‘ಸಾರ್ವಜನಿಕರನ್ನು ವಿನಾಕಾರಣ ಅಲೆಸಬೇಡಿ’

7

‘ಸಾರ್ವಜನಿಕರನ್ನು ವಿನಾಕಾರಣ ಅಲೆಸಬೇಡಿ’

Published:
Updated:

ಚನ್ನಪಟ್ಟಣ:- ‘ಸಮಸ್ಯೆ ಪರಿಹಾರಕ್ಕೆ ಸರ್ಕಾರಿ ಕಚೇರಿಗೆ ಬರುವ ಸಾರ್ವಜ ನಿ ಕರನ್ನು ವಿನಾಕಾರಣ ಅಲೆಸಬಾರದು’ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಧಿಕಾರಿಗಳಿಗೆ ಎಚ್ಚರಿಸಿದರು.ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಭಾರತ್ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿಗಳು ಗ್ರಾಮೀಣ ಪ್ರದೇಶ ದ ಬಡ ಜನತೆಯ ಕಷ್ಟಗಳನ್ನು ಅರಿತು ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.‘ಸೂಕ್ತ ಸಮಯದಲ್ಲಿ ಅರ್ಹ ಫಲಾ ನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿ ಸಬೇಕು. ಆಯಾಯ ಗ್ರಾ.ಪಂ.ಗಳು ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಮುಂ ದಾಗಬೇಕು, ರಸ್ತೆ ಅಭಿವೃದ್ಧಿಯಾದರೆ ಬಸ್ ಸಂಚಾರಕ್ಕೆ ಅನುಕೂಲವಾ ಗುತ್ತದೆ.ಆಗ ಗ್ರಾಮಗಳು ಅಭಿವೃ ದ್ಧಿಯಾಗಲಿವೆ. ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಮುಂದಾದರೆ ಅನುದಾನ ತರಲು ಮುಂದಾಗುತ್ತೇನೆ’ ಎಂದು ಅವರು ತಿಳಿಸಿದರು.‘ಗ್ರಾಮದ ಪಶು ಅಸ್ಪತ್ರೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದು, ಇದು ಶೀಘ್ರವೇ ಮು ಕ್ತಾಯಗೊಳ್ಳಬೇಕು ಎಂದು ತಿಳಿಸಿದ ಯೋಗೇಶ್ವರ್‌, ಪಶು ಆಸ್ಪತ್ರೆ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಒಂದು ಲಕ್ಷ ರೂ. ಬಿಡುಗಡೆ ಮಾಡುವುದಾಗಿ’ ತಿಳಿಸಿ ದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಆರ್.ಮಲವೇ ಗೌಡ ಮಾತನಾಡಿ, ಪಂಚಾಯಿತಿಯ ಅಭಿವೃ ದ್ಧಿ ಕಾಮಗಾರಿ ಹಾಗೂ ಆಡಳಿತ ವೈಖ ರಿಯನ್ನು ವಿವರಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಸುಧಾ ರಾಜು, ವಿರುಪಾಕ್ಷಿಪುರ ಗ್ರಾ.ಪಂ. ಉ ಪಾಧ್ಯಕ್ಷ ವಿಷಕಂಠಯ್ಯ. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರವಿಕು ಮಾರ್, ಪಂಚಾಯಿತಿ ಅಭಿವೃದ್ದಿ ಅಧಿ ಕಾರಿ ಭಾಗ್ಯಲಕ್ಷ್ಮಮ್ಮ, ಕಾರ್ಯದರ್ಶಿ ಎಂ.ಆರ್. ಕೃಷ್ಣ, ಬಿಲ್‌ ಕಲೆಕ್ಟರ್‌ ಪುಟ್ಟ ಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry