ ತಾಂತ್ರಿಕತೆಯ ಇತ್ತೀಚಿನ ಸುಧಾರ ಣೆಗಳು, ಭವಿಷ್ಯದ ಉದ್ಯಮಶೀಲತೆ ಯ ಅವಕಾಶಗಳು’ ಕುರಿತ ಐದು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಭಾರತ ದೇಶವು ಇಂದಿಗೂ ಸಹ ಟೈಫಾಯಿಡ್‌ ಮತ್ತು ಕ್ಷಯರೋಗಗಳ ಕೂಪವಾಗಿದೆ. ಈ ರೋಗಗಳನ್ನು ನಿರ್ಮೂಲನೆ ಮಾಡಲು ಸೂಕ್ತವಾದ ಲಸಿಕೆಗಳನ್ನು ಕಂಡುಹಿಡಿಯದಿದ್ದರೆ, ದೇಶದ ಬೆಳವಣಿಗೆ ಕುಂಠಿತವಾಗಲಿದೆ ಎಂದರು.‘ದೇಶ ಎದುರಿಸುತ್ತಿರುವ ಆಹಾರ ಮತ್ತು ಇಂಧನದ ಕೊರತೆಯನ್ನು ನೀಗಬೇಕಾದರೆ ಜೈವಿಕ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನದ ಬಳಕೆ ಉತ್ತುಂಗದಲ್ಲಿರುವ ಇತ್ತೀಚಿನ ದಿನಗಳಲ್ಲಿ ಇದೇ ತಂತ್ರಜ್ಞಾನಗಳಿಂದ ಆಗುತ್ತಿರುವ ಜಲ, ವಾಯುಮಾ ಲಿನ್ಯದಂತಹ ದುಷ್ಪರಿಣಾ ಮಗಳ ಬಗ್ಗೆ ಅರಿವು ಮೂಡಿಸುವುದು ಬಹುಮುಖ್ಯ’ ಎಂದರು.ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಚ್‌.ಜಿ. ನಾಗೇಂ ದ್ರ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.